ತುರ್ತು ಪರಿಸ್ಥಿತಿ ವೇಳೆ ಬೆಂಗ್ಳೂರು ಜೈಲಲ್ಲಿ ವಾಸವಿದ್ದ ಅಡ್ವಾಣಿ

KannadaprabhaNewsNetwork | Updated : Feb 04 2024, 08:59 AM IST

ಸಾರಾಂಶ

ತುರ್ತುಪರಿಸ್ಥಿತಿ ವೇಳೆ ಜಂಟಿ ಸಂಸದೀಯ ಸಮಿತಿಯ ಸಭೆಯೊಂದರಲ್ಲಿ ಭಾಗವಹಿಸಲು ಅಡ್ವಾಣಿ ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದಿದ್ದ ಅಟಲ್‌ಜಿ ಹಾಗೂ ಅಡ್ವಾಣಿ ಅವರನ್ನು ಬಂಧಿಸಿ ಬೆಂಗಳೂರಿನ ಸೆಂಟ್ರಲ್‌ ಜೈಲಿಗೆ ಕರೆದೊಯ್ದರು.ಬೆಂಗಳೂರು ಸೆಂಟ್ರಲ್‌ ಜೈಲಲ್ಲಿ ಅಡ್ವಾಣಿ ವಾಸ

1975ರ ಜೂನ್‌ 12ರಂದು ಅಲಹಾಬಾದ್‌ ಹೈಕೋರ್ಚ್‌ ಐತಿಹಾಸಿಕ ತೀರ್ಪೊಂದನ್ನು ನೀಡಿತ್ತು. ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಇಂದಿರಾಗಾಂಧಿ ಅವರ ಆಯ್ಕೆಯನ್ನು ಅಸಿಂಧುವೆಂದು ಘೋಷಿಸಿತು. 

ಇದರಿಂದ ಕಂಗೆಟ್ಟ ಪ್ರಧಾನಿ ಇಂದಿರಾಗಾಂಧಿ ಜೂ.25ರಂದು ರಾತ್ರೋರಾತ್ರಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರು. 

ಈ ವೇಳೆ ಜಂಟಿ ಸಂಸದೀಯ ಸಮಿತಿಯ ಸಭೆಯೊಂದರಲ್ಲಿ ಭಾಗವಹಿಸಲು ಅಡ್ವಾಣಿ ಬೆಂಗಳೂರಿಗೆ ಬಂದಿದ್ದರು. 

ಹೀಗೆ ಬಂದಿದ್ದ ಅಟಲ್‌ಜಿ ಹಾಗೂ ಅಡ್ವಾಣಿ ಅವರನ್ನು ಬಂಧಿಸಿ ಬೆಂಗಳೂರಿನ ಸೆಂಟ್ರಲ್‌ ಜೈಲಿಗೆ ಕರೆದೊಯ್ದರು.ಬೆಂಗಳೂರು ಸೆಂಟ್ರಲ್‌ ಜೈಲಲ್ಲಿ ಅಡ್ವಾಣಿ ವಾಸ

ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲಿ ಅಡ್ವಾಣಿ ಹಾಗೂ ಇತರೆ ಪ್ರಮುಖ ನಾಯಕರನ್ನು ದೊಡ್ಡ ಕೋಣೆಯೊಂದರಲ್ಲಿ ಇರಿಸಲಾಗಿತ್ತು. 

ಶ್ಯಾಂ ಬಾಬು ಹಾಗೂ ಮಧು ದಂಡವತೆ ಒಂದು ಕೋಣೆಯಲ್ಲಿ ಇದ್ದರೆ, ಮತ್ತೊಂದು ಕೋಣೆಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಅವರನ್ನು ಇರಿಸಲಾಗಿತ್ತು. 2 ವರ್ಷದಲ್ಲಿ ಕನ್ನಡ ಕಲಿತ ನಾಯಕ

ಬೆಂಗಳೂರು ಸೆಂಟ್ರಲ್‌ ಜೈಲ್ಲಿನಲ್ಲಿ ಅಡ್ವಾಣಿ ಅವರ ಬಹುತೇಕ ಸಹ ಕೈದಿಗಳು ಕನ್ನಡಿಗರಾಗಿದ್ದರಿಂದ 2 ವರ್ಷಗಳ ಅವಧಿಯಲ್ಲಿ ಅಡ್ವಾಣಿ ಇಲ್ಲಿ ಸಾಕಷ್ಟು ಕನ್ನಡ ಪದಗಳನ್ನು ಕಲಿತರು. 

ಅಷ್ಟಿಷ್ಟು ಮಾತನಾಡುವುದನ್ನೂ ರೂಢಿಸಿಕೊಂಡಿದ್ದರು. ಪತ್ರಿಕೆಗಳಲ್ಲಿ ಬರುವ ಸುದ್ದಿಯ ಹೆಡ್ಡಿಂಗ್‌ ಅನ್ನು ಓದುವಷ್ಟರ ಮಟ್ಟಿಗೆ ಅವರು ಕನ್ನಡದಲ್ಲಿ ಪಳಗಿದ್ದರು.

Share this article