ಏ.10ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ : ಮೈತ್ರಿ, ಅಣ್ಣಾಮಲೈ ಹಣೆಬರಹದ ಚರ್ಚೆ

| N/A | Published : Apr 06 2025, 01:49 AM IST / Updated: Apr 06 2025, 08:12 AM IST

Tamil Nadu Bharatiya Janata Party (BJP) chief K Annamalai (File Photo/ANI)

ಸಾರಾಂಶ

ಏ.10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸಲಿದ್ದಾರೆ. ಪತ್ರಕರ್ತ, ಆರ್‌ಎಸ್‌ಎಸ್‌ ಚಿಂತಕ ಎಸ್. ಗುರುಮೂರ್ತಿಯವರನ್ನು ಭೇಟಿಯಾಗಿ ತಮಿಳುನಾಡು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈ: ಏ.10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸಲಿದ್ದಾರೆ. ಪತ್ರಕರ್ತ, ಆರ್‌ಎಸ್‌ಎಸ್‌ ಚಿಂತಕ ಎಸ್. ಗುರುಮೂರ್ತಿಯವರನ್ನು ಭೇಟಿಯಾಗಿ ತಮಿಳುನಾಡು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕ್ತರಾಗಲು ಇಂಗಿತ ವ್ಯಕ್ತಪಡಿಸಿರುವ ಕೆ. ಅಣ್ಣಾಮಲೈಗೆ ಭವಿಷ್ಯದ ಸ್ಥಾನಮಾನ ಮತ್ತು ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಕುರಿತಾಗಿ ಉಭಯರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಎಸ್‌. ಗುರುಮೂರ್ತಿ ತಮಿಳಿನ ತುಘಲಕ್ ಪತ್ರಿಕೆಯ ಸಂಪಾದಕರಾಗಿದ್ದು, ದಶಕಗಳಿಂದ ಆರ್‌ಎಸ್‌ಎಸ್‌ ಒಡನಾಟದಲ್ಲಿದ್ದಾರೆ.