ಶಬರಿಮಲೆ ದ್ವಾರಪಾಲಕ ಮೂರ್ತಿ ಮತ್ತು ಗರ್ಭಗುಡಿ ದ್ವಾರದ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರದ ಖ್ಯಾತಿಯ ಜಯರಾಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ.
ಕೊಚ್ಚಿ: ಶಬರಿಮಲೆ ದ್ವಾರಪಾಲಕ ಮೂರ್ತಿ ಮತ್ತು ಗರ್ಭಗುಡಿ ದ್ವಾರದ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರದ ಖ್ಯಾತಿಯ ಜಯರಾಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ.
ಚೆನ್ನೈನಲ್ಲಿ ಎಸ್‌ಐಟಿ ಎದುರು ಹಾಜರಾಗಿ ವಿಚಾರಣೆ
ಕೆಲ ದಿನಗಳ ಹಿಂದೆ ಜಯರಾಂ ಅವರು ಚೆನ್ನೈನಲ್ಲಿ ಎಸ್‌ಐಟಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದರು. ಪೊಟ್ಟಿ ಮತ್ತು ಜಯರಾಂ ಒಟ್ಟಿಗೆ ಚೆನ್ನೈನಲ್ಲಿ ಕವಚಗಳಿಗೆ ಪೂಜೆ ಸಲ್ಲಿಸಿದ್ದ ವಿಡಿಯೋವೊಂದು ಬಹಿರಂಗವಾದ ನಂತರ ತನಿಖಾ ಸಂಸ್ಥೆಗಳು ಅವರ ಬೆನ್ನುಬಿದ್ದಿವೆ.
ಪೊಟ್ಟಿಗೂ ಇ.ಡಿ. ಬಿಸಿ?:
ಮತ್ತೊಂದೆಡೆ ಪ್ರಕರಣದಲ್ಲಿ ಬಂಧಿತನಾಗಿ ಗುರುವಾರವಷ್ಟೇ ಜಾಮೀನು ಮೇಲೆ ಬಿಡುಗಡೆ ಆದ ಪ್ರಮುಖ ಆರೋಪಿ, ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಗೂ ಇ.ಡಿ. ಸಮನ್ಸ್ ನೀಡಲಿದೆ ಎಂದು ಮೂಲಗಳು ಹೇಳಿವೆ.

