ತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿ, ಬಳಿಕ ಶವವನ್ನು ಬಾತ್‌ರೂಂನಲ್ಲಿ ಗುಂಡಿ ಅಗೆದು ಹೂತಿಟ್ಟ ಮತ್ತು ಅದರ ಮೇಲೆ ಟೈಲ್ಸ್ ಹಾಕಿಸಿ ಕಳ್ಳಾಟ ಆಡಿದ ಭೀಕರ ಘಟನೆಯೊಂದು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಪಾಯಸದಲ್ಲಿ ನಿದ್ದೆ ಮಾತ್ರೆ ಪತಿ ನಿದ್ದೆ ಮಾಡಿದ ಬಳಿಕ ಕೃತ್ಯ
ಶವ ಹೂತು ಮನೆಯಲ್ಲೇ 45 ದಿನ ವಾಸ : ಆಗ್ರಾದಲ್ಲಿ ಘಟನೆಆಗ್ರಾ: ಪತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿ, ಬಳಿಕ ಶವವನ್ನು ಬಾತ್‌ರೂಂನಲ್ಲಿ ಗುಂಡಿ ಅಗೆದು ಹೂತಿಟ್ಟ ಮತ್ತು ಅದರ ಮೇಲೆ ಟೈಲ್ಸ್ ಹಾಕಿಸಿ ಕಳ್ಳಾಟ ಆಡಿದ ಭೀಕರ ಘಟನೆಯೊಂದು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮೇ 18ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ರೂಬಿ ಎಂಬಾಕೆಯನ್ನು ಬಂಧಿಸಲಾಗಿದೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ.ದಿಢೀರ್ ನಾಪತ್ತೆ:
ಆಗ್ರಾದ ಸಿಕಂದರಾ ಪ್ರದೇಶದಲ್ಲಿ ಸುರೇಂದ್ರ ಶರ್ಮಾ (44) ತಮ್ಮ ಪತ್ನಿ ರೂಬಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ. ತಂದೆಯ ಪಿಂಚಣಿ ಹಣದಲ್ಲಿ ಒಂದಷ್ಟು ಭಾಗವನ್ನು ಸೋದರನಿಗೆ ನೀಡಿ ಬಾಕಿ ಹಣದಲ್ಲಿ ಸುರೇಂದ್ರ ಶರ್ಮಾ ಜೀವನ ನಡೆಸುತ್ತಿದ್ದರು. ಈ ನಡುವೆ ಮೇ 26ರಂದು ಪತಿ ನಾಪತ್ತೆಯಾಗಿದ್ದಾರೆ ಎಂದು ರೂಬಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಕಡೆ ಹುಡುಹಾಟ ನಡೆಸಿದ್ದರು. ಆದರೆ ಎಲ್ಲೂ ಶರ್ಮಾರ ಸುಳಿವು ಸಿಕ್ಕಿರಲಿಲ್ಲ.ಅನುಮಾನ:
ಈ ನಡುವೆ ಪತಿಯ ನಾಪತ್ತೆ ಕುರಿತ ವಿಚಾರಣೆ ವೇಳೆ ರೂಬಿಯನ್ನು ವಿಚಾರಣೆ ನಡೆಸಿದಾಗ ಆಕೆ ಭಿನ್ನಭಿನ್ನ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ವಿಚಾರಣೆ ಮಾಡಿದ ವೇಳೆ ಆಕೆ ಹತ್ಯೆಯ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ಆಕೆ ಕಾರಣವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಪೊಲೀಸರು ಹತ್ಯೆಗೆ ಕಾರಣ ಮತ್ತು ಇದರಲ್ಲಿ ಬೇರೆಯವರ ಕೈವಾಡದ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.ಪಾಯಸ ಕೊಟ್ಟು ಹತ್ಯೆ:
ಹಣದ ವಿಷಯಕ್ಕೆ ಆಗಾಗ ಪತಿ- ಪತ್ನಿ ನಡುವೆ ಪದೇ ಜಗಳವಾಗುತ್ತಿತ್ತು. ಈ ನಡುವೆ ಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೂಬಿ ಅದಕ್ಕೆಂದೇ ಮನೆಯಲ್ಲಿ ಪಾಯಸ ಮಾಡಿ ಅದಕ್ಕೆ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಳು. ಅದನ್ನು ಕುಡಿದು ಪತಿ ನಿದ್ದೆ ಮಾಡಿದ ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಿದ್ದಳು. ಬಳಿಕ ಮನೆಯ ಬಾತ್‌ರೂನಲ್ಲಿ ಗುಂಡಿ ತೆಗೆದು ಅದರಲ್ಲಿ ಶವ ಹಾಕಿ ಅದರ ಮೇಲೆ ಹೊಸ ಟೈಲ್ಸ್ ಹಾಕಿಸಿದ್ದಳು. ಈ ವೇಳೆ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿದ್ದಳು. ಹೀಗಾಗಿ ಮಕ್ಕಳಿಗೂ ಅನುಮಾನ ಬಂದಿರಲಿಲ್ಲ.