ಅಮೆರಿಕದಲ್ಲಿ ತೈಲ ರಿಫೈನರಿ : ಅಂಬಾನಿ ಹೂಡಿಕೆ

KannadaprabhaNewsNetwork |  
Published : Mar 12, 2026, 12:45 AM IST
Ambani

ಸಾರಾಂಶ

‘50 ವರ್ಷಗಳ ಬಳಿಕ ಅಮೆರಿಕದಲ್ಲಿ ಮೊದಲ ಬಾರಿ ನಿರ್ಮಿಸಲಾಗುತ್ತಿರುವ ತೈಲ ಸಂಸ್ಕರಣಾಗಾರಕ್ಕೆ ಮುಕೇಶ್ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ ಪಾಲುದಾರಿಕೆ ಮಾಡಿಕೊಂಡಿದೆ. 27.5 ಲಕ್ಷ ಕೋಟಿ ರು.ಗಳ (300 ಬಿಲಿಯನ್‌ ಡಾಲರ್‌) ಈ ಪಾಲುದಾರಿಕೆ ಅಮೆರಿಕ ಇತಿಹಾಸದಲ್ಲಿಯೇ ಅತಿ ದೊಡ್ಡದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಘೋಷಿಸಿದ್ದಾರೆ.

 ವಾಷಿಂಗ್ಟನ್‌/ನವದೆಹಲಿ:  ‘50 ವರ್ಷಗಳ ಬಳಿಕ ಅಮೆರಿಕದಲ್ಲಿ ಮೊದಲ ಬಾರಿ ನಿರ್ಮಿಸಲಾಗುತ್ತಿರುವ ತೈಲ ಸಂಸ್ಕರಣಾಗಾರಕ್ಕೆ ಮುಕೇಶ್ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ ಪಾಲುದಾರಿಕೆ ಮಾಡಿಕೊಂಡಿದೆ. 27.5 ಲಕ್ಷ ಕೋಟಿ ರು.ಗಳ (300 ಬಿಲಿಯನ್‌ ಡಾಲರ್‌) ಈ ಪಾಲುದಾರಿಕೆ ಅಮೆರಿಕ ಇತಿಹಾಸದಲ್ಲಿಯೇ ಅತಿ ದೊಡ್ಡದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಘೋಷಿಸಿದ್ದಾರೆ. 

ರಿಲಯನ್ಸ್ 20 ವರ್ಷಗಳ ಒಪ್ಪಂದ 

 ಟೆಕ್ಸಾಸ್‌ನ ಬ್ರೌನ್ಸ್‌ವಿಲ್‌ನಲ್ಲಿ ಅಮೆರಿಕ ಫಸ್ಟ್‌ ರಿಫೈನಿಂಗ್‌ (ಎಎಫ್‌ಆರ್‌) ಕಂಪನಿ ಈ ತೈಲ ಸಂಸ್ಕರಣಾಗಾರವನ್ನು ನಿರ್ಮಿಸುತ್ತಿದೆ. ರಿಲಯನ್ಸ್ 20 ವರ್ಷಗಳ ಒಪ್ಪಂದದ ಮೂಲಕ ಇಲ್ಲಿ ತಯಾರಾಗುವ ಇಂಧನವನ್ನು ಖರೀದಿಸಲು ಸಹಿ ಹಾಕಿದೆ. ಯೋಜನೆಯ ಆರಂಭಿಕ ಕೆಲಸ ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಆರಂಭವಾಗಲಿದೆ.

45 ಸಾವಿರ ಕೋಟಿ ರು. ವೆಚ್ಚ

 1977ರಲ್ಲಿ ಮ್ಯಾರಾಥಾನ್‌ ಗೇರಿವಿಲ್‌ ರಿಫೈನರಿಯನ್ನು ಆರಂಭಿಸಲಾಗಿತ್ತು. ಆ ಬಳಿಕ ಮೊದಲ ಬಾರಿ ಈ ಘಟಕವನ್ನು ನಿರ್ಮಿಸಲು ಅಮೆರಿಕ ಮುಂದಾಗಿದೆ. ಇದು ರಿಲಯನ್ಸ್‌ ಅಮೆರಿಕದಲ್ಲಿ ನಿರ್ಮಿಸುತ್ತಿರುವ ಮೊದಲ ತೈಲ ಸಂಸ್ಕರಣಾಗಾರವೂ ಹೌದು.ಇದಕ್ಕಾಗಿ ರಿಲಯನ್ಸ್‌ 9 ಅಂಕಿಗಳ ಹೂಡಿಕೆ ಮಾಡಿದೆ. ಈ ಯೋಜನೆಗೆ 35-45 ಸಾವಿರ ಕೋಟಿ ರು. ವೆಚ್ಚವಾಗಬಹುದು ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ. 

ಹೊಸ ಒಪ್ಪಂದದ ಅಡಿಯಲ್ಲಿ, 1.15 ಲಕ್ಷ ಕೋಟಿ ರು. ಮೌಲ್ಯದ 120 ಕೋಟಿ ಬ್ಯಾರೆಲ್ ಅಮೆರಿಕನ್ ಲೈಟ್ ಶೇಲ್ ತೈಲವನ್ನು ಖರೀದಿಸಿ ಪ್ರಕ್ರಿಯೆಗೊಳಿಸಲಾಗುವುದು. ಎಎಫ್‌ಆರ್‌ ಕಂಪನಿಯು 1.6 ಲಕ್ಷ ಕೋಟಿ ರು. ಮೌಲ್ಯದ 5,000 ಕೋಟಿ ಗ್ಯಾಲನ್‌ ಸಂಸ್ಕರಿತ ತೈಲವನ್ನು ಉತ್ಪಾದಿಸಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಾರಾಟಕ್ಕೆ ಬ್ರೇಕ್ : ವಿಮಾನಯಾನ ಸಂಸ್ಥೆಗಳ ಎಚ್ಚರಿಕೆ
19300 ರು.ಗಾಗಿ ಬ್ಯಾಂಕ್‌ಗೆ ಅಕ್ಕನ ಅಸ್ಥಿಪಂಜರ ತಂದ!