ಮುಂಬೈ ಮೂಲದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಬೆನ್ನಲ್ಲೇ ಇಂದೋರ್‌ನ ಡಾನ್ಸಿಂಗ್ ಕಾಪ್ ಅಂತಲೇ ಖ್ಯಾತಿ ಪಡೆದಿದ್ದ ರಂಜೀತ್ ಸಿಂಗ್‌ಗೆ ಪೊಲೀಸ್ ಇಲಾಖೆಯು ಹೆಡ್ ಕಾನ್‌ಸ್ಟೇಬಲ್ ಹುದ್ದೆಯಿಂದ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿದೆ.
ಇಂದೋರ್: ಮುಂಬೈ ಮೂಲದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಬೆನ್ನಲ್ಲೇ ಇಂದೋರ್‌ನ ಡಾನ್ಸಿಂಗ್ ಕಾಪ್ ಅಂತಲೇ ಖ್ಯಾತಿ ಪಡೆದಿದ್ದ ರಂಜೀತ್ ಸಿಂಗ್‌ಗೆ ಪೊಲೀಸ್ ಇಲಾಖೆಯು ಹೆಡ್ ಕಾನ್‌ಸ್ಟೇಬಲ್ ಹುದ್ದೆಯಿಂದ ಕಾನ್‌ಸ್ಟೇಬಲ್ ಹುದ್ದೆಗೆ ಹಿಂಬಡ್ತಿ ನೀಡಿದೆ.ಅನುಚಿತ ಸಂದೇಶಗಳನ್ನು ಕಳುಹಿಸಿ, ಇಂದೋರ್‌ಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬೆನ್ನಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಂಚಾರ ಪೊಲೀಸ್ ಮುಖ್ಯ ಪೇದೆಯಾಗಿದ್ದ ರಂಜೀತ್ ಕ್ರಾಸಿಂಗ್‌ನಲ್ಲಿ ನೃತ್ಯ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸಿ ಗಮನ ಸೆಳೆಯುತ್ತಿದ್ದರು.
==ಡೌಗ್ ಪತ್ನಿಯ ಸೌಂದರ್ಯ ನೋಡಿ ಅವರನ್ನು ಆಂತರಿಕ ಸಚಿವ ಮಾಡಿದೆ: ಟ್ರಂಪ್
ವಾಷಿಂಗ್ಟನ್: ಅರ್ಹತೆಗಳನ್ನು ನೋಡಿ ನೇಮಕ ಸಾಮಾನ್ಯ. ಆದರೆ ಅಮೆರಿಕದ ಆಂತರಿಕ ಸಚಿವನ ನೇಮಕಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾನದಂಡ ವಿಚಿತ್ರವಾಗಿತ್ತು. ‘ಡೌಗ್ ಬರ್ಗ್ಮ್ ಅವರನ್ನು ಆಂತರಿಕ ಸಚಿವನನ್ನಾಗಿ ನೇಮಿಸಿದ್ದರ ಹಿಂದಿನ ಕಾರಣ ಅವರ ಪತ್ನಿ ಕ್ಯಾಥರಿನ್. ಅವರಿಬ್ಬರು ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ನೋಡಿದೆ. ಇಂಥಹವರು (ಕ್ಯಾಥರಿನ್) ಜತೆಗಿರುವುದು ಹೆಮ್ಮೆಯ ವಿಷಯ, ಆದ್ದರಿಂದ ಡೌಗ್‌ರನ್ನು ನೇಮಿಸಿಕೊಂಡೆ’ ಎಂದು ಟ್ರಂಪ್, ಬಹಿರಂಗವಾಗಿ ಹೇಳಿದ್ದಾರೆ. ಆ ವೇಳೆ ಕ್ಯಾಥರಿನ್ ಕೂಡ ಟ್ರಂಪ್‌ರ ಹಿಂದೆಯೇ ಇದ್ದರು.: ಅರ್ಹತೆಗಳನ್ನು ನೋಡಿ ನೇಮಕ ಸಾಮಾನ್ಯ. ಆದರೆ ಅಮೆರಿಕದ ಆಂತರಿಕ ಸಚಿವನ ನೇಮಕಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾನದಂಡ ವಿಚಿತ್ರವಾಗಿತ್ತು. ‘ಡೌಗ್ ಬರ್ಗ್ಮ್ ಅವರನ್ನು ಆಂತರಿಕ ಸಚಿವನನ್ನಾಗಿ ನೇಮಿಸಿದ್ದರ ಹಿಂದಿನ ಕಾರಣ ಅವರ ಪತ್ನಿ ಕ್ಯಾಥರಿನ್. ಅವರಿಬ್ಬರು ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ನೋಡಿದೆ. ಇಂಥಹವರು (ಕ್ಯಾಥರಿನ್) ಜತೆಗಿರುವುದು ಹೆಮ್ಮೆಯ ವಿಷಯ, ಆದ್ದರಿಂದ ಡೌಗ್‌ರನ್ನು ನೇಮಿಸಿಕೊಂಡೆ’ ಎಂದು ಟ್ರಂಪ್, ಬಹಿರಂಗವಾಗಿ ಹೇಳಿದ್ದಾರೆ. ಆ ವೇಳೆ ಕ್ಯಾಥರಿನ್ ಕೂಡ ಟ್ರಂಪ್‌ರ ಹಿಂದೆಯೇ ಇದ್ದರು.==
ಏ.30ರೊಳಗೆ ರಾಮ ಮಂದಿರ ಕಾಮಗಾರಿ ಪೂರ್ಣ1900 ಕೋಟಿ ರು. ವೆಚ್ಚದ ಅಂದಾಜು
ಪಿಟಿಐ ಅಯೋಧ್ಯೆ
ಅಯೋಧ್ಯೆಯ ರಾಮ ಮಂದಿ ನಿರ್ಮಾಣಕ್ಕೆ ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ನಿರ್ಮಾಣ ಕಾರ್ಯ ಏ.30ರೊಳಗೆ ಮುಗಿಯುವ ಸಾಧ್ಯತೆಯಿದೆ ಹಾಗೂ 19000 ಕೋಟಿ ರು.ವೆಚ್ಚದ ಅಂದಾಜಿದೆ.ಶನಿವಾರ ಮಾತನಾಡಿದ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ‘ರಾಮ ಮಂದಿರ ಯೋಜನೆಗೆ ಒಟ್ಟು ಖರ್ಚು ಸುಮಾರು 1,900 ಕೋಟಿ ರು.ಗಳೆಂದು ಅಂದಾಜಿಸಲಾಗಿದೆ. ಅದರಲ್ಲಿ ಜಿಎಸ್‌ಟಿ ಸೇರಿದಂತೆ ಸುಮಾರು 1,600 ಕೋಟಿ ರು.ಗಳನ್ನು ಈಗಾಗಲೇ ಪಾವತಿಸಲಾಗಿದೆ’ ಎಂದರು.ಎಲ್ ಆ್ಯಂಡ್ ಟಿ ಹಾಗೂ ಟಾಟಾ ಕನ್ಸಲ್ಟನ್ಇ ನಿರ್ಮಾಣದ ಹೊಣೆ ಹೊತ್ತಿದ್ದು, ಏ.30ರ ಸುಮಾರಿಗೆ ನಿರ್ಮಾಣ ಸ್ಥಳದಿಂದ ನಿರ್ಗಮಿಸಲಿವೆ. ಸಣ್ಣ ಪ್ರಮಾಣದ ಕೆಲಸಗಾರರ ತಂಡ ಮಾತ್ರ ನಿರ್ಮಾಣ ಸ್ಥಳದಲ್ಲಿ ಉಳಿದುಕೊಳ್ಳಲಿದೆ. ನಿರ್ಮಾಣ ಆದ ಎಲ್ಲ ಕಟ್ಟಡಗಳಿಗೆ ಎಲ್ ಆ್ಯಂಡ್ ಟಿ 3 ವರ್ಷದ ವಾರಂಟಿ ನೀಡಿದೆ ಎಂದರು.==
ಜೈಲಿನಲ್ಲಿ ಹದೆಗೆಟ್ಟ ವಾಂಗ್ಚುಕ್ ಆರೋಗ್ಯ: ಏಮ್ಸ್‌ನಲ್ಲಿ ಪರೀಕ್ಷೆಜೋಧ್ಪುರ: ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಜೈಲಿನಲ್ಲಿರುವ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ಶನಿವಾರ ಮುಂಜಾನೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಜೋಧ್‌ಪುರದ ಏಮ್ಸ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಯಿತು.ಹೊಟ್ಟೆ ನೋವಿನಿಂದ ಬಳಲುತ್ತಿರುವ ವಾಂಗ್ಚುಕ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಏಮ್ಸ್‌ನಲ್ಲಿ ತಪಾಸಣೆ ನಡೆಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಶುಕ್ರವಾರವೂ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಪರೀಕ್ಷೆಗೆ ಭೇಟಿ ನೀಡಿದ್ದರು. ಜೈಲು ಸೇರಿದ ಬಳಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಾಂಗ್ಚುಕ್ ಕಳೆದ 4 ತಿಂಗಳಲ್ಲಿ 21 ಬಾರಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು.==
ಇಂದಿನಿಂದ ಸಿಗರೇಟ್, ತಂಬಾಕು ಉತ್ಪನ್ನ ತುಟ್ಟಿಹೆಚ್ಚುವರಿ ತೆರಿಗೆ ಅಧಿಕೃತ ಜಾರಿ
ನವದೆಹಲಿ: ದೇಶದಲ್ಲಿ ‘ಪಾಪದ ತೆರಿಗೆ’ (ಸಿನ್ ಟ್ಯಾಕ್ಸ್) ಫೆ.1ರಿಂದ ಅಧಿಕೃರವಾಗಿ ಜಾರಿಗೆ ಬರುತ್ತಿದ್ದು, ಸಿಗರೇಟ್, ತಂಬಾಕು, ಪಾನ್ ಮಾಸಾಲಾಗಳು ದುಬಾರಿಯಾಗಲಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಮಾಡಲಾಗಿದ್ದ ಜಿಎಸ್‌ಟಿ ಸುಧಾರಣೆಗಳ ಅಡಿಯಲ್ಲಿ, ಇಂತಹ ಉತ್ಪನ್ನಗಳ ಮೇಲಿನ ಹೆಚ್ಚುವರಿ ತೆರಿಗೆಯನ್ನು ಶೇ.28ರಿಂದ ಶೇ.40ಕ್ಕೆ ಏರಿಸಲಾಗಿತ್ತು. ಅದು ಅಧಿಕೃತವಾಗಿ ಜಾರಿಯಾಗಲಿದೆ.
ದರ ಏರಿಕೆಯಾಗುವುದರಿಂದ ತೆರಿಗೆಯಿಂದ ತಪ್ಪಿಸಿಕೊಳ್ಳಲು ಉತ್ಪಾದಕರು ಅಡ್ಡದಾರಿ ಹಿಡಿವುದನ್ನು ತಪ್ಪಿಸಲು ತೆರಿಗೆಯನ್ನು ಪ್ರತಿ ಪ್ಯಾಕೆಟ್ ಮೇಲೆ ನಮೂದಿಸಲಾದ ದರದ ಆಧಾರದಲ್ಲಿ ಲೆಕ್ಕ ಹಾಕಲಾಗುವುದು.ಇದರಡಿ ಫಿಲ್ಟರ್ ಇಲ್ಲದ 65 ಎಂ.ಎಂ. ಸಿಗರೇಟಿಗೆ 2.05 ರು.ನಷ್ಟು ತೆರಿಗೆ ಬಿದ್ದರೆ, ಮಧ್ಯಮ ಗಾತ್ರಕ್ಕೆ 4 ರು., ಬ್ರಾಂಡೆಡ್‌ಗೆ 8.50 ರು. ವಿಧಿಸಲಾಗುವುದು. ಜಗಿಯುವ ತಂಬಾಕಿಗೆ 82 ಪೈಸೆ, ಗುಟ್ಕಾಗೆ 91 ಪೈಸೆ, ಪಾನ್‌ಮಸಾಲಾಗೆ 88 ಪೈಸೆ ತೆರಿಗೆ ಬೀಳುವುದು.