ಬೆದರಿಕೆ ಹಿನ್ನೆಲೆಯಲ್ಲಿ ನಟ ಶಾರುಖ್‌ ಖಾನ್‌ಗೆ ವೈ+ ಭದ್ರತೆ

KannadaprabhaNewsNetwork |  
Published : Oct 10, 2023, 01:00 AM IST

ಸಾರಾಂಶ

ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ಅವರಿಗೆ ಸಂಭಾವ್ಯ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ‘ವೈ ’ ಭದ್ರತೆಯನ್ನು ಒದಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ಅವರಿಗೆ ಸಂಭಾವ್ಯ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ‘ವೈ+’ ಭದ್ರತೆಯನ್ನು ಒದಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈ+ ಭದ್ರತೆಯಲ್ಲಿ 6 ಜನ ಕಮಾಂಡೊಗಳು ಸೇರಿದಂತೆ 11 ಜನ ಭದ್ರತಾ ಸಿಬ್ಬಂದಿಗಳು ಸೇರಿದಂತೆ ಒಂದು ಪೊಲೀಸ್‌ ಬೆಂಗಾವಲು ವಾಹನ ನಟನಿಗೆ ರಕ್ಷಣೆ ನೀಡಲಿದೆ. ಆದರೆ ಈ ಎಲ್ಲ ಭದ್ರತೆಗೆ ನಟ ಶಾರುಖ್‌ ಅವರೇ ಪಾವತಿ ಮಾಡಬೇಕಿರುತ್ತದೆ. ಶಾರುಖ್‌ ಖಾನ್‌ ಇತ್ತೀಚಿನ ಸೂಪರ್‌ ಹಿಟ್‌ ಸಿನಿಮಾ ‘ಜವಾನ್‌’ ಬಿಡುಗಡೆಯಾದ ಬಳಿಕ ಅವರು ಹೆಚ್ಚಿನ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖಾನ್‌ರ ಹಿಂದಿನ ‘ಪಠಾಣ್‌’ ಸಿನಿಮಾದ ‘ಬೇಷರಂ ರಂಗ್‌’ ಹಾಡು ವಿವಾದಕ್ಕೀಡಾದಾಗ ಅಯೋಧ್ಯೆ ಸೇರಿದಂತೆ ಹಲವೆಡೆಯಿಂದ ಬೆದರಿಕೆ ಬಂದಿದ್ದವು.

PREV

Recommended Stories

ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ: ಆಯೋಗ ಸ್ಪಷ್ಟನೆ