ಮಲಯಾಳಂ ಚಿತ್ರರಂಗದಲ್ಲಿ ಇನ್ನೂ ಐವರ ಮೇಲೆ ಲೈಂಗಿಕ ಕಿರುಕುಳ ದೂರು! : ನಟಿ ಮೀನು ಮುನೀರ್‌ ಗಂಭೀರ ಆರೋಪ

KannadaprabhaNewsNetwork |  
Published : Aug 27, 2024, 01:31 AM ISTUpdated : Aug 27, 2024, 04:58 AM IST
ಮಿನು ಮುನೀರ್‌ | Kannada Prabha

ಸಾರಾಂಶ

ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಪ್ರಕರಣ ಇದೀಗ ಮತ್ತಷ್ಟು ದೊಡ್ಡದಾಗಿದೆ.  

ತಿರುವನಂತಪುರ : ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಪ್ರಕರಣ ಇದೀಗ ಮತ್ತಷ್ಟು ದೊಡ್ಡದಾಗಿದೆ. ತಮ್ಮ ಮೇಲಿನ ಆರೋಪದ ಕಾರಣ ಖ್ಯಾತ ನಿರ್ದೇಶಕ ರಂಜಿತ್‌ ಮತ್ತು ನಟ ಸಿದ್ಧಿಕಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಇನ್ನೂ ಐವರು ನಟರ ಮೇಲೆ ನಟಿ ಮೀನು ಮುನೀರ್‌ ಹಾಗೂ ಮತ್ತೊಬ್ಬ ನಟಿ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.

‘ಹಾಲಿ ಸಿಪಿಎಂ ಶಾಸಕ ಕಂ ನಟ ಮುಕೇಶ್‌ (ನಟಿ ಸರಿತಾ ಮಾಜಿ ಗಂಡ), ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು ಮತ್ತು ಇಡವೇಲು ಬಾಬು 2013ರಲ್ಲಿ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು. ಮೊದಲಿಗೆ ನಾನು ನಾಲ್ವರೊಂದಿಗೂ ಸಹಕರಿಸಿ ಕೆಲಸ ಮುಂದುವರೆಸಿದ್ದೆ. ಆದರೆ ಅವರ ಕಿರುಕುಳ ತಾಳಲಾಗದೇ ಹೋದಾಗ ಮಲಯಾಳಂ ಚಿತ್ರರಂಗಕ್ಕೆ ವಿದಾಯ ಹೇಳಿ ಚೆನ್ನೈಗೆ ಹೋದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ನಟಿ ಮಿನು ಮುನೀರ್‌ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಕಿರಿಯ ಕಲಾವಿದೆಯೊಬ್ಬರು ನಟ ಬಾಬುರಾಜ್‌ ವಿರುದ್ಧ ಇಂಥದ್ದೇ ಆರೋಪ ಮಾಡಿದ್ದಾರೆ. ಇದು ನ್ಯಾ.ಹೇಮಾ ಸಮಿತಿ ವರದಿ ಬಳಿಕ ತಲ್ಲಣಗೊಂಡಿದ್ದ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಈ ನಡುವೆ ತಮ್ಮ ಮೇಲಿನ ಆರೋಪದ ಕುರಿತು ತನಿಖೆಗೆ ಬಾಬುರಾಜ್‌ ಒತ್ತಾಯಿಸಿದ್ದಾರೆ.

ಮಿನು ಹೇಳಿದ್ದೇನು?:  ‘2013ರಲ್ಲಿ ಚಿತ್ರವೊಂದರ ಶೂಟಿಂಗ್‌ಗೆ ವೇಳೆ ನಾನು ಶೌಚಾಲಯಕ್ಕೆ ತೆರಳಿದ್ದೆ. ಅಲ್ಲಿಂದ ಹೊರಬರುವ ವೇಳೆ ಹಿಂದಿನಿಂದ ಬಂದು ನನ್ನನ್ನು ಬಿಗಿದಪ್ಪಿದ ಜಯಸೂರ್ಯ ನನ್ನ ಅನುಮತಿ ಇಲ್ಲದೇ ನನಗೆ ಮುತ್ತಿಕ್ಕಿದರು. ನನ್ನೊಂದಿಗೆ ಸಹಕರಿಸಿದರೆ ಚಿತ್ರರಂಗದಲ್ಲಿ ಹೆಚ್ಚು ಅವಕಾಶ ನೀಡುವುದಾಗಿ ಅವರು ಹೇಳಿದರು. ಈ ವೇಳೆ ಆತಂಕದಿಂದ ನಾನು ಅಲ್ಲಿಂದ ಓಡಿ ಹೋದೆ’ ಎಂದು ಮಿನು ಹೇಳಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ‘ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಸದಸ್ಯತ್ವ ಕೋರಿದ್ದ ವೇಳೆ ಇಡವೇಲು ಬಾಬು ಅರ್ಜಿ ಸಲ್ಲಿಸುವ ನೆಪದಲ್ಲಿ ನನ್ನನ್ನು ಮನೆಗೆ ಆಹ್ವಾನಿಸಿ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು. ಇನ್ನು ಖ್ಯಾತ ನಟ ಮುಕೇಶ್‌ ಕೂಡಾ ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸಿದರೆ ಮಾತ್ರವೇ ಸಂಘದ ಸದಸ್ಯತ್ವ ನೀಡುವುದಾಗಿ ಹೇಳಿ ನನಗೆ ಸದಸ್ಯತ್ವ ನಿರಾಕರಿಸಿದ್ದರು. ಮಣಿಯನ್‌ಪಿಲ್ಲಾ ರಾಜು ಕೂಡಾ ನನ್ನನ್ನು ಶೋಷಿಸಿದ್ದರು. ಈ ಘಟನೆಯಿಂದ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದಿದ್ದೇನೆ. ನನಗೆ ಈ ವಿಷಯದಲ್ಲಿ ನ್ಯಾಯ ಸಿಗಬೇಕು’ ಎಂದು ಮೀನು ಒತ್ತಾಯಿಸಿದ್ದಾರೆ.

ನ್ಯಾ.ಹೇಮಾ ಸಮಿತಿ ವರದಿಯಲ್ಲಿ ಸ್ಫೋಟಕ ಆರೋಪಗಳ ಕುರಿತು ತನಿಖೆ ನಡೆಸಲು ಕೇರಳ ಸರ್ಕಾರ ಈಗಾಗಲೇ 7 ಜನರ ವಿಶೇಷ ತನಿಖಾ ತಂಡ ರಚಿಸಿದೆ.

ಕಿರುಕುಳ ಸಹಿಸಲಾಗದೆ ಕೇರಳವನ್ನೇ ತೊರೆದೆ 

ಹಾಲಿ ಸಿಪಿಎಂ ಶಾಸಕರಾಗಿರುವ ನಟ ಮುಕೇಶ್‌, ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು ಮತ್ತು ಇಡವೇಲು ಬಾಬು 2013ರಲ್ಲಿ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು. ಅವರೊಂದಿಗೆ ಸಹಕರಿಸಿ ನಾನು ಕೆಲಸ ಮುಂದುವರಿಸಿದ್ದೆ. ಆದರೂ ಅವರ ಕಿರುಕುಳ ಹೆಚ್ಚಾದ್ದರಿಂದ ಮಲಯಾಳ ಚಿತ್ರರಂಗಕ್ಕೆ ವಿದಾಯ ಹೇಳಿ ಚೆನ್ನೈಗೆ ಹೋಗಿಬಿಟ್ಟೆ.

ಮಿನು ಮುನೀರ್‌, ನಟಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ