ಇಸ್ರೇಲ್‌ ಯುದ್ಧಭೂಮಿಯಲ್ಲಿ ಯೋಧರಜೊತೆ ಸೇರಿದ ಮಾಜಿ ಪ್ರಧಾನಿ ಬೆನ್ನೆಟ್‌

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ಮಾಡಿರುವ ಬೆನ್ನಲ್ಲೇ ತಮ್ಮ ಮೀಸಲು ಕರ್ತವ್ಯಕ್ಕೆ ಹಾಜರಾಗಿರುವ ಇಸ್ರೇಲ್‌ನ ಮಾಜಿ ಪ್ರಧಾನಿ ಸಫ್ತಾಲಿ ಬೆನ್ನೆಟ್‌ ಯುದ್ಧಭೂಮಿಯಲ್ಲಿ ಸೈನಿಕರ ಜೊತೆ ಸೇರಿಕೊಂಡಿದ್ದಾರೆ.
ಜೆರುಸಲೇಂ: ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ಮಾಡಿರುವ ಬೆನ್ನಲ್ಲೇ ತಮ್ಮ ಮೀಸಲು ಕರ್ತವ್ಯಕ್ಕೆ ಹಾಜರಾಗಿರುವ ಇಸ್ರೇಲ್‌ನ ಮಾಜಿ ಪ್ರಧಾನಿ ಸಫ್ತಾಲಿ ಬೆನ್ನೆಟ್‌ ಯುದ್ಧಭೂಮಿಯಲ್ಲಿ ಸೈನಿಕರ ಜೊತೆ ಸೇರಿಕೊಂಡಿದ್ದಾರೆ. ಹಮಾಸ್‌ ಉಗ್ರರ ವಿರುದ್ಧ ಇಸ್ರೇಲ್‌ ಭಾರಿ ಪ್ರತಿದಾಳಿ ಆರಂಭಿಸಿರುವ ಹಿನ್ನೆಲೆಯಲ್ಲಿ ಬೆನ್ನೆಟ್‌ ಸೈನ್ಯಕ್ಕೆ ಮರಳಿದ್ದು, ಯೋಧರ ಕೈಕುಲುಕುತ್ತಿರುವ ದೃಶ್ಯಗಳು ವೈರಲ್‌ ಆಗಿವೆ. ಇದಲ್ಲದೆ ಖ್ಯಾತ ಪತ್ರಕರ್ತೆ ಇಂಡಿಯಾ ನೆಫ್ತಾಲಿ ಅವರ ಪತಿ, ಪತ್ರಕರ್ತ ಹನನ್ಯಾ ನಫ್ತಾಲಿ ಕೂಡ ಸೇನೆ ಸೇರಲು ಹೊರಟಾಗ ಅವರನ್ನು ಪತ್ನಿ ಇಂಡಿಯಾ ಅಪ್ಪಿಕೊಂಡ ಭಾವುಕ ದೃಶ್ಯಗಳು ವೈರಲ್‌ ಆಗಿವೆ. ಇಸ್ರೇಲ್‌ನಲ್ಲಿ ಸೈನಿಕ ತರಬೇತಿ ಪಡೆದುಕೊಳ್ಳುವುದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದ್ದು, ರಿಸರ್ವ್‌ ಸರ್ವೀಸ್‌ ಕಾನೂನಿ ಅಡಿಯಲ್ಲಿ ಇದನ್ನು ಜಾರಿ ಮಾಡಲಾಗುತ್ತದೆ. ದೇಶ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಎಲ್ಲರೂ ಸೈನ್ಯದೊಂದಿಗೆ ಭಾಗಿಯಾಗಿ ಕಾರ್ಯಾಚರಣೆ ನಡೆಸುವುದು ಇಲ್ಲಿ ಕಡ್ಡಾಯವಾಗಿದೆ.

Share this article