ಪರಪುರುಷನ ಜತೆ ಸಂಬಂಧಕ್ಕೆ ಆಕ್ಷೇಪಿಸಿದ್ದಕ್ಕೆ ಲವರ್ ಕೊಲೆ
ಇಲ್ಲಿನ ರಹೀಮಾಬಾದ್ ನಿವಾಸಿಯಾಗಿದ್ದ ವಿಜಯ್ ಕುಮಾರ್ ಅಲಿಯಾಸ್ ಗಪ್ಪು ಮೃತ ದುರ್ದೈವಿ. ಜೂ.8ರಂದು ಗಪ್ಪುವಿನ ಶವ ಆತನ ಮನೆ ಬಳಿ ಪತ್ತೆಯಾಗಿತ್ತು. ತನಿಖೆ ಬಳಿಕ ಕುಂತಿ ರಾವತ್, ಆಕೆಯ ಪತಿ ರಾಂಭಜನ್ ಮತ್ತು ಜಬ್ಬಾರ್‌ನನ್ನು ಬಂಧಿಸಲಾಯಿತು.
ಏನಿದು ಘಟನೆ?:ಗಪ್ಪುವಿನ ಪತ್ನಿ 3 ವರ್ಷಗಳ ಹಿಂದೆ ಮೃತಪಟ್ಟಿದ್ದುಳು. ಬಳಿಕ ಆತ, ತನ್ನ ಸಂಬಂಧಿಯಾದ ರಾಂಭಜನ್‌ನ ಹೆಂಡತಿ ಕುಂತಿ ಜತೆ ಸಂಬಂಧ ಬೆಳೆಸಿದ್ದ. ಕುಂತಿ ತನ್ನ ಪತಿಯ ಊಟಕ್ಕೆ ಮದ್ಯ ಸೇರಿಸಿ ಮತ್ತು ಬರಿಸಿ, ಗಪ್ಪು ಜತೆ ಕಾಲ ಕಳೆಯುತ್ತಿದ್ದಳು, ಅವನೊಂದಿಗೆ ಸುತ್ತಾಡುತ್ತಿದ್ದಳು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಅವರ ಪರಿವಾರದಲ್ಲಿ ಗಲಾಟೆ ಸೃಷ್ಟಿಸಿತು.
ಕೆಲ ಕಾಲದ ಬಳಿಕ ಕುಂತಿ, ಇನ್ನೊಬ್ಬನೊಂದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದು ಗಪ್ಪು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕೋಪಗೊಂಡಾಕೆ ತನ್ನ ಪತಿ ಹಾಗೂ ಇನ್ನೊಬ್ಬ ಪ್ರಿಯಕರನೊಂದಿಗೆ ಸೇರಿ, ಗಪ್ಪುವಿನ ಕತ್ತು ಸೀಳಿ ಕೋಂದು, ದೇಹವನ್ನು ಮನೆಯ ಹತ್ತಿರ ಎಸೆದಿದ್ದಳು.