ಶ್ಯಾಮ್‌ ಬೆನೆಗಲ್‌ಗೆ ಅಂತಿಮ ನಮನ

KannadaprabhaNewsNetwork |  
Published : Dec 25, 2024, 12:46 AM IST
ಅಂತ್ಯಸಂಸ್ಕಾರ | Kannada Prabha

ಸಾರಾಂಶ

1970-80ರ ದಶಕದಲ್ಲಿ ಭಾರತೀಯ ಸಿನಿಮಾಗಳ ಚಿತ್ರಣವನ್ನೇ ಬದಲಿಸಿದ್ದ ಖ್ಯಾತ ನಿರ್ದೇಶಕ ಶ್ಯಾಮ್‌ ಬೆನೆಗಲ್‌ ಅವರ ಅಂತ್ಯಸಂಸ್ಕಾರವನ್ನು ದಾದರ್‌ ಬಳಿಯ ಶಿವಾಜಿ ಪಾರ್ಕ್‌ನ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿಸಲಾಯಿತು.

ಮುಂಬೈ: 1970-80ರ ದಶಕದಲ್ಲಿ ಭಾರತೀಯ ಸಿನಿಮಾಗಳ ಚಿತ್ರಣವನ್ನೇ ಬದಲಿಸಿದ್ದ ಖ್ಯಾತ ನಿರ್ದೇಶಕ ಶ್ಯಾಮ್‌ ಬೆನೆಗಲ್‌ ಅವರ ಅಂತ್ಯಸಂಸ್ಕಾರವನ್ನು ದಾದರ್‌ ಬಳಿಯ ಶಿವಾಜಿ ಪಾರ್ಕ್‌ನ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿಸಲಾಯಿತು.

ಬೆನೆಗಲ್‌ ಅವರ ಅಗಲುವಿಕೆಗೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌, ಅಜಯ್‌ ದೇವಗನ್‌, ನಟಿ ನಫೀಸಾ ಅಲಿ, ಕರಿಶ್ಮಾ ಕಪೂರ್‌, ನಿರ್ಮಾಪಕ ವಿಶಾಲ್‌ ಭಾರದ್ವಾಜ್‌ ಸೇರಿ ಸಿನಿರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಶ್ಯಾಮ್‌ ಬೆನೆಗಲ್‌ ಅಗಲುವಿಕೆಯೊಂದಿಗೆ ಚಿತ್ರರಂಗದ ಮತ್ತೊಬ್ಬ ಗಣ್ಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರಿಗಾಗಿ ಪ್ರಾರ್ಥಿಸುತ್ತೇನೆ ಹಾಗೂ ಸಂತಾಪ ಸೂಚಿಸುತ್ತೇನೆ’ ಎಂದು ಬಚ್ಚನ್‌ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಬೆನೆಗಲ್‌ ಅವರ ಜುನೂನ್‌ ಚಿತ್ರದಲ್ಲಿ ನಟಿಸಿದ್ದ ನಫೀಸಾ, ‘ನನ್ನಲ್ಲಿ ಯಾರೂ ಕಾಣದ ವಿಶೇಷತೆಯನ್ನು ಅವರು ಕಂಡರು. ಅವರ ಅಗಲಿಕೆಗೆ ಸಂತಾಪ ಸಾಲದು. ಜೀವನವೇಕೆ ಇಷ್ಟು ಸಣ್ಣದಿದೆ’ ಎಂದು ಶೋಕಿಸಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬೆನೆಗಲ್‌ ಅವರು ಮುಂಬೈನ ವೊಕಾರ್ಡ್‌ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ