ವಾಯು ಮಾಲಿನ್ಯದಿಂದ ಭಾರತೀಯರ ಆಯಸ್ಸು ಸರಾಸರಿ 3.5 ವರ್ಷ ಕಡಿತ

KannadaprabhaNewsNetwork |  
Published : Aug 29, 2025, 01:00 AM IST
ವಾಯು ಮಾಲಿನ್ಯ  | Kannada Prabha

ಸಾರಾಂಶ

ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಜನರ ಆಯಸ್ಸು 3.5 ವರ್ಷ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯೊಂದು ಎಚ್ಚರಿಸಿದೆ. ಈ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಜನರ ಆಯಸ್ಸು ಸರಾಸರಿ 8.2 ವರ್ಷ ಆಯಸ್ಸು ಕಡಿಮೆಯಾಗುವ ಅಪಾಯವಿದೆ ಎಂದಿದೆ.

 ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಜನರ ಆಯಸ್ಸು 3.5 ವರ್ಷ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯೊಂದು ಎಚ್ಚರಿಸಿದೆ. ಈ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಜನರ ಆಯಸ್ಸು ಸರಾಸರಿ 8.2 ವರ್ಷ ಆಯಸ್ಸು ಕಡಿಮೆಯಾಗುವ ಅಪಾಯವಿದೆ ಎಂದಿದೆ.

ಶಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಸಂಸ್ಥೆ( ಎಪಿಕ್) ಈ ಬಗ್ಗೆ ಸಂಶೋಧನೆಯನ್ನು ಮಾಡಿ 2025ನೇ ಸಾಲಿನ ವರದಿ ಸಿದ್ಧಪಡಿಸಿದೆ. ಇದು 2022,2023ನೇ ಸಾಲಿಗೆ ಹೋಲಿಸಿದರೆ ಅತ್ಯಧಿಕ ಎಂದು ವರದಿ ಹೇಳಿದೆ.

ವರದಿ ಅನ್ವಯ, ಪ್ರಸಕ್ತ ದೇಶದಲ್ಲಿನ ವಾಯುಮಾಲಿನ್ಯದ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಿಂತ ಶೇ.8 ಪಟ್ಟು ಹೆಚ್ಚು. ಹೀಗಾಗಿ ಇದು ಭಾರತೀಯರ ಸರಾಸರಿ ಜೀವಿತಾವಧಿಯನ್ನು 3.5 ವರ್ಷ ಕಡಿಮೆ ಮಾಡಲಿದೆ.

ಅತಿಹೆಚ್ಚು ಕಲುಷಿತಗೊಂಡಿರುವ ಸ್ಥಳಗಳಲ್ಲಿ ಉತ್ತರ ರಾಜ್ಯಗಳೇ ಹೆಚ್ಚು. ಈ ಪೈಕಿ ದೇಶದ ಅತ್ಯಂತ ಕಲುಷಿತ ನಗರ ಎಂದು ಹಣೆಪಟ್ಟಿ ಹೊತ್ತಿರುವ ದೆಹಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಜನರು ಕಲುಷಿತ ವಾತಾವರಣದಿಂದ 8.2 ವರ್ಷ ಆಯಸ್ಸು ಕಳೆದುಕೊಳ್ಳಲಿದ್ದಾರೆ. 2022ರಲ್ಲಿ ಈ ಪ್ರಮಾಣ 7.8 ವರ್ಷ ಇತ್ತು. ದೆಹಲಿ ಹೊರತುಪಡಿಸಿದರೆ ಬಿಹಾರ (5.4 ವರ್ಷ), ಹರ್ಯಾಣ (5.3 ವರ್ಷ). ಉತ್ತರ ಪ್ರದೇಶ (5 ವರ್ಷ) ವರ್ಷಗಳಿವೆ ಆ ನಂತರದ ಸ್ಥಾನದಲ್ಲಿ ರಾಜಸ್ಥಾನ, ಮಧ್ಯಪ್ರದೇಶ , ಮಹಾರಾಷ್ಟ್ರ ಇದೆ.

ಕ್ರಮ ಅಗತ್ಯ.:

ಭಾರತ ಮನಸ್ಸು ಮಾಡಿದರೆ ಇದರಿಂದ ಮುಕ್ತವಾಗಬಹುದು ಎಂದು ವರದಿ ಹೇಳಿದೆ. ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದಡಿ 2026ರೊಳಗೆ ಶೇ.40ರಷ್ಟು ಮಲಿನತೆ ತಗ್ಗಿಸಲು ಹಾಕಿಕೊಂಡಿರುವ ಗುರಿ ಸಾಧಿಸಿದರೆ ಈ ವ್ಯಾಪ್ತಿಯಲ್ಲಿ ಬರುವ 131 ನಗರಗಳ ಜನರು 2017ರಲ್ಲಿ ಜೀವಿತಾವಧಿಗಿಂತ 2 ವರ್ಷ ಹೆಚ್ಚು ಆಯಸ್ಸು ಪಡೆಯಲಿದ್ದಾರೆ. ಜತೆಗೆ ಕಡಿಮೆ ಮಲಿನತೆ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಆಯಸ್ಸು 9.4 ತಿಂಗಳು ಹೆಚ್ಚಾಗಬಹುದು ಎಂದಿದೆ.

PREV
Read more Articles on

Recommended Stories

ಜಿ-ಕ್ಯಾಪ್ 2025 : ಭೂಮಿ ಪುನಃಸ್ಥಾಪನೆಯಲ್ಲಿ ಭಾರತದ ಸಾಧನೆ
ಇಂದು ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‌ಡಿಎಗೆ 300+ ಸೀಟು