ಈ ವರ್ಷ ಚುನಾವಣೆ ನಡೆಯಲಿರುವ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ತಮಗೆ ವಹಿಸಲಾಗಿದ್ದ 6 ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಣೆಯಿಂದ ದಿಢೀರ್‌ ಹಿಂದೆ ಸರಿದಿದ್ದಾರೆ. ಅವರು ಸ್ಪರ್ಧಿಸುತ್ತಾರೆ ಎನ್ನಲಾದ ಸಿಂಗನಲ್ಲೂರು ಕ್ಷೇತ್ರವೂ ಇದರಲ್ಲಿ ಸೇರಿರುವುದು ಗಮನಾರ್ಹ.

-ತಂದೆಯ ಅನಾರೋಗ್ಯ ಕಾರಣ ನೀಡಿ ಹಿಂದಕ್ಕೆ

ಕೊಯಮತ್ತೂರು: ಈ ವರ್ಷ ಚುನಾವಣೆ ನಡೆಯಲಿರುವ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ತಮಗೆ ವಹಿಸಲಾಗಿದ್ದ 6 ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಣೆಯಿಂದ ದಿಢೀರ್‌ ಹಿಂದೆ ಸರಿದಿದ್ದಾರೆ. ಅವರು ಸ್ಪರ್ಧಿಸುತ್ತಾರೆ ಎನ್ನಲಾದ ಸಿಂಗನಲ್ಲೂರು ಕ್ಷೇತ್ರವೂ ಇದರಲ್ಲಿ ಸೇರಿರುವುದು ಗಮನಾರ್ಹ.

ಮಂಗಳವಾರ ಈ ಕುರಿತು ಹೇಳಿಕೆ ನೀಡಿದ ಅವರು, ‘ನನ್ನ ತಂದೆಗೆ ಅನಾರೋಗ್ಯದ ಕಾರಣ ಅವರನ್ನು ನೋಡಿಕೊಳ್ಳಲು ಕೊಯಮತ್ತೂರಿನಲ್ಲಿಯೇ ಉಳಿದುಕೊಂಡಿದ್ದೇನೆ. ಅದು ನನ್ನ ಮೊದಲ ಕರ್ತವ್ಯ. ಆದ್ದರಿಂದ, ನನಗೆ ಚುನಾವಣಾ ಕೆಲಸಗಳನ್ನು ಮಾಡಲು ಅಥವಾ ಹೆಚ್ಚು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ರಾಜ್ಯಾಧ್ಯಕ್ಷ ನೈನಾರ್ ನಾಗೇಂತಿರನ್ ಅವರಿಗೆ ತಿಳಿಸಿದ್ದೇನೆ. ಪಕ್ಷವು ಈ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ಮರು ನಿಯೋಜಿಸಲಿದೆ’ ಎಂದಿದ್ದಾರೆ.

ಬಿಜೆಪಿಯು ತಾನು ಸ್ಪರ್ಧೆ ಮಾಡಲಿರುವ 41 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ.