ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ಅಗ್ನಿವೀರ ಸೈನಿಕ ಸಾವು

KannadaprabhaNewsNetwork |  
Published : Oct 23, 2023, 12:15 AM IST
ಸೈನಿಕ್‌ ಲಕ್ಷ್ಮಣ್‌ | Kannada Prabha

ಸಾರಾಂಶ

ವಿಶ್ವದ ಅತಿ ಎತ್ತರದಲ್ಲಿರುವ ಯುದ್ಧಭೂಮಿ ಎನ್ನಿಸಿಕೊಂಡಿರುವ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಅಗ್ನಿವೀರ ಸೈನಿಕ ಅಕ್ಷಯ್‌ ಲಕ್ಷ್ಮಣ್‌ ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾರೆ.

ನವದೆಹಲಿ: ವಿಶ್ವದ ಅತಿ ಎತ್ತರದಲ್ಲಿರುವ ಯುದ್ಧಭೂಮಿ ಎನ್ನಿಸಿಕೊಂಡಿರುವ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಅಗ್ನಿವೀರ ಸೈನಿಕ ಅಕ್ಷಯ್‌ ಲಕ್ಷ್ಮಣ್‌ ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾರೆ. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಕೊರೆವ ಚಳಿ ಹಾಗೂ ಬಿರುಸಿನ ಗಾಳಿ ಬೀಸುವ 20 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಾವಿನ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಸೇನಾ ಮುಖ್ಯಸ್ಥ ಮನೋಜ್‌ ಪಾಂಡೆ ಸೇರಿ ಹಲವು ಗಣ್ಯರು ಅಕ್ಷಯ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅಕ್ಷಯ್‌ ಅಗ್ನಿವೀರ ಪಡೆಯ ಫೈರ್‌ ಆ್ಯಂಡ್‌ ಫ್ಯೂರಿ ಕೋರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !