ನಾನು ಬರ್ತೀನಿ ನನ್ನಪತ್ನಿ ಮಕ್ಕಳ ಬಿಟ್ಟುಬಿಡಿ: ಉಗ್ರರಿಗೆ ಹತಾಶ ತಂದೆ

KannadaprabhaNewsNetwork |  
Published : Oct 10, 2023, 01:00 AM IST

ಸಾರಾಂಶ

ಉಗ್ರರ ಸೆರೆಯಲ್ಲಿರುವ ತನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ರಕ್ಷಣೆಗಾಗಿ ತಂದೆಯೋರ್ವ ತನ್ನ ಅಳಲು ತೋಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಜೆರುಸಲೇಂ: ಏಕಾಏಕಿ ಇಸ್ರೇಲ್‌ ಮೇಲೆ ಕ್ರೂರ ದಾಳಿ ಮಾಡಿದ ಪ್ಯಾಲೆಸ್ತೀನ್‌ ಉಗ್ರರು ಅಲ್ಲಿನ ಅನೇಕ ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿಕೊಂಡು ಹೋಗಿ, ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಹೀಗೆ ಉಗ್ರರ ಸೆರೆಯಲ್ಲಿರುವ ತನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ರಕ್ಷಣೆಗಾಗಿ ತಂದೆಯೋರ್ವ ತನ್ನ ಅಳಲು ತೋಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಡೊರೋನ್‌ ಆಶರ್‌ ಎಂಬ ಮಹಿಳೆಯು ತನ್ನ 5 ಮತ್ತು 3 ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗಾಜಾ ಗಡಿ ಸಮೀಪವಿರುವ ನಿರ್‌ ಒಜ್‌ ಗ್ರಾಮಕ್ಕೆ ತನ್ನ ಅಜ್ಜಿಯನ್ನು ನೋಡಲು ಹೋಗಿದ್ದಳು. ಇದೇ ವೇಳೆ ಅಲ್ಲಿ ದಾಳಿ ನಡೆಸಿದ ಹಮಾಸ್‌ ಉಗ್ರರು ಮನೆಯಲ್ಲಿದ್ದ ಎಲ್ಲರನ್ನೂ ಅಪಹರಿಸಿಕೊಂಡು ಹೋಗಿದ್ದಾರೆ. ಉಗ್ರರು ಮನೆಗೆ ನುಗ್ಗಿದಾಗ ತನ್ನ ಪತಿ ಆಶರ್‌ಗೆ ಕರೆ ಮಾಡಿದ್ದ ಡೊರೋನ್‌ ‘ಮನೆಯಲ್ಲಿ ಉಗ್ರರು ನುಗ್ಗಿದ್ದಾರೆ’ ಎಂದು ಭಯಭೀತಳಾಗಿ ತಿಳಿಸಿದ್ದಾಳೆ. ಅದಾದ ಬಳಿಕ ಫೋನ್ ಸಂಪರ್ಕ ಕಡಿತಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಅನೇಕ ಒತ್ತೆಯಾಳುಗಳ ವಿಡಿಯೋದಲ್ಲಿ ಆಶರ್‌ ತನ್ನ ಪತ್ನಿ ಮತ್ತು ಮಕ್ಕಳನ್ನು ನೋಡಿ ಕಂಗಾಲಾಗಿದ್ದಾರೆ. ಬಳಿಕ ‘ನನ್ನ ಮಕ್ಕಳು ತುಂಬಾ ಚಿಕ್ಕವರು. ದಯವಿಟ್ಟು ನನ್ನ ಮಕ್ಕಳು ಮತ್ತು ಪತ್ನಿಯ ನೋಯಿಸಬೇಡಿ ಅವರನ್ನೇನೂ ಮಾಡಬೇಡಿ. ಬೇಕಾದರೆ ನಾನು ನಿಮ್ಮ ಬಳಿ ಬರುತ್ತೇನೆ’ ಎಂದು ಬೇಡಿಕೊಂಡಿದ್ದಾರೆ. ಅಲ್ಲದೇ ತಾವು ಕಳೆದ 15 ಗಂಟೆಗಳಿಂದ ಊಟ ನಿದ್ದೆ ಇಲ್ಲದೇ ವಾಸಿಸುತ್ತಿದ್ದೇನೆ. ನನ್ ಹೆಂಡತಿ ಮಕ್ಕಳು ಹೇಗಿದ್ದಾರೆ, ಅವರಿಗೇನಾಯಿತು ಎಂಬುದೂ ನನಗೆ ತಿಳಿದಿಲ್ಲ’ ಎಂದು ಕಂಬನಿ ಮಿಡಿದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾದಲ್ಲಿ ಮತ್ತೊಬ್ಬ ಯುವ ನಾಯಕನ ತಲೆಗೆ ಗುಂಡೇಟು
15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ