ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್ ಪಾಂಡೆ ತಿಳಿಸಿದ್ದಾರೆ
ಶೀಘ್ರ ₹100 ತಲುಪುವ ಕಳವಳ ನವದೆಹಲಿ: ಟೊಮೆಟೋ ಬಳಿಕ ಈರುಳ್ಳಿ ದರ ಏರುಮುಖದಲ್ಲೇ ಸಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 1 ಕೆಜಿ ಈರುಳ್ಳಿ ಬೆಲೆ 70 ರು ತಲುಪಿದೆ. ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ತನ್ನ ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ಪ್ರತಿ ಕೆಜಿಗೆ 25 ರು.ನಂತೆ ಮಾರಾಟ ಮಾಡಲು ಆರಂಭಿಸಿದ್ದರೂ ದರ ಇಳಿಕೆಯಾಗುವ ಬದಲು ಏರುಮುಖದಲ್ಲೇ ಸಾಗುತ್ತಿದೆ. ಮಳೆ ಕೊರತೆ ಹಾಗೂ ಅತಿವೃಷ್ಟಿ ಕಾರಣ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ ಮಾರುಕಟ್ಟೆಗೆ ಈರುಳ್ಳಿ ಸರಬರಾಜು ಭಾರಿ ಇಳಿಕೆಯಾಗಿದೆ. ಜೊತೆಗೆ ನವರಾತ್ರಿ ಬಳಿಕ ಬೇಡಿಕೆ ಹೆಚ್ಚಾಗಿರುವುದು ಏಕಾಏಕಿ ಬೆಲೆ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್‌ವರೆಗೂ ಬೆಲೆ ಏರಿಕೆಯಲ್ಲೇ ಇರುತ್ತದೆ ವಾರದಲ್ಲಿ ಕೇಜಿಗೆ 100 ರು. ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್‌ನಿಂದ ಈವರೆಗೂ 1.7 ಲಕ್ಷ ಟನ್ ಈರುಳ್ಳಿಯನ್ನು ಕೇಂದ್ರ ಸರ್ಕಾರ ತನ್ನ ದಾಸ್ತಾನಿನಿಂದ ಸರಕು ಮತ್ತು ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ನಿಯಂತ್ರಣಕ್ಕೆ ಪ್ರಯತ್ನಿಸಿದೆ.