ಸೋಲಾರ್‌ ಸಾಮರ್ಥ್ಯ ವೃದ್ಧಿಯಲ್ಲಿಅಮೆರಿಕ ಹಿಂದಿಕ್ಕಿದ ಭಾರತ ನಂ.2

KannadaprabhaNewsNetwork |  
Published : Jun 05, 2026, 03:15 AM IST
Solar

ಸಾರಾಂಶ

ನವೀಕರಿಸಬಹುದಾದ ಇಂಧನದತ್ತ ಮುಖ ಮಾಡುತ್ತಿರುವ ಭಾರತವು 2025ರಲ್ಲಿ 37 ಗಿಗಾವ್ಯಾಟ್‌ನಷ್ಟು ಹೆಚ್ಚುವರಿ ಸೌರ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯಗಳಿಸಿಕೊಂಡಿದ್ದು, ಸೋಲಾರ್‌ ಸಾಮರ್ಥ್ಯ ವೃದ್ಧಿ ಸಾಧಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ.

ನವದೆಹಲಿ: ನವೀಕರಿಸಬಹುದಾದ ಇಂಧನದತ್ತ ಮುಖ ಮಾಡುತ್ತಿರುವ ಭಾರತವು 2025ರಲ್ಲಿ 37 ಗಿಗಾವ್ಯಾಟ್‌ನಷ್ಟು ಹೆಚ್ಚುವರಿ ಸೌರ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯಗಳಿಸಿಕೊಂಡಿದ್ದು, ಸೋಲಾರ್‌ ಸಾಮರ್ಥ್ಯ ವೃದ್ಧಿ ಸಾಧಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ.

ವಿಶ್ವ ದರ್ಜೆಯ ಮೂಲಸೌಕರ್ಯದ ಲಭ್ಯತೆಯಿಂದಾಗಿ ಈ ಸಾಧನೆ

‘ಅಗತ್ಯ ನೀತಿಗಳ ಮೂಲಕ ಬೆಂಬಲ, ನಾವೀನ್ಯತೆ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯದ ಲಭ್ಯತೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಖಾತೆ ಸಚಿವ ಪ್ರಲ್ಹಾದ್‌ ಜೋಶಿ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

315 ಗಿ.ವ್ಯಾ.ನಷ್ಟು ಸಾಮರ್ಥ್ಯ ವೃದ್ಧಿಯೊಂದಿಗೆ ಚೀನಾ ಮೊದಲ ಸ್ಥಾನ

315 ಗಿ.ವ್ಯಾ.ನಷ್ಟು ಸಾಮರ್ಥ್ಯ ವೃದ್ಧಿಯೊಂದಿಗೆ ಚೀನಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಅಮೆರಿಕ ಕಳೆದ ವರ್ಷ 34 ಗಿ.ವ್ಯಾ.ನಷ್ಟು ಹೆಚ್ಚು ಸೌರ ವಿದ್ಯುತ್‌ ಉತ್ಪಾದಿಸಲು ಶಕ್ತವಾಗಿದೆ. ಭಾರತವು 2025ರಲ್ಲಿ 37 ಗಿಗಾವ್ಯಾಟ್‌ನಷ್ಟು ಹೆಚ್ಚುವರಿ ಸೌರ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯಗಳಿಸಿಕೊಂಡಿದೆ. 2024ರಲ್ಲಿ 25.4 ಗಿ.ವ್ಯಾ. ಮತ್ತು 2023ರಲ್ಲಿ 9.6 ಗಿ.ವ್ಯಾ. ಹೆಚ್ಚುವರಿ ಉತ್ಪಾದನೆಯ ಸಾಮರ್ಥ್ಯವನ್ನು ಗಳಿಸಿಕೊಂಡಿತ್ತು.

ಗಮನಿಸಬೇಕಾದ ಅಂಶವೆಂದರೆ, ಒಟ್ಟು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಅಮೆರಿಕವು (211.6 ಗಿ.ವ್ಯಾ.) ಭಾರತಕ್ಕಿಂತ (135.5 ಗಿ.ವ್ಯಾ.) ಮುಂದೆಯೇ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇರಳಕ್ಕೆ ಮುಂಗಾರು ಪ್ರವೇಶ
5 ಲಕ್ಷ ಕೋಟಿ ಸಾಲದಲ್ಲಿ ಕೇರಳ : ಆರ್ಥಿಕ ಪರಿಸ್ಥಿತಿ ಬಲು ಗಂಭೀರ