ಲಡ್ಕಿ ಬಹಿನ್‌ಗೆ ಹೊಡೆತ ನೀಗಿಸಲು ಮದ್ಯ ದರ ಏರಿಕೆಗೆ ಮಹಾ ಚಿಂತನೆ

KannadaprabhaNewsNetwork |  
Published : Jun 12, 2025, 02:29 AM ISTUpdated : Jun 12, 2025, 05:11 AM IST
ಲಡ್ಕಿ ಬಹಿನ್‌ | Kannada Prabha

ಸಾರಾಂಶ

ಲಡ್ಕಿ ಬಹಿನ್‌ ಸೇರಿದಂತೆ ಹಲವು ಜನಪ್ರಿಯ ಯೋಜನೆ ಜಾರಿಯಿಂದಾಗಿ ಬೀಳುವ ಆರ್ಥಿಕ ಹೊರೆ ನೀಗಿಸಲು ಮದ್ಯದ ಮಾರಾಟ ದರ ಶೇ.4.5ರಷ್ಟು ಏರಿಕೆಗೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ.

ಮುಂಬೈ: ಲಡ್ಕಿ ಬಹಿನ್‌ ಸೇರಿದಂತೆ ಹಲವು ಜನಪ್ರಿಯ ಯೋಜನೆ ಜಾರಿಯಿಂದಾಗಿ ಬೀಳುವ ಆರ್ಥಿಕ ಹೊರೆ ನೀಗಿಸಲು ಮದ್ಯದ ಮಾರಾಟ ದರ ಶೇ.4.5ರಷ್ಟು ಏರಿಕೆಗೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ. 

ರಾಜ್ಯದಲ್ಲಿ ಮಹಿಳೆಯರಿಗೆ ಮಾಸಿಕ 1500 ರು. ನೀಡುವ ಲಡ್ಕಿ ಬಹಿನ್ ಯೋಜನೆಗೆ ವಾರ್ಷಿಕ 14 ಸಾವಿರ ಕೋಟಿ ರು. ಅಗತ್ಯವಿದೆ. ಇದರ ಜೊತೆಗೆ ಇತರೆ ಕೆಲವು ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆ ಹೊರಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಆದಾಯ ಸಂಗ್ರಹದ ಮಾರ್ಗವಾಗಿ ಮದ್ಯದ ದರ ಏರಿಕೆಗೆ ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಲಡ್ಕ ಬಹಿನ್ ಯೋಜನೆಯಡಿ ಅರ್ಹ ಮಹಿಳೆಯರಿಗೆ ಸರ್ಕಾರ ಹಾಲಿ ಮಾಸಿಕ 1500 ರು. ನೀಡುತ್ತಿದೆ. ಅದನ್ನು ಹೆಚ್ಚಿಸುವ ಭರವಸೆ ನೀಡಲಾಗಿತ್ತಾದರೂ ಅದಿನ್ನೂ ಜಾರಿಗೆ ಬಂದಿಲ್ಲ.

ವಿದ್ಯಾರ್ಥಿಯ ಕೈಗೆ ಕೋಳ: ಅಮೆರಿಕ ಸರ್ಕಾರದ ಬಳಿ ಭಾರತ ಕಳವಳ ಸಲ್ಲಿಕೆ

ನವದೆಹಲಿ: ಅಮೆರಿಕದ ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ ಗಡೀಪಾರುಗೊಂಡಿದ್ದ ಭಾರತೀಯನ ಕೈಗೆ ಕೊಳ ಹಾಕಿ ಅಪರಾಧಿಯಂತೆ ನಡೆಸಿಕೊಂಡ ಘಟನೆಗೆ ಭಾರ ಅಸಮಾಧಾನ ವ್ಯಕ್ತಪಡಿಸಿದ್ದು, ಅಮೆರಿಕದ ಅಧಿಕಾರಿಗಳೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ವಿದೇಶಾಂಗ ಸಚಿವಾಲಯವು ದೆಹಲಿಯಲ್ಲಿರುವ ಅಮೆರಿಕ ರಾಯಭಾರಿಗಳೊಂದಿಗೆ ಈ ವಿಚಾರವನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದ್ದಾರೆ. ಮಾತ್ರವಲ್ಲದೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲು ವಾಷಿಂಗ್ಟನ್ ಮತ್ತು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕೈಕೋಳ ಹಾಕಿ, ನೆಲಕ್ಕೆ ಕೆಡವಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡುತ್ತಿರುವ ವಿಡಿಯೋವೊಂದು ಇತ್ತೀಚೆಗಷ್ಟೇ ವೈರಲ್ ಆಗಿತ್ತು.

ಯುಪಿಎಸ್ಸಿ ಪ್ರಿಲಿಮ್ಸ್‌ ಫಲಿತಾಂಶ ಪ್ರಕಟ

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗವು 2025ನೇ ಸಾಲಿನ ನಾಗರಿಕ ಸೇವೆಯ ಪ್ರಿಲಿಮ್ಸ್‌ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಮೇಯ್ನ್‌ ಹಂತಕ್ಕೆ ಹೋಗಲಿದ್ದು, ಈ ಬಗೆಗಿನ ವಿವರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕಳೆದ ಮೇ 25ರಂದು ಪ್ರಿಲಿಮ್ಸ್‌ ಪರೀಕ್ಷೆ ನಡೆದಿತ್ತು.

ಟ್ರಂಪ್ ಟೀಕಿಸಿದ್ದಕ್ಕೆ ಮಸ್ಕ್ ವಿಷಾದ: ಆತನ ದೂಷಿಸಬೇಡಿ ಎಂದ ಅಧ್ಯಕ್ಷ

ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ಕ್ರಮದ ಘೋಷಣೆ ಮಾಡಿದ ಬೆನ್ನಲ್ಲೇ ಮಸ್ಕ್‌ ತಣ್ಣಗಾಗಿದ್ದಾರೆ. ಟ್ರಂಪ್‌ ಕುರಿತ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮಸ್ಕ್‌, ‘ಅಮೆರಿಕ ಅಧ್ಯಕ್ಷರ ಕುರಿತಾದ ನನ್ನ ಕೆಲವು ಹೇಳಿಕೆಗಳು ಮಿತಿಮೀರಿ ಹೋಗಿತ್ತು. ಆ ಬಗ್ಗೆ ನನಗೆ ವಿಷಾದವಿದೆ ಎಂದಿದ್ದಾರೆ.

ಅದರ ಬೆನ್ನಲ್ಲೇ ಟ್ರಂಪ್ ಕೂಡ ಮಸ್ಕ್‌ ಬಗ್ಗೆ ಮೃಧು ಧೋರಣೆ ತೋರಿದ್ದು, ‘ನಾನು ಅದರಿಂದ ಬೇಸರಗೊಂಡಿದ್ದೇನೆ. ಅದು ನಿಮಗೂ ತಿಳಿದಿದೆ. ಅದು ಹಾಗೆಯೇ ಇದೆ. ನನಗೆ ಸ್ವಲ್ಪ ನಿರಾಸೆಯಾಯಿತು. ಆದರೆ ನಾನು ನಾನು ಯಾವುದಕ್ಕೂ ಆತನನ್ನು ದೂಷಿಸುವುದಿಲ್ಲ’ ಎಂದಿದ್ದಾರೆ.ಈ ಬೆಳವಣಿಗೆ ಇಬ್ಬರ ನಡುವೆ ಮುನಿಸು ಶಮನದ ಸೂಚನೆ ಇರಬಹುದು ಎಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ಟ್ರಂಪ್‌ರ ಕೆಲ ಯೋಜನೆಗಳನ್ನು ಮಸ್ಕ್‌ ಬಹಿರಂಗವಾಗಿ ದೂಷಿಸಿದ್ದರು. ಅದರ ಬೆನ್ನಲ್ಲೇ ಮಸ್ಕ್‌ ಕಂಪನಿಗೆ ನೀಡಿರುವ ಎಲ್ಲಾ ಗುತ್ತಿಗೆ ರದ್ದುಪಡಿಸುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದರು.

PREV
Read more Articles on

Recommended Stories

ಸಿಂದೂರ ಚರ್ಚೆಗೆ ಸಮಯ ಕೇಳಿ ವಿಪಕ್ಷಗಳುತಮ್ಮ ಗೋರಿ ತೋಡಿಕೊಂಡವು: ಮೋದಿ
17000 ಕೋಟಿ ಅಕ್ರಮ:ಅನಿಲ್‌ ಅಂಬಾನಿಗೆ10 ಗಂಟೆ ಇ.ಡಿ. ಬಿಸಿ