ಏರ್ ಇಂಡಿಯಾ ಪೈಲಟ್‌ಮದ್ಯ ಸೇವನೆ : ಕೆನಡಾ ಏರ್ಪೋರ್ಟ್‌ನಲ್ಲಿ ವಶಕ್ಕೆ

KannadaprabhaNewsNetwork |  
Published : Jan 02, 2026, 02:15 AM IST
air india pilot

ಸಾರಾಂಶ

ಕೆನಡಾದ ವ್ಯಾಂಕೋವರ್‌ನಿಂದ ದೆಹಲಿಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆಗುವ ಕೆಲವೇ ಕ್ಷಣಗಳ ಮುನ್ನ ಪೈಲಟ್‌ ಮದ್ಯ ಸೇವಿಸಿದ್ದು ತಿಳಿದಿದ್ದರಿಂದ ಆತನನ್ನು ವಶಕ್ಕೆ ಪಡೆದ ಘಟನೆ ಡಿ.23ರಂದು ನಡೆದಿದೆ.

ನವದೆಹಲಿ: ಕೆನಡಾದ ವ್ಯಾಂಕೋವರ್‌ನಿಂದ ದೆಹಲಿಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆಗುವ ಕೆಲವೇ ಕ್ಷಣಗಳ ಮುನ್ನ ಪೈಲಟ್‌ ಮದ್ಯ ಸೇವಿಸಿದ್ದು ತಿಳಿದಿದ್ದರಿಂದ ಆತನನ್ನು ವಶಕ್ಕೆ ಪಡೆದ ಘಟನೆ ಡಿ.23ರಂದು ನಡೆದಿದೆ.

ಪೈಲಟ್‌ ತೋರಿದ ಬೇಜವಾಬ್ದಾರಿತನ

ಪೈಲಟ್‌ ತೋರಿದ ಬೇಜವಾಬ್ದಾರಿತನಕ್ಕೆ ಕೆನಡಾ ಆಡಳಿತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮದ್ಯಪಾನ ಮಾಡುತ್ತಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ತಿಳಿಸಿದ್ದ ಸಿಬ್ಬಂದಿ

ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಪೈಲಟ್ ಮದ್ಯಪಾನ ಮಾಡುತ್ತಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ತಿಳಿಸಿದ್ದರು. ನಂತರ ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ, ಮದ್ಯಪಾನ ಮಾಡಿದ್ದು ದೃಢವಾಗಿದೆ. ಹಾಗಾಗಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ‘ಸದ್ಯ ತನಿಖೆಗೆ ಒಳಪಟ್ಟಿರುವ ಪೈಲಟ್‌ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ತನಿಖೆಯ ನಂತರ, ತಪ್ಪು ಸಾಬೀತಾದರೆ ಸಂಸ್ಥೆ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸಲಿದೆ’ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!
ಸ್ವಿಜರ್ಲೆಂಡಲ್ಲಿ ಗೋವಾ ಪಬ್‌ ಮಾದರಿ ದುರಂತ : 40 ಬಲಿ