ಸೌರ ಮಾರುತದ ಪ್ರಭಾವ ಕಂಡುಹಿಡಿದ ಆದಿತ್ಯ ಎಲ್‌-1

KannadaprabhaNewsNetwork |  
Published : Feb 24, 2024, 02:32 AM ISTUpdated : Feb 24, 2024, 08:37 AM IST
ಸೌರ ಮಾರುತ ಪ್ರಭಾವ | Kannada Prabha

ಸಾರಾಂಶ

ಆದಿತ್ಯ ಎಲ್‌ 1 ಸೌರ ಮಾರುತದ ಪ್ರಭಾವ ಕಮಡುಹಿಡಿದಿದ್ದು, ಇದರಿಂದ ಸೌರ ಮಾರುತಗಳ ಅಧ್ಯಯನಕ್ಕೆ ನೆರವು ಆಗಲಿದೆ.

ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ ಭಾರತ ಉಡಾವಣೆ ಮಾಡಿರುವ ಆದಿತ್ಯ ಎಲ್‌-1 ಯೋಜನೆಯಲ್ಲಿರುವ ಪೇಲೋಡ್‌, ಸೌರ ಮಾರುತದ ಪ್ರಭಾವವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ.

ಫೆಬ್ರವರಿ 10-11ರ ನಡುವಿನ ಅವಧಿಯಲ್ಲಿ ಸೌರಮಾರುತದ ಪ್ರಭಾವ ಪತ್ತೆಯಾಗಿದೆ ಸಂಸ್ಥೆ ಟ್ವೀಟ್‌ ಮಾಡಿದೆ.

ಆದಿತ್ಯ ಎಲ್‌-1 ಯೋಜನೆಯಲ್ಲಿರುವ ‘ಪ್ಲಾಸ್ಮಾ ಅನಾಲೈಸರ್‌ ಪ್ಯಾಕೇಜ್‌ ಫಾರ್‌ ಆದಿತ್ಯ’ (ಪಾಪಾ) ಪೇಲೋಡ್‌ ಯಶಸ್ವಿಯಾಗಿ ಈ ಕಾರ್ಯವನ್ನು ನಿರ್ವಹಿಸಿದೆ. 

ಇದು 2 ಸೆನ್ಸಾರ್‌ಗಳನ್ನು ಹೊಂದಿದ್ದು, ಸೌರ ಮಾರುತದಲ್ಲಿರುವ ಎಲೆಕ್ಟ್ರಾನ್‌ ಶಕ್ತಿ ಮತ್ತು ಸೌರ ಮಾರುತದಲ್ಲಿರುವ ಅಯಾನು ಸಂಯೋಜನೆಯನ್ನು ಅಧ್ಯಯನ ಮಾಡಲಿದೆ. 

ಇದಲ್ಲದೇ ಸೌರ ಮಾರುತ ಚಲಿಸುವ ದಿಕ್ಕನ್ನು ಸಹ ಇದು ಅಧ್ಯಯನ ಮಾಡಲಿದೆ. ಪಾಪಾ ಪೇಲೋಡ್‌ ಸಂಗ್ರಹಿಸಿರುವ ಮಾಹಿತಿಯನ್ನು ವಿಕ್ರಂ ಸಾರಾಭಾಯಿ ಸ್ಪೇಸ್‌ ಸೆಂಟರ್‌ನಲ್ಲಿ ಅಧ್ಯಯನ ಮಾಡಲಾಗುವುದು ಎಂದು ಇಸ್ರೋ ಹೇಳಿದೆ. 

ಸೌರ ಮಾರುತಗಳು ಭೂಮಿಯ ಮೇಲೆ ಹಾಗೂ ಉಪಗ್ರಹಗಳ ಮೇಲೆ ಬೀರಬಹುದಾದ ಪರಿಣಾಮವನ್ನು ಅಧ್ಯಯನ ಮಾಡಲು ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು. 

ಇದೀಗ ಸೌರ ಮಾರುತದ ಬಗ್ಗೆ ಸಿಕ್ಕಿರುವ ಮಾಹಿತಿಯಿಂದ ಈ ಕುರಿತಾಗಿ ಹೆಚ್ಚಿನ ಅಧ್ಯಯನ ಸಾಧ್ಯವಾಗಲಿದೆ ಎಂದು ಇಸ್ರೋ ಹೇಳಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ