ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ!

KannadaprabhaNewsNetwork |  
Published : Apr 10, 2025, 01:00 AM IST
ಆರ್‌ ಇಂಡಿಯಾ | Kannada Prabha

ಸಾರಾಂಶ

ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೆ ಪ್ರಯಾಣಿಕರ ಅಶಿಸ್ತಿನ ಘಟನೆ ವರದಿಯಾಗಿದ್ದು, ದೆಹಲಿಯಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪಾನಮತತ್ತ ಪ್ರಯಾಣಿಕನೊಬ್ಬ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.

ಏರ್‌ ಇಂಡಿಯಾ ವಿಮಾನದಲ್ಲಿ ಇನ್ನೊಂದು ಘಟನೆ

ಕುಡಿದ ಮತ್ತಲ್ಲಿ ದಿಲ್ಲಿ-ಬ್ಯಾಂಕಾಕ್‌ ವಿಮಾನದಲ್ಲಿ ಮೂತ್ರ

ನವದೆಹಲಿ/ ಮುಂಬೈ: ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೆ ಪ್ರಯಾಣಿಕರ ಅಶಿಸ್ತಿನ ಘಟನೆ ವರದಿಯಾಗಿದ್ದು, ದೆಹಲಿಯಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪಾನಮತತ್ತ ಪ್ರಯಾಣಿಕನೊಬ್ಬ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.ರಾಷ್ಟ್ರ ರಾಜಧಾನಿಯಿಂದ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಎಐ2336 ವಿಮಾನದಲ್ಲಿ ಪ್ರಯಾಣಿಕನ ಅಶಿಸ್ತಿನ ಬಗ್ಗೆ ಸಿಬ್ಬಂದಿಗೆ ವರದಿಯಾಗಿದೆ ಎಂದು ಏರ್‌ ಇಂಡಿಯಾ ಖಚಿತಪಡಿಸಿದೆ.

ಈ ಬಗ್ಗೆ ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ ಅಶಿಸ್ತಿನ ವರ್ತನೆ ಕುರಿತು ಮಾಹಿತಿ ನೀಡಿದ್ದು, ಸಂತ್ರಸ್ತ ಪ್ರಯಾಣಿಕನಿಗೆ ತಾನು ಸಹಾಯ ಮಾಡುವುದಾಗಿ ಹೇಳಿದರೂ ಆತ ನಿರಾಕರಿಸಿದ ಎಂದು ಅದು ಸ್ಪಷ್ಟಪಡಿಸಿದೆ.

ಘಟನೆ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘ವಿಮಾನಯಾನ ಸಂಸ್ಥೆಯ ಬಗ್ಗೆ ಮಾತನಾಡುತ್ತೇನೆ. ಯಾವುದೇ ತಪ್ಪು ನಡೆದಿದ್ದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ಕಳೆದ 2 ವರ್ಷಗಳಲ್ಲಿ ಪ್ರಯಾಣಿಕರು ಮದ್ಯ ಸೇವಿಸಿದ ನಂತರ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಹಲವಾರು ಘಟನೆಗಳು ವರದಿಯಾಗಿವೆ.

ಮಾರ್ಚ್ 2023 ರಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಅಮೆರಿಕದ ವಿವಿಯ ಭಾರತೀಯ ವಿದ್ಯಾರ್ಥಿ ಆರ್ಯ ವೋಹ್ರಾ ಎಂಬಾತನನ್ನು ಅಮೆರಿಕನ್ ಏರ್‌ಲೈನ್ಸ್ ನಿಷೇಧಿಸಿತ್ತು.

ನವೆಂಬರ್ 2024 ರಲ್ಲಿ, ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ವೃದ್ಧ ಮಹಿಳೆಯ ಮೇಲೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ