ಗೋವಾ ಸರ್ಕಾರ ಮತ್ತು ಜಾಗತಿಕ ಐರನ್‌ಮ್ಯಾನ್ ಬ್ರ್ಯಾಂಡ್‌ನ ಸಹಯೋಗದೊಂದಿಗೆ ಯೋಸ್ಕಾ ಸಂಸ್ಥೆಯು ಗೋವಾದಲ್ಲಿ ಆಯೋಜಿಸಿದ್ದ ಐರನ್‌ಮ್ಯಾನ್‌ 70.3 ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಫಿನಿಷರ್ ಪ್ರಶಸ್ತಿ ಪಡೆದಿದ್ದಾರೆ.

ಪಣಜಿ: ಗೋವಾ ಸರ್ಕಾರ ಮತ್ತು ಜಾಗತಿಕ ಐರನ್‌ಮ್ಯಾನ್ ಬ್ರ್ಯಾಂಡ್‌ನ ಸಹಯೋಗದೊಂದಿಗೆ ಯೋಸ್ಕಾ ಸಂಸ್ಥೆಯು ಗೋವಾದಲ್ಲಿ ಆಯೋಜಿಸಿದ್ದ ಐರನ್‌ಮ್ಯಾನ್‌ 70.3 ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಫಿನಿಷರ್ ಪ್ರಶಸ್ತಿ ಪಡೆದಿದ್ದಾರೆ.

ಈಜಿ, ಮ್ಯಾರಥಾನ್‌ ಮುಗಿಸಿ ಈ ಸಾಧನೆ

ಇಬ್ಬರೂ ಒಟ್ಟಿಗೆ ಮಿರಾಮಾರ್ ಬೀಚ್‌ನಲ್ಲಿ 1.9 ಕಿ.ಮೀ. ಈಜಿ, 90 ಕಿ.ಮೀ. ಸೈಕ್ಲಿಂಗ್‌ ಮಾಡಿ 21 ಕಿ.ಮೀ. ಮ್ಯಾರಥಾನ್‌ ಮುಗಿಸಿ ಈ ಸಾಧನೆ ಮಾಡಿದ್ದಾರೆ.

ತೇಜಸ್ವಿ 2ನೇ ಬಾರಿ ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ

 ತೇಜಸ್ವಿ 2ನೇ ಬಾರಿ ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಅಣ್ಣಾಮಲೈ ಅವರಿಗಿದು ಮೊದಲ ಅನುಭವ.