ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
ಶ್ರೀನಗರ: ಯಾತ್ರಿಗಳ ಅನುಕೂಲಕ್ಕಾಗಿ ಪವಿತ್ರ ಅಮರನಾಥ ಗುಹೆಗೆ ರಸ್ತೆ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಜನ ಸೇವೆಗೆ ಲಭ್ಯವಾಗಲಿದೆ ಎಂದು ಗಡಿ ರಸ್ತೆ ಪ್ರಾಧಿಕಾರ ಹೇಳಿದೆ. ಸಮುದ್ರ ಮಟ್ಟದಿಂದ ಸುಮಾರು 3888 ಮೀ. ಎತ್ತರದಲ್ಲಿರುವ ಈ ಗುಹೆಯ ಹಾದಿಯಲ್ಲಿ ಈಗಾಗಲೇ ಗಡಿ ರಸ್ತೆ ಪ್ರಾಧಿಕಾರ ರಸ್ತೆ ಅಗಲೀಕರಣ ಕಾರ್ಯವನ್ನು ಆರಂಭಿಸಿದೆ. ಬಾಲ್ಟಾಲ್‌ವರೆಗೆ ಬಹುಪಾಲು ರಸ್ತೆ ನಿರ್ಮಾಣವಾಗಿದೆ. ಸಣ್ಣ ಟ್ರಕ್ ಮತ್ತು ಇತರ ವಾಹನಗಳನ್ನು ಬಳಸಿಕೊಂಡು ಗುಹೆವರೆಗೂ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಅಲ್ಲದೇ ಚಂದನ್ಬಾರಿ ಕಡೆಯಿಂದ ಅಮರನಾಥಕ್ಕೆ ಹೋಗುವ ದಾರಿಯಲ್ಲಿ ಶೇಷನಾಗ್ ಮತ್ತು ಪಂಚತಾರಿಣಿ ನಡುವೆ ಸುಮಾರು 10.8 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲು ಸಹ ಯೋಜಿಸಲಾಗಿದೆ. ಇದರಿಂದಾಗಿ ಹವಾಮಾನ ವೈಪರೀತ್ಯದ ಸಮಯದಲ್ಲೂ ಯಾತ್ರಿಗಳು ಸುರಕ್ಷಿತವಾಗಿ ಮತ್ತು ತಡೆಯಿಲ್ಲದೇ ಅಮರನಾಥ ಯಾತ್ರೆ ಕೈಗೊಳ್ಳಬಹುದಾಗಿದೆ. ಇದರೊಂದಿಗೆ ಪಂಚತಾರಿಣಿಯಿಂದ ಗುಹೆಯವರೆಗೆ 5 ಕಿ.ಮೀ. ಉದ್ದದ ಮತ್ತು ಐದುವರೆ ಮೀ. ಅಗಲದ ರಸ್ತೆ ನಿರ್ಮಾಣ ಸಹ ಮಾಡಲಾಗುತ್ತದೆ.