ನವದೆಹಲಿ: ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಕೂಟಕ್ಕೆ ಬಿಹಾರ ಸೇರಿ ವಿವಿಧ ಚುನಾವಣೆಗಳಲ್ಲಿ ಸಾಲು ಸಾಲು ಚುನಾವಣಾ ಸೋಲಿನ ಬೆನ್ನಲ್ಲೇ ಮೈತ್ರಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಶುರುವಾಗಿದೆ. ಕಾಂಗ್ರೆಸ್ ಬದಲು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅಥವಾ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕೂಟದ ಹೊಣೆಗಾರಿಕೆ ನೀಡಬೇಕು ಎನ್ನುವ ಆಗ್ರಹ ಜೋರಾಗಿದೆ.
ಈ ಬಗ್ಗೆ ಸಮಾಜವಾದಿ ಪಕ್ಷದ ಶಾಸಕ ರವಿದಾಸ್ ಮೆಹ್ರೋತ್ರಾ ಧ್ವನಿ ಎತ್ತಿದ್ದು, ‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮೈತ್ರಿಕೂಟದ ನಾಯಕತ್ವ ವಹಿಸಬೇಕು. ಅವರು ಉತ್ತರಪ್ರದೇಶದಲ್ಲಿ ಸ್ವತಂತ್ರ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಅಖಿಲೇಶ್ ಪರ ಬ್ಯಾಟ್ ಬೀಸಿದ್ದಾರೆ.
ಮತ್ತೊಂದೆಡೆ ಟಿಎಂಸಿ ನಾಯಕರು ಮಾತನಾಡಿ, ‘ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಇಂಡಿಯಾ ಕೂಟ ಬಲವಾಗಬೇಕು. ಅದಕ್ಕೆ ಪಶ್ಚಿಮ ಬಂಗಾಳ ಸಿಎಂ , ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೂಕ್ತರು. ಅವರಿಗೆ ಇಂಡಿಯಾ ಕೂಟದ ಸಾರಥ್ಯ ನೀಡಬೇಕು’ ಎಂದು ಪ್ರತಿಪಾದಿಸಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಯ ಬಳಿಕವೂ ಇಂಥದ್ದೇ ಕೂಗು ಕೇಳಿಬಂದಿತ್ತು.
ಇಂಡಿಯಾ ಕೂಟಕ್ಕೆ ಇಂಥವರೇ ನಿರ್ದಿಷ್ಟ ನಾಯಕ ಎಂದೇನೂ ಇಲ್ಲ. ಆದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೇ ಮುಂದಾಳತ್ವ ವಹಿಸುತ್ತಾರೆ. ಇದು ಅನ್ಯ ಮಿತ್ರಪಕ್ಷಗಳ ಬೇಸರಕ್ಕೆ ಕಾರಣವಾಗಿದೆ.
ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಲ್ಲದೇ, ಇಂಡಿಯಾ ಕೂಟಕ್ಕು ನೆರವಾಗದ ಕಾಂಗ್ರೆಸ್
ಇದರ ಬೆನ್ನಲ್ಲೇ ಇಂಡಿಯಾ ಕೂಟದ ನಾಯಕತ್ವದಿಂದ ಕಾಂಗ್ರೆಸ್ ಬದಲಿಸಲು ಇಂಡಿಯಾ ಕೂಟದಲ್ಲಿ ಆಗ್ರಹ
ಕಾಂಗ್ರೆಸ್ ಬದಲು ಸಮಾಜವಾದಿ ಪಕ್ಷದ ಅಖಿಲೇಶ್ ಅಥವಾ, ಟಿಎಂಸಿಯ ಮಮತಾಗೆ ನಾಯಕತ್ವಕ್ಕೆ ಬೇಡಿಕೆ
ಈ ಹಿಂದೆ ಲೋಕಸಭಾ ಚುನಾವಣೆ ಸೋಲಿನ ಬಳಿಕವೂ ಇಂಡಿಯಾ ಕೂಟದ ಸದಸ್ಯರಿಂದ ಇಂಥದ್ದೇ ಕೂಗು