ಮೊಜ್ತಬಾ ಸೇರಿ ಇರಾನ್‌ನ 10 ನಾಯಕರ ಮಾಹಿತಿ ಕೊಟ್ರೆ ₹92 ಕೋಟಿ ಬಹುಮಾನ!

KannadaprabhaNewsNetwork |  
Published : Mar 15, 2026, 01:45 AM IST
ಇರಾನ್ | Kannada Prabha

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿ ಹತ್ತು ರಾಜಕಾರಣಿಗಳು ಹಾಗೂ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕದ ಟ್ರಂಪ್‌ ಸರ್ಕಾರ 92 ಕೋಟಿ ರು. ಬಹುಮಾನ ಘೋಷಿಸಿದೆ.

- ಈ 10 ಮಂದಿಯನ್ನು ಉಗ್ರರೆಂದು ಕರೆದ ಅಮೆರಿಕ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿ ಹತ್ತು ರಾಜಕಾರಣಿಗಳು ಹಾಗೂ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕದ ಟ್ರಂಪ್‌ ಸರ್ಕಾರ 92 ಕೋಟಿ ರು. ಬಹುಮಾನ ಘೋಷಿಸಿದೆ.

ಈ ಹತ್ತು ಮಂದಿಯನ್ನು ‘ಇರಾನಿನ ಭಯೋತ್ಪಾದಕರು’ ಎಂದು ಕರೆದಿರುವ ಅಮೆರಿಕ, ಇವರು ವಿಶ್ವಾದ್ಯಂತ ಉಗ್ರವಾದವನ್ನು ಯೋಜಿಸುವ, ಕಾರ್ಯರೂಪಕ್ಕಿಳಿಸುವ ಐಆರ್‌ಜಿಸಿಯ ಭಾಗವಾಗಿದ್ದಾರೆ ಎಂದು ಆರೋಪಿಸಿದೆ.ಯಾರೆಲ್ಲಾ ಇದ್ದಾರೆ ಈ ಪಟ್ಟಿಯಲ್ಲಿ?ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ, ಧರ್ಮಗುರು, ರಾಜಕೀಯ ಮುಖಂಡ ಅಲಿ ಅಸ್ಗರ್‌ ಹಿಜಾಝಿ, ಮಿಲಿಟರಿ ಕಮಾಂಡರ್‌ ಯಾಹ್ಯಾ ರಹೀಂ ಸಫಾವಿ, ಹಿರಿಯ ರಾಜಕಾರಣಿ ಅಲಿ ಲಾರಿಜಾನಿ, ಗುಪ್ತಚರ ಸಚಿವ ಇಸ್ಮಾಯಿಲ್‌ ಖಾತಿಬ್‌, ಸೇನಾ ಕಮಾಂಡರ್‌ ಎಸ್ಕಂದರ್‌ ಮೊಮೆನಿ ಮತ್ತು ಉಳಿದ ನಾಲ್ವರು ಉನ್ನತಾಧಿಕಾರಿಗಳಾದ ರಕ್ಷಣಾ ಸಮಿತಿ ಕಾರ್ಯದರ್ಶಿ, ಪರಮೋಚ್ಚ ನಾಯಕನ ಸಲಹೆಗಾರ, ಐಆರ್‌ಜಿಸಿ ಕಮಾಂಡರ್‌, ಆಫೀಸ್‌ ಆಫ್‌ ದಿ ಸುಪ್ರೀಂ ಲೀಡರ್‌ ಹೆಸರು ಪಟ್ಟಿಯಲ್ಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಧ್ಯಪ್ರಾಚ್ಯ ಬಿಕ್ಕಟ್ಟು ಹಿನ್ನೆಲೆಒಣಹಣ್ಣು ಬೆಲೆ 40% ಹೆಚ್ಚಳ!
ಪರಿಸರ ಹೋರಾಟಗಾರ ವಾಂಗ್ಚುಕ್‌ ಬಂಧಮುಕ್ತ