ಆಪರೇಷನ್‌ ಬ್ಲೂಸ್ಟಾರ್‌ ಮಾಹಿತಿ ಕೇಳಿ ಅಲ್ಕಾ ಲಾಂಬಾ ಎಡವಟ್‌

KannadaprabhaNewsNetwork |  
Published : May 25, 2025, 11:57 PM ISTUpdated : May 26, 2025, 05:10 AM IST
ಅಲ್ಕಾ  | Kannada Prabha

ಸಾರಾಂಶ

ಕೇಂದ್ರ ಸರ್ಕಾರ ನಡೆಸಿದ ‘ಆಪರೇಷನ್‌ ಸಿಂದೂರ’ದ ಕುರಿತು ಕೇಂದ್ರ ಸರ್ಕಾರ ಪೂರ್ಣ ಮಾಹಿತಿ ನೀಡಬೇಕು ಎಂದು ಕೇಳುವ ಭರದಲ್ಲಿ ಕಾಂಗ್ರೆಸ್‌ ವಕ್ತಾರೆ ಅಲ್ಕಾ ಲಂಬಾ, ಮಾಜಿ ಪ್ರಧಾನಿ ಪ್ರಧಾನಿ ಇಂದಿರಾ ಗಾಂಧಿ ನಡೆಸಿದ ‘ಆಪರೇಷನ್‌ ಬ್ಲೂಸ್ಟಾರ್‌’ ಮಾಹಿತಿ ಕೇಳಿ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ನಡೆಸಿದ ‘ಆಪರೇಷನ್‌ ಸಿಂದೂರ’ದ ಕುರಿತು ಕೇಂದ್ರ ಸರ್ಕಾರ ಪೂರ್ಣ ಮಾಹಿತಿ ನೀಡಬೇಕು ಎಂದು ಕೇಳುವ ಭರದಲ್ಲಿ ಕಾಂಗ್ರೆಸ್‌ ವಕ್ತಾರೆ ಅಲ್ಕಾ ಲಂಬಾ, ಮಾಜಿ ಪ್ರಧಾನಿ ಪ್ರಧಾನಿ ಇಂದಿರಾ ಗಾಂಧಿ ನಡೆಸಿದ ‘ಆಪರೇಷನ್‌ ಬ್ಲೂಸ್ಟಾರ್‌’ ಮಾಹಿತಿ ಕೇಳಿ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ. 

ಭಾನುವಾರ ಇಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಕಾ ಲಂಬಾ ‘ಸೇನಾ ಕಾರ್ಯಾಚರಣೆ ಬಗ್ಗೆ ಚರ್ಚಿಸಲು ಸರ್ಕಾರ ಸಂಸತ್‌ ಅಧಿವೇಶನ ಕರೆದು ‘ಆಪರೇಷನ್‌ ಬ್ಲೂಸ್ಟಾರ್‌’ ಬಗ್ಗೆ ಮಾಹಿತಿ ನೀಡಬೇಕು’ ಎಂದರು. ಸಿಂದೂರ ಎನ್ನುವ ಬದಲು ಬ್ಲೂಸ್ಟಾರ್ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಲಂಬಾರ ಹೇಳಿಕೆ, ಕಾಂಗ್ರೆಸ್‌ನ ಕುಹಕ ಮತ್ತು ನುಣುಚಿಕೊಳ್ಳುವ ಮನಸ್ಥಿತಿ ಎಂದಿದೆ.

2028ಕ್ಕೆ ಗುಜರಾತಿನಿಂದ ದೇಶದ ಮೊದಲ ಬುಲೆಟ್‌ ರೈಲು ಸಂಚಾರ

- 2030ಕ್ಕೆ ಮುಂಬೈನಲ್ಲಿ ರೈಲು ಸಂಚಾರ । 508 ಕಿ,ಮೀ ಮಾರ್ಗನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬುಲೆಟ್‌ ರೈಲು 2028ಕ್ಕೆ ತನ್ನ ಮೊದಲ ಸಂಚಾರವನ್ನು ಆರಂಭಿಸಲಿದ್ದು, ಗುಜರಾತ್‌ನಿಂದ ಬುಲೆಟ್‌ ರೈಲು ಪ್ರಾರಂಭವಾಲಿದೆ. ಆದರೆ ಅದು ಮುಂಬೈಗೆ ಸಂಚಾರ ಕೈಗೊಳ್ಳಲು 2030ರವರೆಗೆ ಕಾಯಬೇಕಾಗಬಹುದು ಎಂದು ವರದಿಯೊಂದು ತಿಳಿಸಿದೆ.

ಅಹಮದಾಬಾದ್‌ ಮತ್ತು ಮುಂಬೈ ನಡುವಣ 508 ಕಿ.ಮೀ ಮಾರ್ಗದಲ್ಲಿ 2025ರಲ್ಲಿಯೇ ಬುಲೆಟ್‌ ರೈಲು ಸಂಚರಿಸಬೇಕಿತ್ತು. ಆದರೆ ಹಿಂದಿನ ಮಹಾ ವಿಕಾಸದ ಅಘಾಡಿ ಸರ್ಕಾರ ಭೂಸ್ವಾಧೀನಕ್ಕೆ ಅಡ್ಡಿಪಡಿಸಿದ್ದ ಕಾರಣ ಯೋಜನೆ ವಿಳಂಬವಾಗಿತ್ತು. ಇದೀಗ ಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, 2028ಕ್ಕೆ ಗುಜರಾತ್‌ನ ಸಬರಮತಿ ಮತ್ತು ವಾಪಿ ಸಂಚಾರ ಆರಂಭದ ನಿರೀಕ್ಷೆ ವ್ಯಕ್ತವಾಗಿದೆ.

2030ರ ವೇಳೆಗೆ ಅಹಮದಾಬಾದ್‌ನಿಂದ ಮುಂಬೈ 508 ಕಿ.ಮೀ ವಿಭಾಗದಲ್ಲಿ ರೈಲು ಚಲಿಸಲಿದೆ. ಈ ಮಾರ್ಗ ಮಹಾರಾಷ್ಟ್ರದ ಮುಂಬೈ- ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ , ಥಾಣೆ, ವಿರಾರ್ ಮತ್ತು ಬೋಯಿಸರ್ ಮತ್ತು ಗುಜರಾತ್‌ನ ವಾಪಿ, ಬಿಲಿಮೊರಾ, ಸೂರತ್‌, ಭರೂಚ್‌, ವಡೋದರಾ, ಆನಂದ್ , ಅಹಮದಾಬಾದ್‌ ಮತ್ತು ಸಬರಮತಿ ಮೂಲಕ ಒಟ್ಟು 508 ಕಿ.ಮೀ ಹಾದು ಹೋಗುತ್ತದೆ,

ವಾಪಿ ಮತ್ತು ಸಬರಮತಿ ನಡುವಿನ ಹೈಸ್ಪೀಡ್‌ ರೈಲು ಮಾರ್ಗವು ಗುಜರಾತ್ ವಿಭಾಗದ ಸುಮಾರು 348 ಕಿ.ಮೀ ಗಳಷ್ಟಿದ್ದರೆ ಮಹಾರಾಷ್ಟ್ರದಲ್ಲಿ ರೈಲು ಮಾರ್ಗವು 156 ಕಿ.ಮೀ ಗಳಷ್ಟಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!