ಮೋದಿ ಸ್ನಾನಕ್ಕಾಗಿ ದಿಲ್ಲಿಯಲ್ಲಿ ಫಿಲ್ಟರ್ ವಾಟರ್‌ ಯಮುನಾ ನಿರ್ಮಾಣ : ಆಪ್‌

Published : Oct 28, 2025, 06:48 AM IST
Narendra Modi

ಸಾರಾಂಶ

ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸಲಾಗಿರುವ ಛಟ್‌ ಪೂಜೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯ ಯಮುನಾ ನದಿ ತಟದಲ್ಲಿ ಸ್ನಾನ ಮಾಡಲಿದ್ದು, ಈ ವಿಷಯವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸಲಾಗಿರುವ ಛಟ್‌ ಪೂಜೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯ ಯಮುನಾ ನದಿ ತಟದಲ್ಲಿ ಸ್ನಾನ ಮಾಡಲಿದ್ದು, ಈ ವಿಷಯವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಯಮುನಾ ನದಿ ಪಕ್ಕದಲ್ಲಿ ಕೆರೆ

ಭಾರೀ ಕಲುಷಿತವಾಗಿರುವ ಯಮುನಾ ನದಿಯಿಂದ ಮೋದಿ ಅವರಿಗೆ ಹಾನಿ ತಪ್ಪಿಸುವ ನಿಟ್ಟಿನಲ್ಲಿ ದೆಹಲಿಯ ಬಿಜೆಪಿ ಸರ್ಕಾರ, ಯಮುನಾ ನದಿ ಪಕ್ಕದಲ್ಲಿ ಕೆರೆಯೊಂದನ್ನು ನಿರ್ಮಿಸಿ ಅದರಲ್ಲಿ ಫಿಲ್ಟರ್‌ ವಾಟರ್‌ ತುಂಬಿಸಿದೆ ಎಂದು ವಿಪಕ್ಷ ಆಪ್‌ ಆರೋಪಿಸಿದಸೆ. ಆದರೆ ಇದನ್ನು ಅಲ್ಲಗಳೆದಿರುವ ಬಿಜೆಪಿ, ಇದು ರಾಜಕೀಯ ಹತಾಶೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶುದ್ಧ ನೀರು ತುಂಬಿಸಿ, ಪ್ರಧಾನಿ ಮೋದಿ ಅವರಿಗೆ ಛಟ್‌ ಪೂಜೆ ಮಾಡಿ ಮುಳುಗು ಹಾಕಲು ಅನುಕೂಲ

‘ಯಮುನಾ ನದಿಯ ಬಳಿ ಇರುವ ವಾಸುದೇವ ಘಾಟ್‌ನಲ್ಲಿ ಶುದ್ಧ ನೀರು ತುಂಬಿಸಿ, ಪ್ರಧಾನಿ ಮೋದಿ ಅವರಿಗೆ ಛಟ್‌ ಪೂಜೆ ಮಾಡಿ ಮುಳುಗು ಹಾಕಲು ಅನುಕೂಲ ಮಾಡಲಾಗಿದೆ. ಸಾಮಾನ್ಯ ಜನರಿಗೆ ಕೊಳಕು ತುಂಬಿದ ಯಮುನೆಯನ್ನು ನೀಡಲಾಗಿದೆ’ ಎಂದು ಆಪ್‌ ಎಕ್ಸ್‌ನಲ್ಲಿ ಆರೋಪಿಸಿದೆ. ಜತೆಗೆ, ಕೃತಕವಾಗಿ ನಿರ್ಮಿಸಲಾಗಿದೆ ಎನ್ನಲಾದ ಘಾಟ್‌ಅನ್ನು ಲೈವ್‌ನಲ್ಲಿ ತೋರಿಸಿದ ಆಪ್‌ನ ದೆಹಲಿ ಘಟಕದ ಮುಖ್ಯಸ್ಥ ಸೌರಭ್‌ ಭಾರದ್ವಾಜ್‌, ಈ ಬಗ್ಗೆ ಪತ್ರಿಕಾಗೋಷ್ಠಿಯನ್ನೂ ನಡೆಸಿ, ‘ಬಿಜೆಪಿ ತನ್ನ ಸುಳ್ಳುಗಳನ್ನು ಮುಚ್ಚಿಹಾಕಲು ಹೊಸ ತಂತ್ರಗಳನ್ನು ಅನುಸರಿಸುತ್ತಿದೆಯೇ ಹೊರತು, ಮಾಲಿನ್ಯ ತಡೆಗಟ್ಟಲು ಯತ್ನಿಸುತ್ತಿಲ್ಲ. ದೆಹಲಿಗೆ ಕುಡಿಯುವ ನೀರು ಪೂರೈಸುವ ವಜೀರಾಬಾದ್‌ನ ಶುದ್ಧೀಕರಣ ಘಟಕದಿಂದ ಇಲ್ಲಿಗೆ ನೀರು ತುಂಬಿಸಲಾಗಿದೆ. ಅತ್ತ ರಾಜ್ಯದ ಗದ್ದೆಗಳಿಗೆ ಹೋಗುತ್ತಿದ್ದ ನೀರನ್ನೂ ನಿಲ್ಲಿಸಲಾಗಿದೆ. ಈ ಮೂಲಕ, ಬಿಹಾರಿಗಳ ಆರೋಗ್ಯ ಮತ್ತು ನಂಬಿಕೆಯನ್ನು ಅಪಾಯಕ್ಕೆ ಒಡ್ಡಿದ್ದಾರೆ’ ಎಂದು ಆಪಾದಿಸಿದ್ದಾರೆ.

PREV
Read more Articles on

Recommended Stories

ಅರುಣಾಚಲ ಗಡಿಯಲ್ಲೇ ಚೀನಾದ ಅತ್ಯಾಧುನಿಕ ವೈಮಾನಿಕ ನಿಲ್ದಾಣ
ಮೋಂಥಾ ಚಂಡಮಾರುತ ದಾಳಿ : ಭಾರೀ ಬಿರುಗಾಳಿ ಸಹಿತ ಮಳೆ