ಚಿನ್ನದ ಬೆಲೆ ಗಗನಮುಖಿಯಾಗಿದ್ದ ಕಾರಣ ಕಳೆದ ಕೆಲ ತಿಂಗಳುಗಳಿಂದ ಅದನ್ನು ಕೊಳ್ಳಲು ಮನಸ್ಸು ಮಾಡಿರದ ಗ್ರಾಹಕರು ಶುಕ್ರವಾರದ ಧನ ತ್ರಯೋದಶಿಯಂದು ಹೊನ್ನನ್ನು ಖರೀದಿಸಲು ಮುಗಿಬಿದ್ದಿದ್ದಾರೆ.
ಮುಂಬೈ/ನವದೆಹಲಿ: ಚಿನ್ನದ ಬೆಲೆ ಗಗನಮುಖಿಯಾಗಿದ್ದ ಕಾರಣ ಕಳೆದ ಕೆಲ ತಿಂಗಳುಗಳಿಂದ ಅದನ್ನು ಕೊಳ್ಳಲು ಮನಸ್ಸು ಮಾಡಿರದ ಗ್ರಾಹಕರು ಶುಕ್ರವಾರದ ಧನ ತ್ರಯೋದಶಿಯಂದು ಹೊನ್ನನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಪರಿಣಾಮ, ದೇಶಾದ್ಯಂತ 60 ಸಾವಿರ ಕೋಟಿ ರು. ಮೌಲ್ಯದ ಚಿನ್ನ ಮಾರಾಟವಾಗಿರುವ ಅಂದಾಜಿದೆ.
ಶೇ.15- 20 ಏರಿಕೆ
ಹಿಂದಿನ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಈ ವರ್ಷ ಶೇ.15- 20 ಏರಿಕೆಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ದರ ಮತ್ತೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಮುಂದಾಗಿದ್ದರು ಎನ್ನಲಾಗಿದೆ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 2560 ರು. ಇಳಿಕೆ
ಶುಕ್ರವಾರ ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 2560 ರು. ಇಳಿಕೆಯಾಗಿದ್ದು, 1,43,460 ರು. ಆಗಿದೆ. ಇದೇ ಪ್ರಮಾಣದ 22 ಕ್ಯಾರಟ್ನ ಬೆಲೆ 2350 ರು. ಕುಸಿದು 1,31,500 ರು. ಆಗಿದೆ. ದೆಹಲಿಯಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,46,300 ರು. ಇದೆ. ಅತ್ತ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಕೆ.ಜಿ. ಬೆಲೆ 5 ಸಾವಿರ ರು. ಕುಸಿದು 2,05,000 ರು. ಆಗಿದೆ. ದೆಹಲಿಯಲ್ಲಿ ಇದು 1,92,500 ರು. ಆಗಿದೆ.


