ಸೌದಿ ಏರ್‌ಬೇಸ್‌ಗೆ ಇರಾನ್‌ ದಾಳಿ : ಅಮೆರಿಕ ವಿಮಾನ ಧ್ವಂಸ

KannadaprabhaNewsNetwork |  
Published : Mar 30, 2026, 12:15 AM IST
us iran war

ಸಾರಾಂಶ

ಸೌದಿ ಅರೇಬಿಯಾದ ಫ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ಶುಕ್ರವಾರ ಇರಾನ್‌ ನಡೆಸಿದ ದಾಳಿಯಲ್ಲಿ ಹಾನಿಗೀಡಾದ ಅಮೆರಿಕ ವಿಮಾನಗಳ ಚಿತ್ರಗಳು ಬಹಿರಂಗವಾಗಿವೆ. ಈ ಏರ್‌ಬೇಸ್‌ನಲ್ಲಿ ಇ-3 ಎಡಬ್ಲುಎಸಿಎಸ್‌ ಯುದ್ಧ ವಿಮಾನಗಳು ನೆಲೆಗೊಂಡಿದ್ದವು ಹಾಗೂ ಹಲವು ಅಮೆರಿಕದ ಯೋಧರು ಇದ್ದರು.

ವಾಷಿಂಗ್ಟನ್‌: ಸೌದಿ ಅರೇಬಿಯಾದ ಫ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ಶುಕ್ರವಾರ ಇರಾನ್‌ ನಡೆಸಿದ ದಾಳಿಯಲ್ಲಿ ಹಾನಿಗೀಡಾದ ಅಮೆರಿಕ ವಿಮಾನಗಳ ಚಿತ್ರಗಳು ಬಹಿರಂಗವಾಗಿವೆ.

ಇ-3 ಎಡಬ್ಲುಎಸಿಎಸ್‌ ಯುದ್ಧ ವಿಮಾನಗಳು ನೆಲೆ

ಈ ಏರ್‌ಬೇಸ್‌ನಲ್ಲಿ ಇ-3 ಎಡಬ್ಲುಎಸಿಎಸ್‌ ಯುದ್ಧ ವಿಮಾನಗಳು ನೆಲೆಗೊಂಡಿದ್ದವು ಹಾಗೂ ಹಲವು ಅಮೆರಿಕದ ಯೋಧರು ಇದ್ದರು. ದಾಳಿಯ ವೇಳೆ ವಿಮಾನಗಳು ಹಾನಿಗೀಡಾಗಿವೆ ಎಂದು ಶನಿವಾರವೇ ಇರಾನ್‌ ಹೇಳಿತ್ತು. ಭಾನುವಾರ ಇರಾನ್‌ನ ಪ್ರೆಸ್‌ ಟೀವಿ, ಈ ವಿಮಾನಗಳ ಚಿತ್ರ ಬಿಡುಗಡೆ ಮಾಡಿದೆ. ವಿಮಾನಗಳು ದಾಳಿಗೆ ಹೊತ್ತಿ ಉರಿದು 2 ತುಂಡಾಗಿದ್ದು ಕಂಡುಬರುತ್ತದೆ.

ಅಮೆರಿಕದ ಹತ್ತು ಯೋಧರು ಗಾಯಗೊಂಡಿದ್ದಾರೆ

ಈ ದಾಳಿಯಲ್ಲಿ ಅಮೆರಿಕದ ಹತ್ತು ಯೋಧರು ಗಾಯಗೊಂಡಿದ್ದಾರೆ ಎಂದು ಶನಿವಾರವೇ ಇರಾನ್‌ ಹೇಳಿತ್ತು.

ಪ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಮಾ.1ರಂದು ಇದೇ ರೀತಿ ನಡೆದ ದಾಳಿಯಲ್ಲಿ ಸೇನಾ ಸಿಬ್ಬಂದಿಯೊಬ್ಬರು ಆ ಸಂದರ್ಭದಲ್ಲಿ ಮೃತಪಟ್ಟಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಐ ಚಾಟ್‌ಬಾಟ್‌ ಬಳಸಿ ಉಗ್ರರಿಂದ ಬಾಂಬ್‌ ತಯಾರಿಕೆ!
ಬೆಂಗ್ಳೂರು ಸ್ಟಾರ್ಟಪ್‌ನಿಂದ ಮ್ಯಾಗ್ನೆಟ್‌ ಇಲ್ಲದ ಇವಿ ಮೋಟರ್‌ ಉತ್ಪಾದನೆ