ನವದೆಹಲಿ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 29ರು.ನಷ್ಟು ಹೆಚ್ಚಿಸಿದ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ನೆರೆ ದೇಶ ಹಾಗೂ ಹಲವು ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ದರ ಅತಿ ಕಡಿಮೆ ಎಂದು ಅದು ಸ್ಪಷ್ಟಪಡಿಸಿದೆ.
‘14.2 ಕೆ.ಜಿ. ಸಿಲಿಂಡರ್ ಪೂರೈಕೆ ವೆಚ್ಚವು ಇದೀಗ 1,600 ರು. ತಲುಪಿದೆ. ಆದರೆ, ಈಗ ಮನೆಬಳಕೆ ಸಿಲಿಂಡರ್ ಅನ್ನು 945 ರು. ಹಾಗೂ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಡಿ 642 ರು.ಗಳಿಗೆ ವಿತರಿಸಲಾಗುತ್ತಿದೆ. ಈ ಮೂಲಕ ಕ್ರಮವಾಗಿ ಸುಮಾರು 700 ರು.ನಿಂದ 900 ರು. ನಷ್ಟ ಅನುಭವಿಸಲಾಗುತ್ತಿದೆ. ಆದಾಗ್ಯೂ ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆ ಇದೆ’ ಎಂದು ಸರ್ಕಾರ ಹೇಳಿದೆ.
‘ನೆರೆಯ ಪಾಕ್‌ನಲ್ಲಿ 1046 ರು. ನೇಪಾಳ 1,207 ಹಾಗೂ ಬಾಂಗ್ಲಾದೇಶದಲ್ಲಿ 1,225 ರು. ಹಾಗೂ ಶ್ರೀಲಂಕಾದಲ್ಲಿ 1,241 ರು.ಗೆ ಸಿಲಿಂಡರ್ ಪೂರೈಕೆಯಾಗುತ್ತಿದೆ. ಅಮೆರಿಕದಲ್ಲಿ ₹1,755, ಆಸ್ಟ್ರೇಲಿಯಾದಲ್ಲಿ ₹1,765 ಹಾಗೂ ಕೆನಡಾದಲ್ಲಿ ₹2,411 ರು. ಇದೆ’ ಎಂದು ಅದು ಮಾಹಿತಿ ನೀಡಿದೆ.
ಖರ್ಗೆ ಕಿಡಿ:
ಸಿಲಿಂಡರ್ ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಲ್ಲಿಕಾರ್ಜುನ ಖರ್ಗೆ, ‘ಯುಪಿಎ ಕಾಲದಲ್ಲಿ ಬಿಜೆಪಿ ನಾಯಕರು ಹಣದುಬ್ಬರದ ಹೆಸರಲ್ಲಿ ಹುಯಿಲೆಬ್ಬಿಸುತ್ತಿದ್ದರು. ಈಗ ಯಾಕೆ ಬಿಜೆಪಿ ನಾಯಕರು ಸಿಲಿಂಡರ್ ಹಿಡಿದು ಬೀದಿಗಿಳಿಯುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
‘ಉಜ್ವಲ ಯೋಜನೆ ಅಡಿ 2025-26ರಲ್ಲಿ ಕೇವಲ ಒಂದೇ ಬಾರಿ ಅಡುಗೆ ಅನಿಲ ಸಿಲಿಂಡರ್ ಪೂರೈಸಲಾಗಿದೆ. ಮೋದಿ, ಬಿಜೆಪಿ ನಾಯಕರು ಯುಪಿಎ ಕಾಲದಲ್ಲಿ ಹಣದುಬ್ಬರ ಕುರಿತು ತೀವ್ರ ಹುಯಿಲೆಬ್ಬಿಸುತ್ತಿದ್ದರು. ಆದರೆ ಮೋದಿ ಸರ್ಕಾರ 12 ವರ್ಷಗಳಲ್ಲಿ ಸಿಲಿಂಡರ್ ದರ 530 ರು.ನಷ್ಟು ಹೆಚ್ಚಿಸಿದೆ. ಈಗ ಯಾಕೆ ಬಿಜೆಪಿ ನಾಯಕರು ಎಲ್‌ಪಿಜಿ ಸಿಲಿಂಡರ್ ಹಿಡಿದು ಪ್ರತಿಭಟನೆ ನಡೆಸುವುದಿಲ್ಲ ಎಂದು ಕೇಳಿದ್ದಾರೆ.
- ಪಾಕಿಸ್ತಾನ₹1046
ನೇಪಾಳ₹1,207
ಬಾಂಗ್ಲಾದೇಶ₹1,225
ಶ್ರೀಲಂಕಾ₹1,241
ಅಮೆರಿಕ ₹1,755
ಆಸ್ಟ್ರೇಲಿಯಾ₹1,765
ಕೆನಡಾ₹2,411