40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌

Published : Mar 11, 2026, 06:31 AM IST
money

ಸಾರಾಂಶ

ಚುನಾವಣಾ ಹೊಸ್ತಿಲಿನಲ್ಲಿರುವ ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಹಿಳೆಯರ ಮನ ಗೆಲ್ಲಲು ಮುಂದಾಗಿದ್ದಾರೆ. ರಾಜ್ಯದ 40 ಲಕ್ಷ ಕುಟುಂಬಗಳ ಮಹಿಳಾ ಮುಖ್ಯಸ್ಥರ ಬ್ಯಾಂಕ್‌ ಖಾತೆಗಳಿಗೆ ಸರ್ಕಾರದ ಗ್ಯಾರಂಟಿ ರೀತಿಯ ಯೋಜನೆಯೊಂದರ ಅಡಿ ಮಂಗಳವಾರ ತಲಾ 9,000 ರು. ಜಮಾ ಮಾಡಿದ್ದಾರೆ.

 ಗುವಾಹಟಿ: ಚುನಾವಣಾ ಹೊಸ್ತಿಲಿನಲ್ಲಿರುವ ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಹಿಳೆಯರ ಮನ ಗೆಲ್ಲಲು ಮುಂದಾಗಿದ್ದಾರೆ. ರಾಜ್ಯದ 40 ಲಕ್ಷ ಕುಟುಂಬಗಳ ಮಹಿಳಾ ಮುಖ್ಯಸ್ಥರ ಬ್ಯಾಂಕ್‌ ಖಾತೆಗಳಿಗೆ ಸರ್ಕಾರದ ಗ್ಯಾರಂಟಿ ರೀತಿಯ ಯೋಜನೆಯೊಂದರ ಅಡಿ ಮಂಗಳವಾರ ತಲಾ 9,000 ರು. ಜಮಾ ಮಾಡಿದ್ದಾರೆ.

‘ಒರುನೋಡೈ’ ಎನ್ನುವ ಯೋಜನೆ

ಅಸ್ಸಾಂ ಸರ್ಕಾರವು ‘ಒರುನೋಡೈ’ ಎನ್ನುವ ಯೋಜನೆಯಡಿ ಅರ್ಹ ಮಹಿಳೆಯರ ಖಾತೆಗಳಿಗೆ 9,000 ರು. ವರ್ಗಾಯಿಸಿದೆ. ಒರುನೋಡೈ ಎಂಬುದು ಬಿಜೆಪಿ ಸರ್ಕಾರ 2020ರಲ್ಲಿ ಜಾರಿಗೆ ತಂದ ಯೋಜನೆ. ಇದರ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಅರ್ಹ ಮಹಿಳಾ ಫಲಾನುಭವಿಗೆ ತಿಂಗಳಿಗೆ 1,250 ರು.ಗಳನ್ನು ನೀಡಲಾಗುತ್ತದೆ. ಇದೀಗ 4 ತಿಂಗಳ ಹಣವಾದ ಒಟ್ಟು 5000 ರು.ಗಳನ್ನು ಒಟ್ಟಿಗೆ (ಜನವರಿಯಿಂದ ಏಪ್ರಿಲ್‌ವರೆಗೆ) ಜಮೆ ಮಾಡಲಾಗಿದೆ. ಸದ್ಯದ್ಲೇ ಬೊಹಾಂಗ್‌ ಬಿಹು ಎಂಬ ಹಬ್ಬ ಕೂಡ ಬರುತ್ತಿದ್ದು, ಹಬ್ಬದ ಕೊಡುಗೆಯಾಗಿ 4000 ರು. ಹಾಕಲಾಗಿದೆ. ಹೀಗಾಗಿ 9000 ರು. ಜಮೆ ಮಾಡಲಾಗಿದೆ.

ಇದು ಚುನಾವಣೆಗೆ ಸಂಬಂಧಿಸಿದ್ದಲ್ಲ

ಆದರೆ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿ ‘ಇದು ಚುನಾವಣೆಗೆ ಸಂಬಂಧಿಸಿದ್ದಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ 10 ಸಾವಿರ ರು.ಗಳನ್ನು ಎಲ್ಲ ಮಹಿಳೆಯರ ಖಾತೆಗೆ ಜೆಡಿಯು-ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ಜಮೆ ಮಾಡಿದ್ದವು. ಇದು ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಕಾರಣವಾಗಿತ್ತು. ಪೊಂಗಲ್ ವೇಳೆ ತಮಿಳುನಾಡು ಸಿಎಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಕೂಡ ಇದೇ ರೀತಿ ಮಹಿಳೆಯರ ಖಾತೆಗೆ ಹಣ ಜಮೆ ಮಾಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಂದು ಬೆಂಗಳೂರಿನ ಶೇ.30 ಹೋಟೆಲ್‌ ಬಂದ್‌? LPG 5000ಕ್ಕೆ ಮಾರಾಟ
ಎಲ್‌ಪಿಜಿ ಪೂರೈಕೆ ವ್ಯತ್ಯಯ ಆಗದಂತೆ ಕಠಿಣ ಕಾಯ್ದೆ