ಆಂಧ್ರಪ್ರದೇಶದಲ್ಲಿನ್ನು ‘ಮನ ಮಿತ್ರ’ ಹೆಸರಿನ ವಾಟ್ಸಾಪ್‌ ಸರ್ಕಾರ : ಮೊಬೈಲ್‌ನಲ್ಲೇ 161 ಸೇವೆ ಲಭ್ಯ!

KannadaprabhaNewsNetwork |  
Published : Jan 31, 2025, 12:46 AM ISTUpdated : Jan 31, 2025, 05:08 AM IST
ವಾಟ್ಸ್ಯಾಪ್‌ | Kannada Prabha

ಸಾರಾಂಶ

ಆಂಧ್ರಪ್ರದೇಶದ ಜನತೆಗೆ ಉತ್ತಮ ಹಾಗೂ ಅನುಕೂಲಕರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ‘ಮನ ಮಿತ್ರ’(ನನ್ನ ಗೆಳೆಯ) ಹೆಸರಿನ ವಾಟ್ಸಾಪ್‌ ಆಡಳಿತ ವೇದಿಕೆಯನ್ನು ಐಟಿ ಸಚಿವ ನಾರಾ ಲೋಕೇಶ್‌ ಅವರು ಸಿಎಂ ನಿವಾಸದಲ್ಲಿ ಬಿಡುಗಡೆ ಮಾಡಿದ್ದಾರೆ.

ಅಮರಾವತಿ: ಆಂಧ್ರಪ್ರದೇಶದ ಜನತೆಗೆ ಉತ್ತಮ ಹಾಗೂ ಅನುಕೂಲಕರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ‘ಮನ ಮಿತ್ರ’(ನನ್ನ ಗೆಳೆಯ) ಹೆಸರಿನ ವಾಟ್ಸಾಪ್‌ ಆಡಳಿತ ವೇದಿಕೆಯನ್ನು ಐಟಿ ಸಚಿವ ನಾರಾ ಲೋಕೇಶ್‌ ಅವರು ಸಿಎಂ ನಿವಾಸದಲ್ಲಿ ಬಿಡುಗಡೆ ಮಾಡಿದ್ದಾರೆ.

36 ಸರ್ಕಾರಿ ಇಲಾಖೆಗಳನ್ನು ಸಂಯೋಜಿಸಿ ರಚಿಸಲಾಗಿರುವ ಮನ ಮಿತ್ರದಲ್ಲಿ ರಾಜ್ಯದ ಜನರು ದೇವಸ್ಥಾನದ ಭೇಟಿಗೆ ಸಮಯ ನಿಗದಿಪಡಿಸುವುದು, ರಾಜ್ಯ ಸಾರಿಗೆ ಬಸ್‌ ಟಿಕೆಟ್‌ ಕಾಯ್ದಿರಿಸುವುದು, ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯುವುದು ಸೇರಿದಂತೆ 161 ಸೇವೆಗಳು ಲಭ್ಯವಿದೆ.

ಇದರ ಬಿಡುಗಡೆ ಬಳಿಕ ಮಾತನಾಡಿದ ಸಚಿವ ಲೋಕೇಶ್‌, ‘ಮುಂದಿನ ದಿನಗಳಲ್ಲಿ ಇಂತಹ ಹಲವು ಸೌಲಭ್ಯಗಳನ್ನು ಪರಿಚಯಿಸಲಾಗುವುದು. ನಮ್ಮ ಉದ್ದೇಶಗಳು ಜನ ಕೇಂದ್ರಿತವಾಗಿವೆ. ಪ್ರತಿ ಬಾರಿ ದಾಖಲೆ ಪಡೆಯಲು ಜನ ಸರ್ಕಾರಿ ಕಚೇರಿಗಳಿಗೇಕೆ ಬರಬೇಕು? ಜನರು ಕ್ಷಣಾರ್ಧದಲ್ಲಿ ಕ್ಯಾಬ್‌ ಅಥವಾ ಸಿನಿಮಾ ಟಿಕೆಟ್‌ ಬುಕ್‌ ಮಾಡಬಹುದಾದರೆ, ದಾಖಲೆಗಳನ್ನೇಕೆ ಅಷ್ಟೇ ಸುಲಭದಲ್ಲಿ ಪಡೆಯಬಾರದು’ ಎಂದರು.

2ನೇ ಹಂತದಲ್ಲಿ ಮನ ಮಿತ್ರವು ಹೆಚ್ಚುವರಿ 360 ಸೇವೆಗಳನ್ನು ಒದಗಿಸಲಿದೆ. ಪ್ರಸ್ತುತ ತಿರುಮಲ ತಿರುಪತಿ ದೇವಸ್ಥಾನದ ಸೇವಗಳು ಇದ ಭಾಗವಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ಇದನ್ನು ಸೇರಿಸಲಾಗುವುದು ಎಂದು ಲೋಕೇಶ್‌ ತಿಳಿಸಿದ್ದಾರೆ. 2024ರ ಅ.22ರಂದು ಆಂಧ್ರ ಸರ್ಕಾರ ಈ ಸಂಬಂಧ ಮೆಟಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ