2026-27ನೇ ಶೈಕ್ಷಣಿಕ ವರ್ಷಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) 9911 ಹೊಸ ಎಂಬಿಬಿಎಸ್‌ ಸೀಟುಗಳನ್ನು ಘೋಷಿಸಿದೆ ಹಾಗೂ ಕರ್ನಾಟಕದ 2 ಸೇರಿ 25 ಹೊಸ ವೈದ್ಯಕೀಯ ಕಾಲೇಜುಗಳಿಗೂ ಅನುಮೋದನೆ ನೀಡಿದೆ.

ನವದೆಹಲಿ: 2026-27ನೇ ಶೈಕ್ಷಣಿಕ ವರ್ಷಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) 9911 ಹೊಸ ಎಂಬಿಬಿಎಸ್‌ ಸೀಟುಗಳನ್ನು ಘೋಷಿಸಿದೆ ಹಾಗೂ ಕರ್ನಾಟಕದ 2 ಸೇರಿ 25 ಹೊಸ ವೈದ್ಯಕೀಯ ಕಾಲೇಜುಗಳಿಗೂ ಅನುಮೋದನೆ ನೀಡಿದೆ.

ಇದರಿಂದಾಗಿ ಸದ್ಯ ಇದ್ದ 1,27,028 ಸೀಟುಗಳ ಸಂಖ್ಯೆ 1,36,939 ಸೀಟಿಗೆ ಏರಿದೆ.

25 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ

ಅತ್ತ 25 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ದೊರಕಿದೆ. ಇವುಗಳ ಪೈಕಿ 7 ಸರ್ಕಾರಿ ಕಾಲೇಜುಗಳಾದರೆ, 18 ಖಾಸಗಿಯವಾಗಿರಲಿವೆ. ಇದರಿಂದಾಗಿ ದೇಶದ ಹೊಸ ವೈದ್ಯ ಕಾಲೇಜುಗಳ ಸಂಖ್ಯೆ 823ಕ್ಕೇ ಏರಲಿದೆ.

ನೀಟ್‌ ಯುಜಿ ಫಲಿತಾಂಶ ಪ್ರಕಟವಾಗುವ ಮುನ್ನ ಈ ಪಟ್ಟಿ ಬಿಡುಗಡೆಯಾಗಿದೆ.

ಕರ್ನಾಟಕಕ್ಕೇ ಹೆಚ್ಚು ಸೀಟ್‌:

ದೇಶದ ಒಟ್ಟಾರೆ ಮೆಡಿಕಲ್‌ ಸೀಟುಗಳಲ್ಲಿ ಕರ್ನಾಟಕ ಅತಿ ಹೆಚ್ಚು ಸೀಟು ಪಡೆದಿದೆ. ರಾಜ್ಯದ 75 ಕಾಲೇಜುಗಳಲ್ಲಿ 15,395 ಸೀಟುಗಳಿರಲಿವೆ.

ರಾಜ್ಯದ ಹೊಸ 2 ಕಾಲೇಜು:

ತೆಗೆ 2 ಹೊಸ ವೈದ್ಯಕೀಯ ಕಾಲೇಜುಗಳಿಗೂ ಅನುಮೋದನೆ ದೊರೆತಿದೆ. ಒಂದು ಮೂಡುಬಿದಿರೆಯಲ್ಲಿರುವ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಾದರೆ (150 ಸೀಟು), ಇನ್ನೊಂದು ಕೆಜಿಎಫ್‌ನ ಚೆಟ್ಟಿನಾಡ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (100 ಸೀಟು).