ಏರಿಂಡಿಯಾ ವಿಮಾನ ಸಹ ಪೈಲಟ್‌ಮಂಗಳೂರಿನ ಕ್ಲೈವ್‌ ಕುಂದರ್‌

KannadaprabhaNewsNetwork |  
Published : Jun 13, 2025, 04:20 AM IST
ವಿಮಾನ ಅಪಘಾತ | Kannada Prabha

ಸಾರಾಂಶ

ಅಹಮದಾಬಾದ್​​ನಲ್ಲಿ ಗುರುವಾರ ಸಂಭವಿಸಿದ ವಿಮಾನ ಅಪಘಾತ ದುರಂತದಲ್ಲಿ ಮಂಗಳೂರು ಮೂಲದ ಪೈಲಟ್ ಕ್ಲೈವ್‌ ಕುಂದರ್‌‌ ಮೃತಪಟ್ಟಿದ್ದಾರೆ.

ಕ್ಲೈವ್‌ ತಾಯಿ ಕೂಡಾ ಏರ್‌ ಹೋಸ್ಟ್‌ ಆಗಿದ್ದರು

ಮಂಗಳೂರು: ಅಹಮದಾಬಾದ್​​ನಲ್ಲಿ ಗುರುವಾರ ಸಂಭವಿಸಿದ ವಿಮಾನ ಅಪಘಾತ ದುರಂತದಲ್ಲಿ ಮಂಗಳೂರು ಮೂಲದ ಪೈಲಟ್ ಕ್ಲೈವ್‌ ಕುಂದರ್‌‌ ಮೃತಪಟ್ಟಿದ್ದಾರೆ. ಪತನಗೊಂಡ ಏರ್‌ ಇಂಡಿಯಾ ವಿಮಾನದ ಕೋ ಪೈಲಟ್ ಆಗಿದ್ದ ಕ್ಲೈವ್‌ ಕುಂದರ್‌, ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾಪ್ಟನ್ ಕ್ಲೈವ್‌ ಕುಂದರ್‌ ಮಂಗಳೂರು ಮೂಲದವರಾದರೂ, ಅವರ ಕುಟುಂಬ ಈಗ ಮುಂಬೈನಲ್ಲಿ ನೆಲೆಸಿದೆ. ಇವರ ತಾಯಿ ರೇಖಾ ಕುಂದರ್‌, ಏರ್‌ಹೋಸ್ಟ್‌ ಆಗಿ ನಿವೃತ್ತಿ ಹೊಂದಿದ್ದರು. ಕ್ಯಾ.ಕ್ಲೈವ್‌ ಕುಂದರ್‌ ಅವರು ಪ್ಯಾರಿಸ್ ಏರ್ ಇಂಕ್‌ನಲ್ಲಿ ತರಬೇತಿ ಪಡೆದಿದ್ದು, 1,100 ಗಂಟೆಗಳ ಹಾರಾಟ ಅನುಭವ ಹೊಂದಿದ ಸಹ ಪೈಲಟ್‌ ಆಗಿದ್ದಾರೆ.

---

ದೇಶದ 2ನೇ ಅತಿದೊಡ್ಡ ವಿಮಾನ ದುರಂತ1996ಲ್ಲಿ ಹರ್ಯಾಣದಲ್ಲಿ 2 ವಿಮಾನಗಳ ಡಿಕ್ಕಿ ಸಂಭವಿಸಿ 349 ಜನ ಸಾವನ್ನಪ್ಪಿದ್ದರು. ಹರ್ಯಾಣದ ದಾಧ್ರಿ ಚಕ್ರಿ ಎಂಬಲ್ಲಿ ಅಂದಯ ಘಟನೆ ನಡೆದಿತ್ತು. ಅದಾದ ಬಳಿಕ ದೇಶದಲ್ಲಿ ಸಂಭವಿಸಿದ ಅತಿದೊಡ್ಡ ವಿಮಾನ ದುರಂತ ಇದಾಗಿದೆ. 1996 ರಲ್ಲಿ, ಸೌದಿ ಏರ್‌ಲೈನ್ಸ್‌ ಬೋಯಿಂಗ್ 747 ಮತ್ತು ಚಾರ್ಟರ್ಡ್ ಕಜಕಿಸ್ತಾನ್ ಏರ್‌ಲೈನ್ಸ್‌ ನಡುವೆ ಆಗ ಅಪಘಾತವಾಗಿತ್ತು. ಒಂದು ವಿಮಾನ ಟೇಕಾಫ್‌ ಆಗುತ್ತಿದ್ದರೆ ಇನ್ನೊಂದು ಇಳಿಯುತ್ತಿತ್ತು. 2020ರಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತದಲ್ಲಿ 190 ಜನರು ಸಾವನ್ನಪ್ಪಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ