ನವದೆಹಲಿ: ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನವೊಂದು ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ನಿಗದಿತ ಸ್ಥಳದಲ್ಲಿ ನಿಲ್ಲದೇ ಬಹುದೂರಕ್ಕೆ ಸಾಗಿದ್ದರಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು 15 ನಿಮಿಷ ಬ್ಲಾಕ್ ಮಾಡಿದ ಪ್ರಸಂಗ ಭಾನುವಾರ ನಡೆದಿದೆ.
ಅಮೃತಸರದಿಂದ ದೆಹಲಿಗೆ ಬರುತ್ತಿದ್ದ ವಿಮಾನ ಲ್ಯಾಂಡ್ ಅಗುವ ವೇಳೆ ದಟ್ಟ ಮಂಜು ಆವರಿಸಿದ್ದ ಕಾರಣ ನಿಗದಿತ ಟ್ಯಾಕ್ಸಿವೇನಲ್ಲಿ ನಿಲ್ಲದೆ ರನ್‌ವೇ ಮತ್ತೊಂದು ಅಂಚಿನವರೆಗೂ ಮುಂದೆ ಸಾಗಿ ನಿಂತಿದೆ.
ಈ ಹಿನ್ನೆಲೆಯಲ್ಲಿ ವಿಮಾನವನ್ನು ಟೋಯಿಂಗ್ ಟ್ರ್ಯಾಕ್ಟರ್ ಮೂಲಕ ನಿಗದಿತ ಟ್ಯಾಕ್ಸಿವೇ ಇರುವ ಜಾಗಕ್ಕೆ ವಿಮಾನ ಸಿಬ್ಬಂದಿ ಕರೆತಂದರು.
ಈ ನಡುವೆ ರನ್‌ವೇ 15 ನಿಮಿಷ ಬ್ಲಾಕ್ ಆದ ಪರಿಣಾಮ ಹಲವು ವಿಮಾನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು.