ತಮ್ಮ ಉತ್ತರಾಧಿಕಾರಿಗಳ ತಾವೇ ಸೃಷ್ಟಿಸ್ತಿವೆ ಎಐ ಟೂಲ್ಸ್‌

KannadaprabhaNewsNetwork |  
Published : Jun 06, 2026, 01:15 AM IST
Antropic

ಸಾರಾಂಶ

‘ಕೃತಕ ಬುದ್ಧಿಮತ್ತೆ (ಎಐ) ಟೂಲ್‌ಗಳು ಸ್ವ ಸುಧಾರಣೆಯನ್ನು ಕಲಿತುಬಿಟ್ಟರೆ ಅದರಿಂದ ಮಾನವರ ಕೆಲಸಕ್ಕೆ ಕುತ್ತು ಬರುವುದು ತಪ್ಪಿದ್ದಲ್ಲ’ ಎಂದು ಕ್ಲಾಡ್‌ನಂತಹ ಚಾಣಾಕ್ಷ ಎಐಗಳನ್ನು ಅಭಿವೃದ್ಧಿಪಡಿಸಿರುವ ಆ್ಯಂಥ್ರೋಪಿಕ್‌ ಕಂಪನಿ ಎಚ್ಚರಿಸಿದೆ.

 ವಾಷಿಂಗ್ಟನ್‌: ‘ಕೃತಕ ಬುದ್ಧಿಮತ್ತೆ (ಎಐ) ಟೂಲ್‌ಗಳು ಸ್ವ ಸುಧಾರಣೆಯನ್ನು ಕಲಿತುಬಿಟ್ಟರೆ ಅದರಿಂದ ಮಾನವರ ಕೆಲಸಕ್ಕೆ ಕುತ್ತು ಬರುವುದು ತಪ್ಪಿದ್ದಲ್ಲ’ ಎಂದು ಕ್ಲಾಡ್‌ನಂತಹ ಚಾಣಾಕ್ಷ ಎಐಗಳನ್ನು ಅಭಿವೃದ್ಧಿಪಡಿಸಿರುವ ಆ್ಯಂಥ್ರೋಪಿಕ್‌ ಕಂಪನಿ ಎಚ್ಚರಿಸಿದೆ.

ಶೇ.80ರಷ್ಟು ಕೋಡ್‌ಗಳನ್ನು ಕ್ಲಾಡ್‌ ಎಐ ಕೈಯ್ಯಿಂದಲೇ ಬರೆಸಿಕೊಳ್ಳಲಾಗಿತ್ತು

ಮೇ ತಿಂಗಳಲ್ಲಿ, ಸಾಫ್ಟ್‌ವೇರ್‌ಗಳನ್ನು ನಿರ್ಮಿಸಿ, ಪರೀಕ್ಷಿಸಿ, ನಿರ್ವಹಿಸಿಸಲು ಅಗತ್ಯವಾದ ತನ್ನ ಕೋಡ್‌ಬೇಸ್‌ಗೆ ಮರ್ಜ್‌ ಮಾಡಲಾದ ಶೇ.80ರಷ್ಟು ಕೋಡ್‌ಗಳನ್ನು ಕ್ಲಾಡ್‌ ಎಐ ಕೈಯ್ಯಿಂದಲೇ ಬರೆಸಿಕೊಳ್ಳಲಾಗಿತ್ತು ಎಂಬ ವಿಷಯವನ್ನು ಆ್ಯಂಥ್ರೋಪಿಕ್‌ ಶುಕ್ರವಾರ ಬಹಿರಂಗಪಡಿಸಿದೆ.ಈ ಬಗ್ಗೆ ವಿಶ್ಲೇಷಣೆ ಮಾಡಿರುವ ಅದು, ‘ಮಾನವನ ಅಗತ್ಯವೇ ಇಲ್ಲದೆ ಎಐಗಳು ಇನ್ನೊಂದು ಎಐ ಅನ್ನು ಅಭಿವೃದ್ಧಿಪಡಿಸಲು ಶಕ್ತವಾಗಿದೆ. ಅವುಗಳು ತಮ್ಮ ಉತ್ತರಾಧಿಕಾರಿಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತವೆ. ಇದು ಟೆಕ್‌ ಇತಿಹಾಸದಲ್ಲೇ ಬಹುದೊಡ್ಡ ಬೆಳವಣಿಗೆಯಾಗಿದೆ. ಇದರಿಂದ ವಿಜ್ಞಾನ, ಆರೋಗ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಬಹುದು’ ಎಂದಿದೆ.

ನಿರ್ವಹಿಸುವ ಜವಾಬ್ದಾರಿಗಳು ಹೆಚ್ಚುತ್ತವೆ

‘ಆದರೆ ಇದರ ಜತೆಗೆ ಎಐಗಳ ಸ್ವ ಉನ್ನತಿ ಸಾಮರ್ಥ್ಯವು ವೃದ್ಧಿಸುತ್ತಿದ್ದಂತೆ ಅವುಗಳನ್ನು ನೋಡಿಕೊಳ್ಳುವ, ವರ್ತನೆಯನ್ನು ನಿರ್ವಹಿಸುವ ಜವಾಬ್ದಾರಿಗಳು ಹೆಚ್ಚುತ್ತವೆ. ಮುಂದೊಂದು ದಿನ ಮಾನವರ ಕೆಲಸಕ್ಕೆ ಕುತ್ತು ಬರಬಹುದು’ ಎಂದು ಎಚ್ಚರಿಸಿದೆ.ಎಐಗೆ ಬ್ರೇಕ್‌?:

‘ಅತ್ಯಾಧುನಿಕ ಎಐ ಬೆಳವಣಿಗೆ ತಾತ್ಕಾಲಿಕವಾಗಿಯಾದರೂ ತಡೆ ಒಡ್ಡುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟಿರುವ ಆ್ಯಂಥ್ರೋಪಿಕ್‌, ‘ಹೀಗೆಂದು ಎಲ್ಲಾ ಎಐ ಕಂಪನಿಗಳ ಸ್ಥಾಪಕರ ಮನವೊಲಿಕೆ ಕಷ್ಟ. ನಾವು ಅವುಗಳ ಅಭಿವೃದ್ಧಿ ನಿಲ್ಲಿಸಿದಾಗ ಅನ್ಯರು ಹಾಗೆ ಮಾಡದಿದ್ದರೆ, ನಾವು ಅವಕಾಶ ಕೈಚೆಲ್ಲಿದಂತಾಗುತ್ತದೆ’ ಎಂದಿದೆ.ಆದರೂ, ಮುಂಬರುವ ತಿಂಗಳುಗಳಲ್ಲಿ ಎಐ ಬೆಳವಣಿಗೆಗೆ ಕಡಿವಾಣ ಹಾಕುವ ಹಾಗೂ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುಬ ನಿಟ್ಟಿನಲ್ಲಿ ಸಭೆಗಳನ್ನು ನಡೆಸುವ ಉದ್ದೇಶವನ್ನು ಕಂಪನಿ ಹೊಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರಶ್ನೆಪತ್ರಿಕೆ ಲೀಕ್‌ಗೆ 10 ವರ್ಷ ಜೈಲು, ₹10 ಕೋಟಿ ದಂಡ : ನಾಳೆ ಬಿಲ್‌ ಮಂಡನೆ
ಸಿಜೆಐಗೆ ಸಿಜೆಪಿ ಥ್ಯಾಂಕ್ಸ್!