ಶೀಘ್ರದಲ್ಲೇ ಕೇಂದ್ರ ಸಚಿವಸಂಪುಟದ ಪುನಾರಚನೆ?

KannadaprabhaNewsNetwork |  
Published : Jun 24, 2026, 01:15 AM IST
ಮೋದಿ  | Kannada Prabha

ಸಾರಾಂಶ

ತ್ತೀಚೆಗೆ ರಾಜ್ಯಸಭೆ ನಾಮನಿರ್ದೇನದಿಂದ ವಂಚಿತರಾಗಿದ್ದ ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರ ನಡುವೆ ಅಪರೂಪಕ್ಕೆಂಬಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ.

- ಮೋದಿ-ರಾಷ್ಟ್ರಪತಿ ಭೇಟಿ ಬೆನ್ನಲ್ಲೇ ಗುಸುಗುಸುನವದೆಹಲಿ: ಇತ್ತೀಚೆಗೆ ರಾಜ್ಯಸಭೆ ನಾಮನಿರ್ದೇನದಿಂದ ವಂಚಿತರಾಗಿದ್ದ ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರ ನಡುವೆ ಅಪರೂಪಕ್ಕೆಂಬಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ. ಇದು ಸಂಪುಟ ಪುನಾರಚನೆ ಗುಸುಗುಸಿಗೆ ಪುನಃ ನಾಂದಿ ಹಾಡಿದೆ.

ಇತ್ತೀಚೆಗೆ ಕೆಲವು ಕೇಂದ್ರ ಸಚಿವರನ್ನು ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷದ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗಿತ್ತು. ಆಗಲೇ ಈ ಬಗ್ಗೆ ಪುಕಾರುಗಳು ಎದ್ದಿದ್ದವು. ಇದರ ಬೆನ್ನಲ್ಲೇ ಕೇಂದ್ರ ಸಚಿವರಾದ ಕುರಿಯನ್‌ ಹಾಗೂ ರಣವೀತ್‌ ಸಿಂಗ್‌ ಬಿಟ್ಟು ಅವರನ್ನು ರಾಜ್ಯಸಭೆಗೆ ಪುನಃ ನಾಮನಿರ್ದೇಶನ ಮಾಡಿರಲಿಲ್ಲ. ಇದೀಗ ಈ ಪೈಕಿ ಕುರಿಯನ್‌ ರಾಜೀನಾಮೆ ನೀಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಮುರ್ಮು ಅವರನ್ನು ಮೋದಿ ಭೇಟಿ ಮಾಡಿದ್ದಾರೆ. ಇದು ಮೋದಿ-3.0 ಸರ್ಕಾರಕ್ಕೆ 2 ವರ್ಷ ಆದ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಯ ಮುನ್ಸೂಚನೆ ಎಂಬ ವಿಶ್ಲೇಷಣ ಕೇಳಿಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಲಖನೌ ಕೋಚಿಂಗ್‌ ಸೆಂಟರ್‌ಗೆ ಬೆಂಕಿ: ವಿದ್ಯಾರ್ಥಿಗಳು ಸೇರಿ 15 ಜನ ಬಲಿ
ಬಂಡಾಯ ಟಿಎಂಸಿಗರಿಂದ ಮಮತಾ ದೀದಿಗೆ ಕೊಕ್‌!