ಬೇಸಿಗೆಯಲ್ಲಿ ಉ.ಕರ್ನಾಟಕದಲ್ಲಿ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

KannadaprabhaNewsNetwork |  
Published : Mar 01, 2026, 02:15 AM IST
Heatwave

ಸಾರಾಂಶ

ದೇಶ ಬೇಸಿಗೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಮಾರ್ಚ್‌ನಿಂದ ಮೇ ವರೆಗೆ ಸಾಮಾನ್ಯಕ್ಕಿಂತ ಅತಿಹೆಚ್ಚು ತಾಪಮಾನ ದಾಖಲಾಗಲಿದೆ ಹಾಗೂ ಬಿಸಿಗಾಳಿ (ಹೀಟ್‌ ವೇವ್‌) ಬೀಸುವ ಸಾಧ್ಯತೆ ಇದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವದೆಹಲಿ: ದೇಶ ಬೇಸಿಗೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಮಾರ್ಚ್‌ನಿಂದ ಮೇ ವರೆಗೆ ಸಾಮಾನ್ಯಕ್ಕಿಂತ ಅತಿಹೆಚ್ಚು ತಾಪಮಾನ ದಾಖಲಾಗಲಿದೆ ಹಾಗೂ ಬಿಸಿಗಾಳಿ (ಹೀಟ್‌ ವೇವ್‌) ಬೀಸುವ ಸಾಧ್ಯತೆ ಇದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕ, ಉತ್ತರ ತಮಿಳುನಾಡು ಆಪತ್ತನ್ನು ಎದುರಿಸಲಿವೆ

ಉತ್ತರ ಕರ್ನಾಟಕ, ಉತ್ತರ ತಮಿಳುನಾಡು, ಪಶ್ಚಿಮ ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ದಕ್ಷಿಣ ಮತ್ತು ಪೂರ್ವ ಮಹಾರಾಷ್ಟ್ರ, ಪೂರ್ವ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗಾತಟ, ಒಡಿಶಾ, ಛತ್ತೀಸ್‌ಗಢ, ತೆಲಂಗಾಣ, ಆಂಧ್ರಪ್ರದೇಶದ ಭಾಗಗಳು ಈ ಆಪತ್ತನ್ನು ಎದುರಿಸಲಿವೆ ಎಂದು ಅದು ಹೇಳಿದೆ. 

ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ

ಮಾರ್ಚ್‌ನಲ್ಲಿ ದೇಶಾದ್ಯಂತ ಸರಾಸರಿ ಮಳೆಯಾಗುವ ಕಾರಣ ಆ ತಿಂಗಳಲ್ಲಿ, ಈಶಾನ್ಯ, ಪೂರ್ವ ಮತ್ತು ಪಶ್ಚಿಮ ಹಿಮಾಲಯ ಪ್ರದೇಶದ ಕೆಲವು ಭಾಗಗಳನ್ನು ಹೊರತುಪಡಿಸಿ, ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೊಲಿವಿಯಾದಲ್ಲಿ ಸರಕು ಸಾಗಣೆ ವಿಮಾನ ಪತನ : 15 ಮಂದಿ ಸಾವು
ಆಫ್ಘನ್‌ ಮೇಲೆ ಪಾಕ್‌ ದಾಳಿ : ಸಾವಿನ ಸಂಖ್ಯೆ 331ಕ್ಕೇರಿಕೆ