ನನ್ನ ಭೇಟಿಗೆ ಆಧಾರ್‌ ಕಡ್ಡಾಯ: ಕಂಗನಾ

KannadaprabhaNewsNetwork |  
Published : Jul 12, 2024, 01:35 AM ISTUpdated : Jul 12, 2024, 05:35 AM IST
ಕಂಗನಾ | Kannada Prabha

ಸಾರಾಂಶ

ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಾಣಾವತ್‌, ಯಾರಾದರೂ ತಮ್ಮನ್ನು ಭೇಟಿ ಆಗಬೇಕಿದ್ದರೆ ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ ಎಂದಿದ್ದಾರೆ.

ಮಂಡಿ: ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಾಣಾವತ್‌, ಯಾರಾದರೂ ತಮ್ಮನ್ನು ಭೇಟಿ ಆಗಬೇಕಿದ್ದರೆ ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ ಎಂದಿದ್ದಾರೆ. ಭೇಟಿ ಆಗಬೇಕಾದವೂ ಮಂಡಿ ಕ್ಷೇತ್ರದ ಮತದಾರರೇ ಆಗಿದ್ದರೂ ಭೇಟಿಗೆ ಬರುವ ವೇಳೆ ಅವರು ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ ಎಂದು ನಟಿ, ಸಂಸದೆ ಕಂಗನಾ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ.

ಅಮೇಠಿ ಸೋಲು ಹಿನ್ನೆಲೆ ದೆಹಲಿ ಸರ್ಕಾರಿ ಬಂಗಲೆ ತೊರೆದ ಸ್ಮೃತಿ ಇರಾನಿ

ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ದೆಹಲಿಯ ಲ್ಯೂಟೆನ್ಸ್‌ 28 ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ಬಂಗಲೆ ಖಾಲಿ ಮಾಡಿದ್ದಾರೆ. ನಿಯಮಗಳ ಪ್ರಕಾರ ಹೊಸ ಸರ್ಕಾರ ರಚನೆಯಾದ ತಿಂಗಳಲ್ಲಿ ಮಾಜಿ ಸಚಿವರು, ಮಾಜಿ ಸಂಸದರು ತಮಗೆ ನೀಡಿದ್ದ ಸರ್ಕಾರಿ ಬಂಗಲೆ ತೊರೆಯಬೇಕು. ಅದರಂತೆ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಸೋತಿದ್ದ ಸ್ಮೃತಿ ,ಬಂಗಲೆ ತೊರೆದಿದ್ದಾರೆ. 2019ರಲ್ಲಿ ರಾಹುಲ್‌ ಗಾಂಧಿಯನ್ನು ಸೋಲಿಸಿ ಅಮೇಠಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದ ಸ್ಮೃತಿ ಇರಾನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದರು.

ಅಪ್ಪ-ಅಮ್ಮ, ಅತ್ತೆ-ಮಾವನ ಜೊತೆ ಕಾಲಕಳೆಯಲು ನೌಕರರಿಗೆ 2 ದಿನ ರಜೆ!

ಗುವಾಹಟಿ: ಅಸ್ಸಾಂ ರಾಜ್ಯದ ಸರ್ಕಾರಿ ನೌಕರರು ತನ್ನ ಪೋಷಕರು ಅಥವಾ ಅತ್ತೆ-ಮಾವಂದಿರ ಜೊತೆ ಸಮಯ ಕಳೆಯಲೆಂದು ನವೆಂಬರ್‌ನಲ್ಲಿ ಎರಡು ದಿನಗಳ ಮಟ್ಟಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಿಸಿದೆ. ಅಪ್ಪ-ಅಮ್ಮ ಅಥವಾ ಅತ್ತೆ- ಮಾವ ಇಲ್ಲದ ನೌಕರರಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ‘ರಾಜ್ಯ ಸರ್ಕಾರಿ ನೌಕರರು ತಮ್ಮ ಅತ್ತೆ-ಮಾವಂದಿರರು ಅಥವಾ ಪೋಷಕರ ಜೊತೆಗೆ ಸಮಯ ಕಳೆಯಲು ನವೆಂಬರ್‌ 6 ಮತ್ತು 8 ರಂದು ವಿಶೇಷ ರಜೆ ನೀಡಿದೆ. ಈ ವಿಶೇಷ ರಜೆಯನ್ನು ವಯಸ್ಸಾದ ಪೋಷಕರು ಅಥವಾ ಅತ್ತೆ-ಮಾವಂದಿರೊಂದಿಗೆ ಸಮಯ ಕಳೆಯಲು ಮಾತ್ರ ಬಳಸಬೇಕೆ ಹೊರತು ತಮ್ಮ ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ’ ಎಂದು ಟ್ವೀಟ್‌ ಮಾಡಿದೆ. 

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ