ಮೊದಲ ಬಾರಿ ಸೂರ್ಯನ ಫೋಟೋ ತೆಗೆದ ಆದಿತ್ಯ ಎಲ್‌1

KannadaprabhaNewsNetwork |  
Published : Dec 09, 2023, 01:15 AM IST
ಸೂರ್ಯ | Kannada Prabha

ಸಾರಾಂಶ

ಭಾರತದ ಮೊದಲ ಬಾಹ್ಯಾಕಾಶ ಸೌರ ಯೋಜನೆಯಾದ ಆದಿತ್ಯ ಎಲ್‌-1 ನೌಕೆಯಲ್ಲಿರುವ ಪೇಲೋಡ್‌ ಎಸ್‌ಯುಐಟಿ ಇದೇ ಮೊದಲ ಬಾರಿಗೆ ಸೂರ್ಯನ ಸಂಪೂರ್ಣ ಫೋಟೋವನ್ನು ತೆಗೆದಿದೆ. ಈ ಫೋಟೋವನ್ನು ಶುಕ್ರವಾರ ಹಂಚಿಕೊಂಡಿರುವ ಇಸ್ರೋ ಇದು ಸೂರ್ಯನ ಅಧ್ಯಯನದಲ್ಲಿ ಮತ್ತೊಂದು ಮೈಲುಗಲ್ಲು ಎಂದು ಹೇಳಿದೆ.

ವಿವಿಧ ತರಂಗಾಂತರದಲ್ಲಿ ಅತಿ ನೇರಳೆ ಕಿರಣ ಸಹಾಯದಿಂದ ಫೋಟೋ

ಡಿ.6ರಂದು ತೆಗೆದ ಫೊಟೋವನ್ನು ಬಿಡುಗಡೆ ಮಾಡಿದ ಇಸ್ರೋನವದೆಹಲಿ: ಭಾರತದ ಮೊದಲ ಬಾಹ್ಯಾಕಾಶ ಸೌರ ಯೋಜನೆಯಾದ ಆದಿತ್ಯ ಎಲ್‌-1 ನೌಕೆಯಲ್ಲಿರುವ ಪೇಲೋಡ್‌ ಎಸ್‌ಯುಐಟಿ ಇದೇ ಮೊದಲ ಬಾರಿಗೆ ಸೂರ್ಯನ ಸಂಪೂರ್ಣ ಫೋಟೋವನ್ನು ತೆಗೆದಿದೆ. ಈ ಫೋಟೋವನ್ನು ಶುಕ್ರವಾರ ಹಂಚಿಕೊಂಡಿರುವ ಇಸ್ರೋ ಇದು ಸೂರ್ಯನ ಅಧ್ಯಯನದಲ್ಲಿ ಮತ್ತೊಂದು ಮೈಲುಗಲ್ಲು ಎಂದು ಹೇಳಿದೆ. ಆದಿತ್ಯ ಎಲ್‌-1 ನೌಕೆಯಲ್ಲಿರುವ ಸೋಲಾರ್‌ ಅಲ್ಟ್ರಾವಯಲೆಟ್‌ ಇಮೇಜಿಂಗ್‌ ಟೆಲಿಸ್ಕೋಪ್‌ (ಎಸ್‌ಯುಐಟಿ) ಮೊದಲ ಬಾರಿಗೆ ಸೂರ್ಯನಿಂದ ಹೊರಹೊಮ್ಮುವ ಅತಿ ನೇರಳೆ ಕಿರಣಗಳನ್ನು ಆಧರಿಸಿ ವಿವಿಧ ತರಂಗಾಂತರಗಳಲ್ಲಿ ಸೂರ್ಯನ ಫೋಟೋವನ್ನು ತೆಗೆದಿದೆ. ಈ ಫೋಟೋಗಳನ್ನು 200ರಿಂದ 400 ನ್ಯಾನೋ ಮೀ. ತರಂಗಾಂತರಗಳಲ್ಲಿ ತೆಗೆಯಲಾಗಿದೆ.

ಇದು ಸೂರ್ಯನ ಮೇಲ್ಮೈಯಾದಂತಹ ಫೋಟೋಸ್ಪಿಯರ್‌ ಮತ್ತು ಅದರ ಹೊರಭಾಗವಾಗಿರುವ ಕ್ರೋಮೋ ಸ್ಪಿಯರ್‌ಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ವಿವಿಧ ಸೌರ ಘಟನೆಗಳನ್ನು ಅರ್ಥ ಮಾಡಿಕೊಳ್ಳಲು ಈ ಪದರಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ.ಎಸ್‌ಯುಐಟಿ ಪೇಲೋಡನ್ನು ಪುಣೆ ವಿವಿಯ 50 ಮಂದಿ ವಿಜ್ಞಾನಿಗಳು ಸಿದ್ಧಪಡಿಸಿದ್ದು, ಇದು ಅತಿ ನೇರಳೆ ಕಿರಣಗಳನ್ನು ಗುರುತಿಸುವ ಟೆಲಿಸ್ಕೋಪನ್ನು ಹೊಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗೂಗಲ್‌ ಸಿಇಒಪಿಚೈಗೆ 3 ವರ್ಷಕ್ಕೆ 6300 ಕೋಟಿ ರು. ವೇತನ, ಭತ್ಯೆ!
ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ; ವಿಜಯ್‌ ವಿಜಯ್‌ ಘೋಷಣೆ