ಶಾರ್ಕ್‌ ಟ್ಯಾಂಕ್‌ ರಿಯಾಲಿಟಿ ಶೋನಲ್ಲೂ ಹಿಂದಿ ಹೇರಿಕೆ: ತ.ನಾಡು ಉದ್ಯಮಿ ಕಾರ್ತಿಕ್‌ ಮಣಿಕೊಂಡಾ ಕಿಡಿ

KannadaprabhaNewsNetwork |  
Published : Mar 09, 2024, 01:30 AM ISTUpdated : Mar 09, 2024, 08:48 AM IST
ಕಾರ್ತಿಕ ಮಣಿಕೊಂಡ | Kannada Prabha

ಸಾರಾಂಶ

ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡಲು ಬಾರದ ಕಾರಣ ತಮಗೆ ಶಾರ್ಕ್‌ ಟ್ಯಾಂಕ್‌ ರಿಯಾಲಿಟಿ ಶೋನಲ್ಲಿ ಅವಕಾಶ ನಿರಾಕರಿಸಲಾಯಿತು.

ಚೆನ್ನೈ: ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡಲು ಬಾರದ ಕಾರಣ ತಮಗೆ ಶಾರ್ಕ್‌ ಟ್ಯಾಂಕ್‌ ರಿಯಾಲಿಟಿ ಶೋನಲ್ಲಿ ಅವಕಾಶ ನಿರಾಕರಿಸಲಾಯಿತು ಎಂದು ತಮಿಳುನಾಡು ಮೂಲದ ಉದಯೋನ್ಮುಖ ಉದ್ಯಮಿ, ದಿ ಮೈಂಡ್‌ ಅಂಡ್‌ ಕಂಪನಿ ಸಂಸ್ಥಾಪಕ ಕಾರ್ತಿಕ್‌ ಮಣಿಕೊಂಡಾ ಆರೋಪಿಸಿದ್ದಾರೆ.

ಈ ಕುರಿತು ತಮ್ಮ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ ಮಾಡಿರುವ ಕಾರ್ತಿಕ್‌, ‘ಶಾರ್ಕ್‌ ಟ್ಯಾಂಕ್‌ ಇಂಡಿಯಾ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ ಆಯ್ಕೆಯಾಗಿದ್ದರೂ ನನಗೆ ಹಿಂದಿಯಲ್ಲಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂಬ ಏಕಮಾತ್ರ ಕಾರಣಕ್ಕೆ ಅವಕಾಶವನ್ನು ನಿರಾಕರಣೆ ಮಾಡಲಾಯಿತು. 

ಈ ರೀತಿಯಲ್ಲಿ ಭಾಷೆಯ ಸಮಸ್ಯೆಯಿಂದಾಗಿ ಸಂಸ್ಥೆಯೊಂದಕ್ಕೆ ಅವಕಾಶ ಸಿಗದಂತೆ ತಡೆಯಲು ಎಐ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಶಾರ್ಕ್‌ ಟ್ಯಾಂಕ್‌ ಎನ್ನುವುದು ಭಾರತದ ಯಶಸ್ವಿ ಸ್ಟಾರ್ಟಪ್‌ ಉದ್ಯಮಿಗಳು ನಡೆಸಿಕೊಡುವ ಕಾರ್ಯಕ್ರಮ. ಇದಕ್ಕೆ ಆಯ್ಕೆಯಾದವರು.

ತಮ್ಮ ಉದ್ಯಮದ ಕುರಿತು ಪ್ರಸ್ತಾಪ ಮಾಡಿ, ಶಾರ್ಕ್‌ಟ್ಯಾಂಕ್‌ಗಳಿಂದ ಅಗತ್ಯ ಬಂಡವಾಳ ಹೂಡಿಕೆ ಸ್ವೀಕರಿಸುವ ಅವಕಾಶ ಹೊಂದಿರುತ್ತಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ