ನಿನ್ನನ್ನು ಕತ್ತರಿಸಿ ಹಾಕುವೆ: ಕಾಮ್ರಾಗೆ 500 ಬೆದರಿಕೆ ಕರೆ

KannadaprabhaNewsNetwork |  
Published : Mar 26, 2025, 01:35 AM IST
ಕಾಮ್ರಾ | Kannada Prabha

ಸಾರಾಂಶ

ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ದ್ರೋಹಿ ಎಂದಿದ್ದ ವಿವಾದಾತ್ಮಕ ವಿದೂಷ ಕುನಾಲ್‌ ಕಮ್ರಾ ಅವರಿಗೆ ಕನಿಷ್ಠ 500 ಬೆದರಿಕೆ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ದ್ರೋಹಿ ಎಂದಿದ್ದ ವಿವಾದಾತ್ಮಕ ವಿದೂಷ ಕುನಾಲ್‌ ಕಮ್ರಾ ಅವರಿಗೆ ಕನಿಷ್ಠ 500 ಬೆದರಿಕೆ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ, ಅದರಲ್ಲಿ ಜನರು ಅವರನ್ನು ಕೊಲ್ಲುವುದಾಗಿ ಮತ್ತು ತುಂಡು ತುಂಡು ಮಾಡುವುದಾಗಿ (ಕಾಟ್ ದೇಂಗೆ ತುಮ್ಹೆ ) ಬೆದರಿಕೆ ಹಾಕಿದ್ದಾರೆ ಎಂದು ಅವು ಹೇಳಿವೆ. ಕಾಮ್ರಾ ಹೇಳಿಕೆ ಖಂಡಿಸಿ, ಅವರ ಕಾರ್ಯಕ್ರಮ ನಡೆದಿದ್ದ ಸಭಾಂಣವನ್ನು ಶಿಂಧೆ ಅವರ ಶಿವಸೈನಿಕರು ಭಾನುವಾರ ರಾತ್ರಿ ಧ್ವಂಸ ಮಾಡಿದ್ದರು. ಅದಾದ ನಂತರ ಕಾಮ್ರಾ ವಿರುದ್ಧವೂ ಕೇಸು ದಾಖಲಾಗಿತ್ತು.

ಪೊಲೀಸ್ ವಿಚಾರಣೆಗೆ ಕಾಮ್ರಾ ಚಕ್ಕರ್; ಸಮಯ ಕೋರಿಕೆ

ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಯವರನ್ನು ‘ದ್ರೋಹಿ’ ಎಂದು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಿಚಾರನೆಗೆ ವಿದೂಷಕ ಕುನಾಲ್‌ ಕಾಮ್ರಾ ಮಂಗಳವಾರ ಗೈರಾಗಿದ್ದಾರೆ. ಆದರೆ ಹಾಜರಾತಿಗೆ ಹೆಚ್ಚಿನ ಸಮಯ ಕೇಳಿದ್ದಾರೆ.ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಖರ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ ವಿಚಾರಣೆಗೆ ಹಾಜರಾಗಲು ಸಮಯವನ್ನು ಕೋರಿದ್ದಾರೆ. ಸದ್ಯ ಅವರು ಮುಂಬೈನಲ್ಲಿ ಇಲ್ಲ. ಪುದುಚೇರಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಕಾಮ್ರಾ ಸೋಮವಾರ ಟ್ವೀಟ್‌ ಮಾಡಿ ಕ್ಷಮೆ ಕೇಳಲು ನಿರಾಕರಿಸಿದ್ದರು. ಆದರೆ ಈ ವಿಚಾರದಲ್ಲಿ ಕೋರ್ಟು ಹೇಳಿದಂತೆ ನಡೆದುಕೊಳ್ಳುವೆ ಎಂದಿದ್ದರು.

ನನ್ನ ಬಂಗಲೆ ಧ್ವಂಸ ಅಕ್ರಮ, ಕಾಮ್ರಾ ಸಭಾಂಗಣ ಧ್ವಂಸ ಸಕ್ರಮ: ಕಂಗನಾ

ನವದೆಹಲಿ: ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ದ್ರೋಹಿ ಎಂದಿರುವ ವಿದೂಷಕ ಕುನಾಲ್‌ ಕಾಮ್ರಾ ಅವರ ಕಾರ್ಯಕ್ರಮ ಚಿತ್ರೀಕರಿಸಿದ ಸ್ಟುಡಿಯೋ ಧ್ವಂಸವನ್ನು ಸಮರ್ಥಿಸಿಕೊಂಡ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್‌, ‘ಅದನ್ನು ಕಾನೂನುಬದ್ಧವಾಗಿ ಮಾಡಲಾಗಿದೆ’ ಎಂದಿದ್ದಾರೆ. ಆದರೆ, ‘ಈ ಹಿಂದೆ ಠಾಕ್ರೆ ಸರ್ಕಾರ ಇದ್ದಾಗ ಆ ಸರ್ಕಾರ ಮಾಡಿಡ್ದ ನನ್ನಮುಂಬೈ ಬಂಗಲೆ ಧ್ವಂಸ ಆಕ್ರಮ’ ಎಂದಿದ್ದಾರೆ.ಇದೇ ವೇಲೆ, ‘ಕೇವಲ 2 ನಿಮಿಷದ ಖ್ಯಾತಿಗಾಗಿ ಸಾಧಕರನ್ನು ಅಪಹಾಸ್ಯ ಮಾಡುವುದು ಸಲ್ಲದು. ಆಟೋ ಓಡಿಸುತ್ತಿದ್ದ ಶಿಂಧೆ ಸಿಎಂ ಸ್ಥಾನಕ್ಕೇರಿದ್ದರು ಎಂದರೆ ಅವರ ಶ್ರಮ ಗುರುತಿಸಬೇಕು. ಆದರೆ ಏನೂ ಸಾಧಿಸದ ವ್ಯಕ್ತಿ. ಹಾಸ್ಯದ ಹೆಸರಿನಲ್ಲಿ ಜನರನ್ನು ಮತ್ತು ನಮ್ಮ ಸಂಸ್ಕೃತಿಯನ್ನು ದುರುಪಯೋಗಪಡಿಸಿಕೊಳ್ಳುವುದು’ ಸಲ್ಲದು ಎಂದು ಕಾಮ್ರಾಗೆ ಚಾಟಿ ಬೀಸಿದ್ದಾರೆ.

ಕಾಮ್ರಾ ಸುಪಾರಿ ಪಡೆದಂತಿದೆ: ಶಿಂಧೆಮುಂಬೈ: ತಮ್ಮನ್ನು ದ್ರೋಹಿ ಎಂದ ಹಾಸ್ಯಕಲಾವಿದ ಕುನಾಲ್ ಕಾಮ್ರಾ ಟೀಕೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ವಿಡಂಬನೆ ಮಾಡುವಾಗ ಸಭ್ಯತೆ ಇರಬೇಕು, ಇಲ್ಲದಿದ್ದರೆ ಕ್ರಿಯೆಯು ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಕೆಲವರ ವಿರುದ್ಧ ಮಾತನಾಡಲು ಕಾಮ್ರಾ ಸುಪಾರಿ ಪಡೆದಂತಿದೆ’ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಏನು ಹೇಳುತ್ತಾರೆಂಬುದರ ಬಗ್ಗೆ ನಾನು ಗಮನ ಕೊಡುವುದಿಲ್ಲ. ಎಲ್ಲದಕ್ಕೂ ನನ್ನ ಕೆಲಸ ಉತ್ತರ ಕೊಡುತ್ತದೆ. ಆದರೆ ವಿಧ್ವಂಸಕತೆ, ದಾಳಿಯನ್ನು ಸಮರ್ಥಿಸುವುದಿಲ್ಲ’ ಎಂದು ಹೇಳಿದರು.

‘ಇದೇ ವ್ಯಕ್ತಿ ಈ ಹಿಂದೆ ಸುಪ್ರೀಂ ಕೋರ್ಟ್, ಪ್ರಧಾನಿ, ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ಕೆಲವು ಕೈಗಾರಿಕೋದ್ಯಮಿಗಳ ಬಗ್ಗೆಯೂ ಟೀಕಿಸಿದ್ದರು. ಅವರು ಯಾರೋ ಒಬ್ಬರ ಪರವಾಗಿ ಕೆಲಸ ಮಾಡುತ್ತಿರುವಂತಿದೆ’ ಎಂದರು.

PREV

Recommended Stories

ಧರಾಲಿ ಪ್ರವಾಹಕ್ಕೆ ಮೇಘಸ್ಫೋಟ ಅಲ್ಲ, ಹಿಮಕೊಳ ಸ್ಫೋಟ ಕಾರಣ?
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?