ಮುಂದಿನ ಪೀಳಿಗೆಯನ್ನು ಮುನ್ನಡೆಸಿ: ವೈಭವ್‌ಗೆ ಕೊಹ್ಲಿ!

KannadaprabhaNewsNetwork |  
Published : Apr 30, 2025, 12:38 AM IST
ವೈಭವ್  | Kannada Prabha

ಸಾರಾಂಶ

ಐಪಿಎಲ್‌ನಲ್ಲಿ 35 ಎಸೆತದಲ್ಲಿ ಶತಕ ಸಿಡಿಸಿದ ರಾಜಸ್ಥಾನ ರಾಯಲ್ಸ್‌ನ ವೈಭವ್‌ ಸೂರ್ಯವಂಶಿ ಆಟವನ್ನು ಇಡೀ ಕ್ರಿಕೆಟ್‌ ಲೋಕ ಕೊಂಡಾಡಿದೆ.

-14ರ ಬಾಲಕನ ಆಟಕ್ಕೆ ಮನಸೋತ ಕ್ರಿಕೆಟ್‌ ಜಗತ್ತು । ಸಚಿನ್‌, ಕೊಹ್ಲಿ, ಯುವಿ ಸೇರಿ ಅನೇಕರಿಂದ ಮೆಚ್ಚುಗೆನವದೆಹಲಿ: ಐಪಿಎಲ್‌ನಲ್ಲಿ 35 ಎಸೆತದಲ್ಲಿ ಶತಕ ಸಿಡಿಸಿದ ರಾಜಸ್ಥಾನ ರಾಯಲ್ಸ್‌ನ ವೈಭವ್‌ ಸೂರ್ಯವಂಶಿ ಆಟವನ್ನು ಇಡೀ ಕ್ರಿಕೆಟ್‌ ಲೋಕ ಕೊಂಡಾಡಿದೆ. ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್, ‘ವೈಭವ್‌ನ ನಿರ್ಭೀತ ಆಟ, ಬ್ಯಾಟ್‌ ಬೀಸುವ ವೇಗ, ಮುಂಚಿತವಾಗಿ ಚೆಂಡಿನ ಲೆಂಥ್‌ ಗ್ರಹಿಸಿಕೊಂಡು ಆಡುವ ರೀತಿ, ಚೆಂಡನ್ನು ಬೌಂಡರಿ ಹೊರಕ್ಕೆ ಅಟ್ಟುವ ಪರಿ ಎಲ್ಲವೂ ಬಹಳ ಸೊಗಸಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ‘ಒಂದೆಡೆ ಸಾರ್ಮಥ್ಯ ಹಾಗೂ ಮತ್ತೊಂದೆಡೆ ವೈಭವ್‌ ಸೂರ್ಯವಂಶಿ. ಮುಂದಿನ ಪೀಳಿಗೆಯನ್ನು ಮುನ್ನಡೆಸಿರಿ. ದೇವರು ನಿಮಗೆ ಒಳ್ಳೇದು ಮಾಡಲಿ’ ಎಂದು ಬರೆದುಕೊಂಡಿದ್ದಾರೆ. ಯುವರಾಜ್‌ ಸಿಂಗ್‌, ‘ನಿಮಗೆ 14 ವರ್ಷ ವಯಸ್ಸಿದ್ದಾಗ ಏನು ಮಾಡುತ್ತಿದ್ದಿರಿ?, ಈ ಬಾಲಕ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸುತ್ತಿದ್ದಾನೆ. ಈತನ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ’ ಎಂದು ಟ್ವೀಟ್‌ ಮಾಡಿದ್ದಾರೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌, ಮೊಹಮದ್‌ ಶಮಿ, ಖ್ಯಾತ ವೀಕ್ಷಕ ವಿವರಣೆಗಾರ ಇಯಾನ್‌ ಬಿಶಪ್‌ ಸೇರಿ ಅನೇಕರು ವೈಭವ್‌ರನ್ನು ಕೊಂಡಾಡಿದ್ದಾರೆ.

----

ವೈಭವ್‌ಗೆ ₹10 ಲಕ್ಷ ಬಹುಮಾನ

ಘೋಷಿಸಿದ ಬಿಹಾರ ಸಿಎಂ ನಿತೇಶ್‌

ವೈಭವ್‌ ಸೂರ್ಯವಂಶಿಗೆ ಬಿಹಾರ ಮುಖ್ಯಮಂತ್ರಿ ನಿತೇಶ್‌ ಕುಮಾರ್ ₹10 ಲಕ್ಷ ಬಹುಮಾನ ಘೋಷಿಸಿದ್ದಾರೆ. ‘ಕಳೆದ ವರ್ಷ ವೈಭವ್‌ ಹಾಗೂ ಅವರ ತಂದೆಯನ್ನು ಭೇಟಿಯಾಗಿದ್ದೆ. ದಾಖಲೆಯ ಶತಕದ ಬಳಿಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದೆ. ಈತ ಭವಿಷ್ಯದ ಸ್ಟಾರ್‌ ಆಗಲಿ’ ಎಂದು ತಿಳಿಸಿದ್ದಾರೆ. ----ದ್ರಾವಿಡ್‌ಗೆ ಎಷ್ಟು ಧನ್ಯವಾದ

ಹೇಳಿದ್ರೂ ಸಾಲದು: ವೈಭವ್ ತಂದೆನವದೆಹಲಿ: ವೈಭವ್ ಸೂರ್ಯವಂಶಿ ತಮ್ಮ ಸಾಧನೆಯನ್ನು ಹೆತ್ತವರಿಗೆ ಸಮರ್ಪಿಸಿದ್ದಾರೆ. ಈ ನಡುವೆ ವೈಭವ್ ತಂದೆ ಸಂಜೀವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಬಿಹಾರ ಕ್ರಿಕೆಟ್‌ ಮತ್ತು ರಾಜಸ್ಥಾನ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದಿದ್ದಾರೆ. ಈ ಕುರಿತಾದ ವಿಡಿಯೋವೊಂದನ್ನು ಬಿಹಾರ ಕ್ರಿಕೆಟ್‌ ಸಂಸ್ಥೆ ಹಂಚಿಕೊಂಡಿದ್ದು, ‘ ನಮ್ಮ ಗ್ರಾಮ , ಬಿಹಾರ, ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ವೈಭವ್‌ಗೆ ತರಬೇತಿ ನೀಡಿದ ರಾಜಸ್ಥಾನ ರಾಯಲ್ಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ವೈಭವ್ ಅವರ ಆಟ ಸುಧಾರಿಸಿದ್ದಕ್ಕಾಗಿ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್‌ ಮತ್ತು ಉಳಿದ ಸಹಾಯಕ ಸಿಬ್ಬಂದಿಗೆ ಧನ್ಯವಾದ . ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವಕಾಶ ನೀಡಿದ್ದಕ್ಕಾಗಿ ಬಿಹಾರ ಕ್ರಿಕೆಟ್‌ ಸಂಸ್ಥೆಗೆ ಧನ್ಯವಾದ ’ ಎಂದಿದ್ದಾರೆ,.-------ತಂದೆ, ತಾಯಿಯ ಪರಿಶ್ರಮದ ಫಲ

ನಾನು ಏನಾಗಿದ್ದೇನೋ ಅದಕ್ಕೆ ನನ್ನ ಹೆತ್ತವರೇ ಕಾರಣ. ನಮ್ಮ ತಾಯಿ ಪ್ರತಿ ದಿನ ರಾತ್ರಿ 11ಕ್ಕೆ ಮಲಗಿ, ನನಗಾಗಿ ಬೆಳಗ್ಗೆ 3ಕ್ಕೆ ಏಳುತ್ತಾರೆ. ನನ್ನ ತಂದೆ ನನಗಾಗಿ ಕೆಲಸ ತ್ಯಜಿಸಿದ್ದಾರೆ. ಅಣ್ಣ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದು, ಮನೆ ಕೆಲಸಗಳು ಕಷ್ಟದಿಂದ ಸಾಗುತ್ತಿವೆ. ಭಾರತೀಯ ಕ್ರಿಕೆಟ್‌ಗೆ ದೊಡ್ಡ ಕೊಡುಗೆ ನೀಡಬೇಕು ಎನ್ನುವುದೇ ನನ್ನ ಗುರಿ.

- ವೈಭವ್‌ ಸೂರ್ಯವಂಶಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ