ಮೋದಿ ಸರ್ಕಾರ ಡಿಜಿಟಲ್‌ ಕ್ರಾಂತಿಗೆ ವಿಶ್ವಸಂಸ್ಥೆ ಬಹುಪರಾಕ್‌ :80 ಕೋಟಿ ಜನರು ಬಡತನದಿಂದ ಮುಕ್ತ

KannadaprabhaNewsNetwork |  
Published : Aug 03, 2024, 12:37 AM ISTUpdated : Aug 03, 2024, 05:27 AM IST
 ಡಿಜಿಟಲ್‌ ಕ್ರಾಂತಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಡಿಜಿಟಲೀಕರಣ ನೀತಿಯನ್ನು ಬಹುವಾಗಿ ಹಾಡಿಹೊಗಳಿರುವ ವಿಶ್ವಸಂಸ್ಥೆ, ‘ಕಳೆದ 5-6 ವರ್ಷಗಳಲ್ಲಿ ಭಾರತದಲ್ಲಿ ಕಂಡುಬಂದ ಡಿಜಿಟಲ್‌ ಕ್ರಾಂತಿ ಮತ್ತು ಸ್ಮಾರ್ಟ್‌ಫೋನ್‌ ಬಳಕೆಯಿಂದ 80 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಡಿಜಿಟಲೀಕರಣ ನೀತಿಯನ್ನು ಬಹುವಾಗಿ ಹಾಡಿಹೊಗಳಿರುವ ವಿಶ್ವಸಂಸ್ಥೆ, ‘ಕಳೆದ 5-6 ವರ್ಷಗಳಲ್ಲಿ ಭಾರತದಲ್ಲಿ ಕಂಡುಬಂದ ಡಿಜಿಟಲ್‌ ಕ್ರಾಂತಿ ಮತ್ತು ಸ್ಮಾರ್ಟ್‌ಫೋನ್‌ ಬಳಕೆಯಿಂದ 80 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ‘ಆಹಾರ ಮತ್ತು ಕೃಷಿ ಸಂಸ್ಥೆಯ ಹಮ್ಮಿಕೊಂಡಿದ್ದ ‘ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಶೂನ್ಯ ಹಸಿವಿನ ಕಡೆಗೆ ಪ್ರಗತಿಯನ್ನು ವೇಗಗೊಳಿಸುವುದು’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧ್ಯಕ್ಷ ಡೆನ್ನಿಸ್‌ ಫ್ರಾನ್ಸಿಸ್‌ ಈ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ಡಿಜಿಟಲೀಕರಣ ದೇಶವೊಂದರ ತ್ವರಿತ ಅಭಿವೃದ್ಧಿಗೆ ವೇದಿಕೆ ಒದಗಿಸುತ್ತದೆ. ಉದಾಹರಣೆಗೆ ಭಾರತವನ್ನೇ ತೆಗೆದುಕೊಳ್ಳಿ, ಕಳೆದ 5-6 ವರ್ಷಗಳಲ್ಲಿ ಕೇವಲ ಸ್ಮಾರ್ಟ್‌ಫೋನ್‌ ಬಳಸಿಕೊಂಡು ಭಾರತ 80 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ. ಭಾರತದಲ್ಲಿ ಈ ಹಿಂದೆ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕುಗಳ ಸೇವೆ ಹೇಗೆ ಪಡೆಯಬೇಕು ಎನ್ನುವ ಅರಿವಿರಲಿಲ್ಲ. ಅದರೆ ಅಂತಜಾರ್ಲ ಸೇವೆ ಸರ್ವವ್ಯಾಪಿಯಾಗಿರುವ ಕಾರಣ ಮತ್ತು ಜನರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಕಾರಣ, ಇದೀಗ ಹಳ್ಳಿಯ ಜನರು ಕೂಡಾ ಮೊಬೈಲ್‌ಗಳಲ್ಲೇ ವಹಿವಾಟು ನಡೆಸುತ್ತಿದ್ದಾರೆ.

 ಸ್ಮಾರ್ಟ್‌ಫೋನ್‌ ಅವರಿಗೆ ಬ್ಯಾಂಕಿಂಗ್‌ ಸೌಲಭ್ಯವನ್ನು ಹತ್ತಿರವಾಗಿಸಿದೆ. ಬಿಲ್ ಪಾವತಿ, ಹಣ ಸ್ವೀಕಾರದಂತಹ ವಹಿವಾಟುಗಳು ಸ್ಮಾರ್ಟ್‌ಫೋನ್‌ಗಳಲ್ಲಿ ನಡೆಯುತ್ತಿದೆ. ಭಾರತದಂಥ ಇಂಥ ಡಿಜಿಟಲ್‌ ಕ್ರಾಂತಿ ದಕ್ಷಿಣ ಏಷ್ಯಾದ ಇತರೆ ದೇಶಗಳಲ್ಲಿ ಕಂಡುಬಂದಿಲ್ಲ ಎಂದು ಹೇಳಿದರು.ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಕಳೆದ 10 ವರ್ಷದ ಆಡಳಿತದಲ್ಲಿ ಡಿಜಿಟಲೀಕರಣಕ್ಕೆ ಪ್ರಮುಖ ಆದ್ಯತೆ ನೀಡಿದ್ದು, 500 ಮತ್ತು 1000 ಮುಖಬೆಲೆಯ ನೋಟುಗಳ ಅಪನಗದೀಕರಣದ ಬಳಿಕ ದೇಶದಲ್ಲಿ ಡಿಜಿಟಲ್‌ ಪಾವತಿ, ಸ್ವೀಕಾರ ಭಾರೀ ಏರಿಕೆ ಕಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ