ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಟೆಕ್‌ ವಿಷಯಗಳಲ್ಲಿ ಆರ್‌ಸಿ ‘ಮಾರ್ಗದರ್ಶನ’ಕ್ಕೆ ಭರ್ಜರಿ ಪ್ರತಿಕ್ರಿಯೆ

KannadaprabhaNewsNetwork |  
Published : Mar 01, 2025, 01:00 AM ISTUpdated : Mar 01, 2025, 07:16 AM IST
ರಾಜೀವ್ ಚಂದ್ರಶೇಖರ್ | Kannada Prabha

ಸಾರಾಂಶ

 ಇಂದಿನ ಜಗತ್ತಿನಲ್ಲಿ ಅತಿ ಅವಶ್ಯಕವಾದ ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಟೆಕ್‌ ವಿಷಯಗಳಲ್ಲಿ ಭಾರತೀಯರಿಗೆ ಮಾರ್ಗದರ್ಶನ ಮಾಡಲು ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುಂದಾಗಿದ್ದು, ಅದಕ್ಕೆ ಕೇವಲ 3 ದಿನದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸಿದೆ. 1300 ಜನ ಮಾರ್ಗದರ್ಶನ್ಕೆಕ ಸಜ್ಜಾಗಿದ್ದಾರೆ.

ನವದೆಹಲಿ: ಉದಯೋನ್ಮುಖ ಕ್ಷೇತ್ರಗಳಾದ ಹಾಗೂ ಇಂದಿನ ಜಗತ್ತಿನಲ್ಲಿ ಅತಿ ಅವಶ್ಯಕವಾದ ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಟೆಕ್‌ ವಿಷಯಗಳಲ್ಲಿ ಭಾರತೀಯರಿಗೆ ಮಾರ್ಗದರ್ಶನ ಮಾಡಲು ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುಂದಾಗಿದ್ದು, ಅದಕ್ಕೆ ಕೇವಲ 3 ದಿನದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸಿದೆ. 1300 ಜನ ಮಾರ್ಗದರ್ಶನ್ಕೆಕ ಸಜ್ಜಾಗಿದ್ದಾರೆ.

‘ನೀವು ಭಾರತೀಯರಾಗಿದ್ದು, ಡೀಪ್‌ ಎಐ, ಸೆಮಿಕಂಡಕ್ಟರ್‌ ಅಥವಾ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದಲ್ಲಿ ನಾನು ನಿಮ್ಮೊಂದಿಗೆ ಕೆಲಸ ಅಥವಾ ಮಾರ್ಗದರ್ಶನ ಮಾಡಿ, ಯಶಸ್ವಿ ಭಾರತೀಯರನ್ನು ಸೃಷ್ಟಿಸಲು ಇಷ್ಟಪಡುತ್ತೇನೆ’ ಎಂದು ರಾಜೀವ್‌ ಟ್ವೀಟ್‌ ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದು, 3 ದಿನದಲ್ಲಿ ವಿದೇಶಗಳಲ್ಲಿರುವ ಭಾರತೀಯರು ಸೇರಿ 1300 ಜನ ಉತ್ತಮವಾಗಿ ಸ್ಪಂದಿಸಿದ್ದಾರೆ.

‘ಇಂತಹವರ ನಾಯಕತ್ವದಡಿ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ನಮ್ಮ ದೇಶ ತನ್ನ ಸ್ಥಾನವನ್ನು ಉತ್ತಮಗೊಳಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ’ ಎಂದು ಹಲವರು ರಾಜೀವ್‌ ಅವರ ಯೋಜನೆಯನ್ನು ಪ್ರಶಂಸಿಸಿದ್ದಾರೆ.

ರಾಜೀವ್‌ ಸಂತಸ:

ಇದರಿಂದ ರಾಜೀವ್‌ ಅವರೂ ಸಂತಸಗೊಂಡಿದ್ದು, ‘ಈ ಮಟ್ಟದ ಪ್ರತಿಕ್ರಿಯೆ ನೋಡಿ ನಾನು ದಂಗಾದೆ. ನೀವು ಈ ತಂತ್ರಜ್ಞಾನಗಳ ಭವಿಷ್ಯವನ್ನು ರೂಪಿಸಬಲ್ಲಿರಿ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ. ಜೊತೆಗೆ, ‘ಕೆಲವೇ ದಿನಗಳ ಸಮಯಾವಕಾಶ ಸಿಕ್ಕಿದರೆ ಇದಕ್ಕೆ ಪೂರಕವಾಗಿ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ ಹಾಗೂ ನಿಮ್ಮೆಲ್ಲರ ಕಲ್ಪನೆ ಹಾಗೂ ಗುರಿಗಳಿಗೆ ರೆಕ್ಕೆ ಕೊಡುವ ಕೆಲಸ ಮಾಡುತ್ತೇನೆ. ಭಾರತ ಮತ್ತು ನಮ್ಮ ಡಿಜಿಟಲ್ ಮತ್ತು ನಾವೀನ್ಯತೆಯ ಆರ್ಥಿಕತೆಯನ್ನು ಯಶಸ್ವಿಯಾಗುವಂತೆ ಮಾಡುವುದೇ ನನ್ನ ಧ್ಯೇಯವಾಗಿದೆ’ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಲಾಗಿದ್ದು, ನಿಜವಾದ ಹಾಗೂ ಅರ್ಹವಾದ ವ್ಯಕ್ತಿಗಳನ್ನು ಪತ್ತೆಹಚ್ಚುತ್ತಿದ್ದು, ಅವರಿಗೆ ರಾಜೀವ್‌ ಚಂದ್ರಶೇಖರ್‌ ಅವರು ಮಾರ್ಗದರ್ಶನ ಮಾಡಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ । ಇಸ್ಲಾಮಿಕ್‌ ನಾಯಕನ ಹತ್ಯೆ ಬೆನ್ನಲ್ಲೇ ಹಿಂಸೆಟಾಪ್‌- ಬಾಂಗ್ಲಾ ಶೇಕ್‌- ಭಾರತೀಯ ರಾಯಭಾರಿಗಳ ಮನೆಗೆ ಕಲ್ಲೆಸೆತ । ಭಾರತ, ಹಿಂದು ವಿರೋಧಿ ಘೋಷಣೆ
ಹೂಡಿಕೆಗೆ ಕರೆ ನೀಡುವ ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌