ವನೇಶ್ವರ್: ಒಡಿಶಾದ ಸರಣ್‌ಗಢದಿಂದ ಭುವನೇಶ್ವರ್‌ಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಮಾರ್ಗಮಧ್ಯೆ ಹೃದಯ ಸ್ತಂಭನವಾದರೂ ಆತನ ಸಮಯಪ್ರಜ್ಞೆಯಿಂದ 48 ಜನರ ಜೀವ ಉಳಿದಿದೆ. ಕಂದಮಹಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಬಸ್ ಚಾಲಕನಿಗೆ ಎದೆನೋವು ಕಾಣಿಸಿಕೊಂಡ ಮರುಕ್ಷಣವೇ ಬಸ್ಸನ್ನು ಪಕ್ಕದಲ್ಲಿದ್ದ ಗೋಡೆಗೆ ಜಜ್ಜಿಕೊಂಡು ಹೋಗಿ ನಿಲ್ಲುವಂತೆ ಮಾಡಿದ್ದಾನೆ. ಈ ಮೂಲಕ ಸಂಭವನೀಯ ರಸ್ತೆ ಅಪಘಾತವನ್ನು ಸನಾ ಪ್ರಧಾನ್ ಎಂಬ ಚಾಲಕ ತಪ್ಪಿಸಿದರೂ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಹೃದಯ ಸ್ತಂಭನದಿಂದ ಅಸುನೀಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಬಸ್ ಮತ್ತೊಬ್ಬ ಚಾಲಕನ ಸಹಾಯದಿಂದ ಗಮ್ಯ ಸ್ಥಾನವಾದ ಭುವನೇಶ್ವರದತ್ತ ತೆರಳಿದೆ.