ಈ ಬಾರಿ ಜನಗಣತಿಯಲ್ಲಿ ಮನೆಗಳಿಗೆ ಜಿಯೋಟ್ಯಾಗ್‌ ನೀಡಲು ಕೇಂದ್ರ ಸಿದ್ಧತೆ

KannadaprabhaNewsNetwork |  
Published : Sep 03, 2025, 01:02 AM IST
ಜಿಯೋ ಟ್ಯಾಗ್‌  | Kannada Prabha

ಸಾರಾಂಶ

027ರ ಜನಗಣತಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಮನೆ ಮತ್ತು ಕಟ್ಟಡಗಳಿಗೆ ಜಿಯೋ-ಟ್ಯಾಗ್ ಮೂಲಕ ಡಿಜಿಟಲ್ ಗುರುತು ನೀಡಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

 ನವದೆಹಲಿ: 2027ರ ಜನಗಣತಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಮನೆ ಮತ್ತು ಕಟ್ಟಡಗಳಿಗೆ ಜಿಯೋ-ಟ್ಯಾಗ್ ಮೂಲಕ ಡಿಜಿಟಲ್ ಗುರುತು ನೀಡಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕರ್ನಾಟಕದಲ್ಲಿ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆಯಲ್ಲಿ ಮನೆಗಳಿಗೆ ಜಿಯೋ-ಟ್ಯಾಗ್ ನೀಡಲಾಗಿದೆ. ಇ

ಜಿಯೋ-ಟ್ಯಾಗಿಂಗ್ ಎಂದರೆ ಒಂದು ಕಟ್ಟಡಕ್ಕೆ ಅಕ್ಷಾಂಶ ಮತ್ತು ರೇಖಾಂಶವನ್ನು ಆಧರಿಸಿ ವಿಶಿಷ್ಟ ಸ್ಥಳದ ಗುರುತು ನೀಡುವ ಪ್ರಕ್ರಿಯೆ. ಇದನ್ನು ಜಿಯೋಗ್ರಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್ (ಜಿಐಎಸ್‌) ನಕ್ಷೆಯಲ್ಲಿ ದಾಖಲಿಸಲಾಗುತ್ತದೆ. ಇದರಿಂದಾಗಿ ಒಂದು ಮನೆಯ ಖಚಿತ ಸ್ಥಳವನ್ನು ಡಿಜಿಟಲ್ ನಕ್ಷೆಯಲ್ಲಿ ಗುರುತಿಸಬಹುದಾಗಿದೆ.

ಜಿಯೋ-ಟ್ಯಾಗ್‌ನಿಂದ ಏನು ಪ್ರಯೋಜನ?:

ಈ ಹಿಂದೆ ಮನೆಗಳ ನಕ್ಷೆಯನ್ನು ಕೈಯಿಂದ ರಚಿಸಲಾಗುತ್ತಿತ್ತು. ಆದರೆ ಜಿಯೋ-ಟ್ಯಾಗ್‌ನಿಂದ ಸ್ವಯಂಚಾಲಿತವಾಗಿ ಡಿಜಿಟಲ್ ನಕ್ಷೆಗಳು ರಚನೆಯಾಗುತ್ತವೆ. ಇದರಿಂದ ಒಂದು ಪ್ರದೇಶದಲ್ಲಿ ಎಷ್ಟು ಮನೆಗಳು ಮತ್ತು ಕುಟುಂಬಗಳಿವೆ ಎಂಬುದನ್ನು ನಿಖರವಾಗಿ ತಿಳಿಯಬಹುದು. ಗಣತಿದಾರರಿಗೆ ಕೆಲಸವನ್ನು ಸರಿಯಾಗಿ ವಿಂಗಡಿಸಲು ಸಹಾಯವಾಗುವುದರಿಂದ ಜನಗಣತಿಯ ಕೆಲಸವೂ ಸುಲಭವಾಗುತ್ತದೆ. ವಸತಿ ಯೋಜನೆ ಮತ್ತು ಇತರ ಸರ್ಕಾರಿ ಕಾರ್ಯಕ್ರಮಗಳಿಗೆ ಜಿಯೋ-ಟ್ಯಾಗ್‌ನ ದತ್ತಾಂಶಗಳು ನೆರವಾಗುತ್ತವೆ.

ಡಿಜಿಟಲ್ ಜನಗಣತಿ:

2027ರ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿರುತ್ತದೆ. ಮಾಹಿತಿ ಸಂಗ್ರಹಕ್ಕಾಗಿ ಮೊಬೈಲ್ ಆ್ಯಪ್‌ಗಳನ್ನು ಬಳಸಲಾಗುತ್ತದೆ. ಆ್ಯಪ್‌ ಮೂಲಕ ಜನರು ಸ್ವಯಂ-ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.

ಜನಗಣತಿಯ ಆರಂಭಿಕ ಹಂತವಾದ ಮನೆಪಟ್ಟಿ ಕಾರ್ಯಾಚರಣೆ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಗಣತಿಯು 2027ರ ಫೆಬ್ರವರಿಯಿಂದ ಆರಂಭವಾಗಲಿದೆ. ಹಿಮಾಚ್ಛಾದಿತ ಪ್ರದೇಶಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 2026ರ ಸೆಪ್ಟೆಂಬರ್‌ನಲ್ಲಿಯೇ ಗಣತಿ ನಡೆಯಲಿದೆ.

PREV
Read more Articles on

Recommended Stories

ಮೋದಿ ಸ್ನಾನಕ್ಕಾಗಿ ದಿಲ್ಲಿಯಲ್ಲಿ ಫಿಲ್ಟರ್ ವಾಟರ್‌ ಯಮುನಾ ನಿರ್ಮಾಣ : ಆಪ್‌
ಅರುಣಾಚಲ ಗಡಿಯಲ್ಲೇ ಚೀನಾದ ಅತ್ಯಾಧುನಿಕ ವೈಮಾನಿಕ ನಿಲ್ದಾಣ