ಆಫ್ಘನ್‌ ಮೇಲೆ ಪಾಕ್‌ ದಾಳಿ : ಸಾವಿನ ಸಂಖ್ಯೆ 331ಕ್ಕೇರಿಕೆ

KannadaprabhaNewsNetwork |  
Published : Mar 01, 2026, 02:15 AM IST
Afghanistan Pakistan

ಸಾರಾಂಶ

ಅಫ್ಘಾನಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಹಾಗೂ ವೈಮಾನಿಕ ದಾಳಿಯಲ್ಲಿ 331 ಆಫ್ಘನ್‌ ತಾಲಿಬಾನಿಗಳು ಹಾಗೂ ಅವರ ಸಹಯೋಗಿ ಉಗ್ರರ ಗುಂಪು ಹತರಾಗಿದ್ದಾರೆ, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

 ಇಸ್ಲಾಮಾಬಾದ್‌: ಅಫ್ಘಾನಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಹಾಗೂ ವೈಮಾನಿಕ ದಾಳಿಯಲ್ಲಿ 331 ಆಫ್ಘನ್‌ ತಾಲಿಬಾನಿಗಳು ಹಾಗೂ ಅವರ ಸಹಯೋಗಿ ಉಗ್ರರ ಗುಂಪು ಹತರಾಗಿದ್ದಾರೆ, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

‘ಘಜಬ್‌ ಲಿಲ್‌-ಹಾ’ ಕಾರ್ಯಾಚರಣೆ

ಆಫ್ಘಾನಿಸ್ತಾನದ ವಿರುದ್ಧ ಪಾಕ್‌ ಸೇನೆ ‘ಘಜಬ್‌ ಲಿಲ್‌-ಹಾ’ ಕಾರ್ಯಾಚರಣೆ ಆರಂಭಿಸಿದ್ದು, ಅದರಂತೆ ಆಫ್ಘನ್‌ ಸೇನೆಯ 104 ಮಿಲಿಟರಿ ಪೋಸ್ಟ್‌ಗಳನ್ನು ನಾಶಮಾಡಿ, 22 ಬಾರ್ಡರ್‌ ಪೋಸ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ 163 ಟ್ಯಾಂಕ್‌ಗಳು, ಯುದ್ಧವಾಹನಗಳನ್ನು ನಷ್ಟಮಾಡಲಾಗಿದೆ. ಇದೇ ವೇಳೆ ಅಫ್ಘಾನಿಸ್ತಾನದ 37 ಕಡೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನಿ ತಾಲಿಬಾನ್‌ ಉಗ್ರರ ನೆಲೆಗಳ ಮೇಲೆ ಪಾಕಿಸ್ತಾನ ಭಾನುವಾರ ನಡೆಸಿದ ವಾಯುದಾಳಿಗೆ ಪ್ರತಿಯಾಗಿ ಗುರುವಾರ ರಾತ್ರಿ ಆಫ್ಘನ್‌ ಸೇನೆ ಪಾಕ್ ಗಡಿಯುದ್ದಕ್ಕೂ ಪ್ರತಿದಾಳಿ ನಡೆಸಿತ್ತು. ಇದರಿಂದ ರೊಚ್ಚಿಗೆದ್ದ ಪಾಕಿಸ್ತಾನ ಕಾಬೂಲ್‌, ಕಂದಹಾರ್‌ ಸೇರಿ ಅಫ್ಘಾನಿಸ್ತಾನದ ಹಲವಡೆ ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು.

ಪಾಕ್‌-ಆಫ್ಘನ್‌ ಸಮರದಲ್ಲಿ ಮಧ್ಯಸ್ಥಿಕೆಗೆ ಟ್ರಂಪ್‌ ನಕಾರ

ವಾಷಿಂಗ್ಟನ್‌: ವಿಶ್ವದ ಹಲವು ಸಮರಗಳನ್ನು ನಿಲ್ಲಿಸಿದ್ದು ತಾನು ಎಂದು ಜಂಭ ಕೊಚ್ಚಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದಾರೆ ಮತ್ತು ಇಸ್ಲಾಮಾಬಾದ್‌ನ ‘ಶ್ರೇಷ್ಠ ಪ್ರಧಾನಿ ಹಾಗೂ ಜನರಲ್’ ಅವರನ್ನು ಹೊಂದಿದೆ ಎಂದು ಹೊಗಳಿದ್ದಾರೆ. 

ಈ ಮೂಲಕ ಪರಿಸ್ಥಿತಿಯನ್ನು ಅವರೇ ನಿಭಾಯಿಸಲಿ ಎಂಬ ಸಂದೇಶ ನೀಡಿದ್ದಾರೆ.ಅಫ್ಘಾನಿಸ್ತಾನದ ಮೇಲಿನ ದಾಳಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಶ್ಲಾಘಿಸಿದರು .‘ನಾನು ಮಧ್ಯಪ್ರವೇಶಿಸಬಹುದಿತ್ತು. ಆದರೆ ಪಾಕ್‌ಗೆ ಒಬ್ಬ ಉತ್ತಮ ಪ್ರಧಾನಿ ಇದ್ದಾರೆ, ಅಲ್ಲಿ ಒಬ್ಬ ಉತ್ತಮ ಜನರಲ್ ಇದ್ದಾರೆ. ನಾನು ನಿಜವಾಗಿಯೂ ಅವರಿಬ್ಬರನ್ನೂ ಗೌರವಿಸುತ್ತೇನೆ ಪಾಕಿಸ್ತಾನ ಅದ್ಭುತವಾಗಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾನು ಭಾವಿಸುತ್ತೇನೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಸೇರಿ 3 ವಿಧೇಯಕ ಮಂಡನೆಗೆ ಕ್ಷಣಗಣನೆ
ಹೋರ್ಮುಜ್‌ನಲ್ಲಿ ಇದೀಗ ಸಂಪೂರ್ಣ ನಿರ್ಬಂಧ ಜಾರಿ