ಅಪಘಾತಕ್ಕೀಡಾದ ವಾಹನದಲ್ಲಿ 7 ಕೋಟಿ ರು. ಪತ್ತೆ: ವಶಕ್ಕೆ

KannadaprabhaNewsNetwork |  
Published : May 12, 2024, 01:16 AM ISTUpdated : May 12, 2024, 07:39 AM IST
ಆಂಧ್ರ | Kannada Prabha

ಸಾರಾಂಶ

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹೊತ್ತಲ್ಲಿ ಅಪಘಾತಕ್ಕೀಡಾದ ಸುಣ್ಣದ ಮೂಟೆ ಸಾಗಿಸುವ ಲಘು ವಾಣಿಜ್ಯ ವಾಹನದಲ್ಲಿ 7 ಕೋಟಿ ರು. ಹಣ ಪತ್ತೆಯಾಗಿದೆ.

ಅಮರಾವತಿ: ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹೊತ್ತಲ್ಲಿ ಅಪಘಾತಕ್ಕೀಡಾದ ಸುಣ್ಣದ ಮೂಟೆ ಸಾಗಿಸುವ ಲಘು ವಾಣಿಜ್ಯ ವಾಹನದಲ್ಲಿ 7 ಕೋಟಿ ರು. ಹಣ ಪತ್ತೆಯಾಗಿದೆ. 

ಈ ಘಟನೆ ಪೂರ್ವ ಗೋದಾವರಿಯಲ್ಲಿ ನಡೆದಿದ್ದು, ಅಧಿಕಾರಿಗಳು ಹಣವನ್ನು ವಶ ಪಡಿಸಿಕೊಂಡಿದ್ದಾರೆ. ಹಣದ ಮೂಲ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.ಹೈದರಾಬಾದ್‌ನ ನಾಚರಂನಿಂದ ಮಂಡಪೇಟೆಗೆ ತೆರಳುತ್ತಿದ್ದ ಲಘು ವಾಣಿಜ್ಯ ವಾಹನ ನೆಲ್ಲಜೆರ್ಲದ ವೀರವಳ್ಳಿ ಟೋಲ್ ಬಳಿ ಟ್ರಕ್ ಗುದ್ದಿದ ಪರಿಣಾಮ ಅಪಘಾತಕ್ಕೀಡಾಗಿದೆ. ಈ ಸಂದರ್ಭದಲ್ಲಿ ಲಘು ವಾಣಿಜ್ಯ ವಾಹನ ಪಲ್ಟಿಯಾಗಿದ್ದು, ಈ ವೇಳೆ ರಾಸಾಯನಿಕ ಸುಣ್ಣದ ಮೂಟೆಯಡಿ ಬರೋಬ್ಬರಿ 7 ಕೋಟಿ ರು. ಹಣವಿರುವುದು ಪತ್ತೆಯಾಗಿದೆ. ಒಟ್ಟು 7 ಬಾಕ್ಸ್‌ಗಳಲ್ಲಿ ತಲಾ 1. ಕೋಟಿ ರು ಹಣ ಇಡಲಾಗಿತ್ತು. ಬಾಕ್ಸ್ ಮೂಟೆ ಅಡಿ ಅಪ್ಪಚ್ಚಿ ಆಗಿವೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿಸಿದ್ದಾರೆ. ಎಲೆಕ್ಷನ್ ಹೊತ್ತಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌