ಅಂಡಮಾನ್‌ ಸಮುದ್ರದಾಳದಲ್ಲಿ ಬೃಹತ್‌ ತ್ರಿವರ್ಣ ಧ್ವಜ: ವಿಶ್ವದಾಖಲೆ

KannadaprabhaNewsNetwork |  
Published : May 03, 2026, 01:45 AM IST
ತ್ರಿವರ್ಣ | Kannada Prabha

ಸಾರಾಂಶ

ಬೃಹತ್‌ ತ್ರಿವರ್ಣ ಧ್ವಜವನ್ನು ಸಮುದ್ರದ ದಡದ ನೀರಿನಲ್ಲಿ ಅನಾವರಣ ಮಾಡುವ ಮೂಲಕ ಅಂಡಮಾನ್‌ ನಿಕೋಬಾರ್‌ ಆಡಳಿತವು ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದೆ.

60*40 ಮಿಟರ್‌ ಗಾತ್ರದ ಧ್ವಜ ಅನಾವರಣ । ಆಳದಲ್ಲಿ ಸ್ಪಷ್ಟವಾಗಿ ಗೋಚರ

ನವದೆಹಲಿ: ಬೃಹತ್‌ ತ್ರಿವರ್ಣ ಧ್ವಜವನ್ನು ಸಮುದ್ರದ ದಡದ ನೀರಿನಲ್ಲಿ ಅನಾವರಣ ಮಾಡುವ ಮೂಲಕ ಅಂಡಮಾನ್‌ ನಿಕೋಬಾರ್‌ ಆಡಳಿತವು ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದೆ. ರಾಧಾನಗರ ಕಡಲಕಿನಾರೆಯ ಸ್ವರಾಜ್‌ ದ್ವೀಪದಲ್ಲಿ, ಲೆಫ್ಟಿನೆಂಟ್‌ ಗವರ್ನರ್‌ ಡಿ.ಕೆ. ಜೋಶಿ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 200 ಡೈವರ್‌ಗಳು(ಈಜುಗಾರರು) 60*40 ಮೀ. ಗಾತ್ರದ ಬಾವುಟನ್ನು ಅನಾವರಣ ಮಾಡಲಾಯಿತು. ಅಷ್ಟು ಆಳದಲ್ಲೂ ತ್ರಿವರ್ಣವು ಸುಂದರವಾಗಿ ಗೋಚರಿಸಿದ್ದು, ಅಲ್ಲಿನ ನೀರಿನ ಶುದ್ಧತೆಯನ್ನು ತೋರಿಸುವಂತಿತ್ತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೋಶಿ, ‘ಈ ಸಾಧನೆಯು ನಮ್ಮ ದ್ವೀಪ ವಿಶಿಷ್ಟ ಸಾಧನೆಗಳ ಪಟ್ಟಿಗೆ ಆದ ಗಮನಾರ್ಹ ಸೇರ್ಪಡೆಯಾಗಿದ್ದು, ಸಂಕೀರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ’ ಎಂದು ಬಣ್ಣಿಸಿದ್ದಾರೆ. ಅಂಡಮಾನ್‌ ಇತ್ತೀಚೆಗೆ ತನ್ನ ಸಾಗರ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದ್ದು, ಈ ಸಾಧನೆಯು ಅದಕ್ಕೆ ಪೂರಕವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪ್ರಸಾರ ಭಾರತಿ ಮುಖ್ಯಸ್ಥ ಹುದ್ದೆಗೆ ಪ್ರಸೂನ್‌ ಜೋಶಿ
ಅಮೆರಿಕಕ್ಕೆ ಯುದ್ಧ ನಿಲ್ಲಿಸಲು ಹೇಳಿ: ಬೆಂಗ್ಳೂರಲ್ಲಿ ಖಮೇನಿ ಪ್ರತಿನಿಧಿ ಇಲಾಹಿ ಆಗ್ರಹ